newsfirstkannada.com

ISRO: ಚಂದ್ರಯಾನ 3 ಬಳಿಕ ‘ಸೂರ್ಯ’ಶಿಕಾರಿ; ಇಸ್ರೋ ‘ಆದಿತ್ಯ’ಯಾನ L1 ಸ್ಯಾಟಲೈಟ್ ಉಡಾವಣೆ ಯಾವಾಗ?

Share :

14-08-2023

  ಚಂದ್ರಯಾನದ ಬೆನ್ನಲ್ಲೇ ಇಸ್ರೋ ಮತ್ತೊಂದು ಮೈಲಿಗಲ್ಲು

  ಬೆಂಗಳೂರಿನ U.R ರಾವ್ ಸ್ಯಾಟಲೈಟ್ ಕೇಂದ್ರದಲ್ಲಿ ತಯಾರು

  PSLV-C57 ಅಥವಾ ಆದಿತ್ಯ L1 ಸ್ಯಾಟಲೈಟ್‌ ವಿಶೇಷತೆ ಏನು?

ಬೆಂಗಳೂರು: ಚಂದ್ರಯಾನ 3 ಮೂಲಕ ಚಂದ್ರನಿಗೆ ಮತ್ತಷ್ಟು ಹತ್ತಿರವಾಗಿದೆ. ಇದೇ ಆಗಸ್ಟ್ 23ರಂದು ಚಂದ್ರಯಾನ 3 ಚಂದ್ರನ ಅಂಗಳದಲ್ಲಿ ಇಳಿಯಲಿದೆ. ಈ ಚಂದ್ರಯಾನದ ಬೆನ್ನಲ್ಲೇ ಇಸ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಲು ಮುಂದಾಗಿದೆ. ಚಂದ್ರಯಾನ-3ರ ಬಳಿಕ ಸೂರ್ಯನ ಅಧ್ಯಯನಕ್ಕೆ ಇಸ್ರೋ ನಿರ್ಧಾರ ಮಾಡಿದೆ. ಸೂರ್ಯನ ಶಕ್ತಿಶಾಲಿ ಕಿರಣಗಳನ್ನು ಅಧ್ಯಯನ ಮಾಡಲು ಇಸ್ರೋ ಆದಿತ್ಯ ಅನ್ನೋ ಉಪಗ್ರಹವನ್ನು ಕಳುಹಿಸಲು ರೆಡಿಯಾಗಿದೆ. PSLV-C57 ಅಥವಾ ಆದಿತ್ಯ L1 ಸ್ಯಾಟಲೈಟ್‌ ಉಡಾವಣೆ ಸಜ್ಜಾಗುತ್ತಿದೆ. ಇಸ್ರೋ ಇವತ್ತು ಆದಿತ್ಯ-L1 ಮಿಷನ್ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದೆ.

ಇದನ್ನೂ ಓದಿ: ಹೊಸ ಅಪ್​​ಡೇಟ್​ ಕೊಟ್ಟ ಇಸ್ರೋ.. ಕೇವಲ 177 ಕಿಲೋ ಮೀಟರ್ ದೂರದಲ್ಲಿ ಚಂದ್ರಯಾನ-3 ನೌಕೆ

ಸೂರ್ಯನ ಕಡೆ ಉಡಾವಣೆಗೆ ಸಿದ್ಧವಾಗುತ್ತಿರೋ ಆದಿತ್ಯ-L1 ಮಿಷನ್‌ಗೆ ಬುನಾದಿ ಹಾಕಿದ್ದೇ ಬೆಂಗಳೂರಿನಲ್ಲಿ. ಬೆಂಗಳೂರಿನ ಯು.ಆರ್.ರಾವ್ ಸ್ಯಾಟಲೈಟ್ ಕೇಂದ್ರದಲ್ಲಿ ಆದಿತ್ಯ-L1 ಸಿದ್ಧಪಡಿಸಿರೋದು ಕನ್ನಡಿಗರಿಗೆ ಮತ್ತೊಂದು ವಿಶೇಷ. ಆದಿತ್ಯ-L1 ಸ್ಯಾಟಲೈಟ್‌ ಅನ್ನು ಆಂಧ್ರದ ಶ್ರೀಹರಿಕೋಟಾದ ಬಾಹ್ಯಾಕಾಶ ಉಡಾವಣಾ ಕೇಂದ್ರಕ್ಕೆ ರವಾನೆ ಮಾಡಲಾಗಿದೆ. ಇದೇ ಆಗಸ್ಟ್ ಅಂತ್ಯ ಇಲ್ಲವೇ ಸೆಪ್ಟೆಂಬರ್ ಪ್ರಾರಂಭದಲ್ಲಿ PSLV-C57 ಅಥವಾ ಆದಿತ್ಯ L1 ಸ್ಯಾಟಲೈಟ್‌ ಉಡಾವಣೆ ಆಗಲಿದೆ.

‘ಚಂದ್ರಯಾನದ ಬಳಿಕ ಸೂರ್ಯಶಿಕಾರಿ’
PSLV-C57 ಅಥವಾ ಆದಿತ್ಯ L1 ಸ್ಯಾಟಲೈಟ್‌ ಸೂರ್ಯನನ್ನು ಅಧ್ಯಯನ ಮಾಡುವ ಇಸ್ರೋದ ಮೊದಲ ಕಾರ್ಯಾಚರಣೆ. ಈ ಉಪಗ್ರಹದ ತೂಕ 1500 ಕೆಜಿ. ಇದು ಭೂಮಿಯಿಂದ ಸೂರ್ಯನ ಕಡೆ 15 ಲಕ್ಷ ಕಿಲೋ ಮೀಟರ್ ದೂರ ತಲುಪಲಿದೆ. ಲಾಗ್ರೇಂಜ್ ಪಾಯಿಂಟ್ 1ರ ಕಕ್ಷಯಲ್ಲಿ ನಿಂತು ಸೂರ್ಯನನ್ನು ಅಧ್ಯಯನ ಮಾಡಲಿದೆ. ಇದರಿಂದ ಸೋಲಾರ್ ಕರೋನಾ, ಸೋಲಾರ್ ಎಮಿಷನ್, ಕರೊನಾಲ್ ಮಾಸ್ ಎಜೆಕ್ಷನ್ ಬಗ್ಗೆ ಅಧ್ಯಯನ ಮಾಡಲಾಗುತ್ತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ISRO: ಚಂದ್ರಯಾನ 3 ಬಳಿಕ ‘ಸೂರ್ಯ’ಶಿಕಾರಿ; ಇಸ್ರೋ ‘ಆದಿತ್ಯ’ಯಾನ L1 ಸ್ಯಾಟಲೈಟ್ ಉಡಾವಣೆ ಯಾವಾಗ?

https://newsfirstlive.com/wp-content/uploads/2023/08/isro-1.jpg

Load More