newsfirstkannada.com

ಮಣಿಪುರದ ಮಹಿಳೆಯರ ವಿವಸ್ತ್ರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌: 48 ದಿನದ ಬಳಿಕ ದುರುಳರ ಬಂಧನ

Share :

20-07-2023

    ಮಹಿಳೆಯರ ಬೆತ್ತಲೆಗೊಳಿಸಿದ ಅಮಾನುಷ ವಿಡಿಯೋ ವೈರಲ್

    ಸಾಮೂಹಿಕ ಅತ್ಯಾಚಾರಗೈದು, ಬಳಿಕ ಮೆರವಣಿಗೆ ಮಾಡಿದ್ದರು

    ಮಹಿಳೆಯನ್ನು ಹಿಡಿದುಕೊಂಡು ಹೋಗಿದ್ದ ಕಿರಾತಕನ ಬಂಧನ

ಮಣಿಪುರದಲ್ಲಿ ಮಹಿಳೆಯರ ಬೆತ್ತಲೆಗೊಳಿಸಿದ ಅಮಾನುಷ ವಿಡಿಯೋ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ತೀವ್ರ ಟೀಕೆಗಳು ವ್ಯಕ್ತವಾದವು. ಈ ಘಟನೆಯಿಂದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಆಗಿತ್ತು.
ಕಳೆದ ಮೇ 4ರಂದು ಮಣಿಪುರದಲ್ಲಿ ನಡೆದಿದೆ ಎನ್ನಲಾದ ಈ ವಿಡಿಯೋದಲ್ಲಿ ಯುವತಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರಗೈದು, ಬಳಿಕ ಮೆರವಣಿಗೆ ಮಾಡಲಾಗಿತ್ತು. ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ 19 ವರ್ಷದ ಯುವತಿ ಕುಕಿ ಸಮುದಾಯಕ್ಕೆ ಸೇರಿದವಳು ಎನ್ನಲಾಗಿತ್ತು.

ಮಣಿಪುರದಲ್ಲಿ ಮಹಿಳೆಯರ ಬೆತ್ತಲೆಗೊಳಿಸಿದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 48 ದಿನದ ಬಳಿಕ FIR ದಾಖಲು ಮಾಡಲಾಗಿದೆ. ಮಹಿಳೆಯನ್ನು ಹಿಡಿದುಕೊಂಡಿದ್ದ ಹೋಗಿದ್ದ ಓರ್ವ ಆರೋಪಿ ಹುಯಿರೆಮ್ ಹೀರೋದಾಸ್ ಮೈತಿಯಿ ಎಂಬುವವರನ್ನು ಬಂಧಿಸಲಾಗಿದೆ. ವಿಡಿಯೋದಲ್ಲಿದ್ದ ವ್ಯಕ್ತಿಯ ಬಗ್ಗೆ ಪರಿಶೀಲಿಸಿ ಇಂದು ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಮೂವರು ಮಹಿಳೆಯರ ವಿವಸ್ತ್ರಗೊಳಿಸಿದರು..19 ವರ್ಷದ ಯುವತಿ ಮೇಲೆ ಗ್ಯಾಂಗ್ ರೇಪ್.. ಬಳಿಕ ನಗ್ನಸ್ಥಿತಿಯಲ್ಲಿ ಮೆರವಣಿಗೆ ಮಾಡಿ ವಿಕೃತಿ

ಇನ್ನು, ಈ ಘಟನೆ ಖಂಡಿಸಿ ಮಣಿಪುರದ ಚುರಾಚಂದಾಪುರದಲ್ಲಿ ಕುಕಿ ಸಮುದಾಯದಿಂದ ತೀವ್ರ ಪ್ರತಿಭಟನೆ ನಡೆಸಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಪ್ರತಿಭಟನಾಕಾರರು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕುಕಿ ಸಮುದಾಯದ ಮಹಿಳೆಯರ ಮೇಲೆ ನಡೆದಿರುವ ದೌರ್ಜನ್ಯ ಮತ್ತೆ ಮಣಿಪುರದ ವಾತಾವರಣ ಉದ್ವಿಗ್ನವಾಗುವಂತೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಣಿಪುರದ ಮಹಿಳೆಯರ ವಿವಸ್ತ್ರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌: 48 ದಿನದ ಬಳಿಕ ದುರುಳರ ಬಂಧನ

https://newsfirstlive.com/wp-content/uploads/2023/07/Manipura-Arrest.jpg

Load More