ಮಾನವರಂತೆ ಮಂಗಗಳು ಕೂಡ ಹೆಸರಿಡುವ ಕಲೆಯನ್ನು ಅರಿತಿವೆಯಂತೆ
ಜೆರುಸೆಲಂನ ಆ ವಿಶ್ವವಿದ್ಯಾಲಯ ಬಹಿರಂಗಗೊಳಿಸಿದೆ ಅಚ್ಚರಿಯ ಮಾಹಿತಿ
ಡೆವಿಡ್ ಓಮರ್ ನಡೆಸಿದ ಸಂಶೋಧನೆಯಲ್ಲಿ ಇರುವ ಅಂಶಗಳೇನು ಗೊತ್ತಾ
ಟೆಲ್ ಅವಿವ್: ಮನುಷ್ಯರಲ್ಲಿ ಒಬ್ಬರನೊಬ್ಬರು ಪರಿಚಯ ಮಾಡಿಕೊಳ್ಳುವುದೇ ತಮ್ಮ ಹೆಸರಿನ ಮೂಲಕ. ಹೆಸರು ನಮ್ಮ ಬದುಕಿನ ಒಂದು ಅನನ್ಯ ಗುರುತು, ಪ್ರತಿ ಯಶಸ್ಸಿಗೂ ಕೂಡ ಹೆಸರು ಮಾಡೋದು ಅಂತನೇ ಅಂತೀವಿ. ಹಾಗೆ ಮನುಷ್ಯನು ಒಬ್ಬರನ್ನು ಗುರಿತಿಸೋದು, ಕರೆಯುವುದು, ಹೇಳಿಕೊಳ್ಳುವುದು ಹೆಸರಿನ ಮೂಲಕವೇ. ಪ್ರತಿ ಸಂವಹನವು ಕೂಡ ಹೆಸರಿಡಿದು ಕೂಗುವುದರಿಂದಲೇ ಆಗುತ್ತದೆ. ಜೀವ ಜಗತ್ತಿನಲ್ಲಿ ಇದು ಕೇವಲ ಮನುಷ್ಯನಿಂದಲೇ ಸಾಧ್ಯ ಎನ್ನುವ ಒಂದು ಭ್ರಮೆ ಇದೆ. ಆದ್ರೆ ಅದು ಸುಳ್ಳು ಎಂಬುದು ಈಗ ಅನೇಕ ಸಂಶೋಧನೆಗಳಿಂದ ಪ್ರಮಾಣೀತವಾಗಿದೆ.
ಇದನ್ನೂ ಓದಿ:‘ಲವ್ ಮಾಡಲು ಹುಡುಗಿ ಸಿಕ್ಕಿಲ್ಲ, ನಾನು ಸಾಯ್ತೀನಿ’ ಎಂದು ಯುವಕ ನಾಪತ್ತೆ; ಆಮೇಲೇನಾಯ್ತು?
ಮಂಗ ಮತ್ತು ಆನೆಗಳು ಸಂವಹನ ಮಾಡಬೇಕಾದ್ರೆ ಒಂದೊಕ್ಕೊಂದು ಹೆಸರಿಟ್ಟುಕೊಂಡು ಸಂವಹನ ಮಾಡುತ್ತವೆ ಎಂಬ ಒಂದು ಸಂಶೋಧನೆ ಈಗ ಬಹಿರಂಗಗೊಳಿಸಿದೆ. ಜೆರುಸೆಲಂನ ಹೆಬ್ರಿವ್ ವಿಶ್ವವಿದ್ಯಾಲಯ ಇಂತಹದೊಂದು ಸಂಶೋಧನೆ ಮಾಡಿದೆ. ಅದು ಬಿಡುಗಡೆ ಮಾಡಿರುವ ಜರ್ನಲ್ ಸೈನ್ಸ್ನಲ್ಲಿ ಈ ಒಂದು ಅಂಶ ಗೊತ್ತಾಗಿದೆ. ಆನೆಗಳು ಮತ್ತು ಆಫ್ರಿಕಾದ ಆನೆಗಳು ಹಾಗೂ ಮರ್ಮೊಸೆಟ್ ಜಾತಿಯ ಮಂಗಗಳು ತಮ್ಮ ಸಂವಹನಕ್ಕಾಗಿ ಹೆಸರಿಡಿದು ಕರೆಯುತ್ತವೆ ಎಂದು ಡೆವಿಡ್ ಓಮರ್ ಎಂಬ ಜೇರುಸೇಲಂನ ಹೆಬ್ರಿವ್ ಯುನಿವರ್ಸಿಟಿಯ ಸಂಶೋಧಕ ಈ ಒಂದು ಅಂಶವನ್ನು ಬಹಿರಂಗಗೊಳಿಸಿದ್ದಾರೆ.
ಇದನ್ನೂ ಓದಿ:ಅಮೆರಿಕಾದಲ್ಲಿ ಸಂಭ್ರಮದ ಅಕ್ಕ ವಿಶ್ವ ಸಮ್ಮೇಳನ; ವರ್ಜಿನಿಯಾದಲ್ಲಿ ಹೇಗಿದೆ ಕನ್ನಡ ಕಲರವ?
ಅವರು ಹೇಳುವ ಪ್ರಕಾರ ಕಂಪ್ಯೂಟರ್ ಸಿಸ್ಟಮ್ ಮೂಲಕ ಈ ಒಂದು ಅಧ್ಯಯನ ಕೈಗೊಳ್ಳಲಾಗಿದೆ.ಇದರ ಪ್ರಕಾರ ಮರ್ಮೊಸೆಟ್ ಜಾತಿಯ ಮಂಗಗಳು ಒಬ್ಬನೊಬ್ಬರು ಸಂವಹನ ಮಾಡುವಾಗ ಪ್ರಮುಖವಾಗಿ ಜೋಡಿಗಳು ಅವುಗಳ ಸಾಮಾನ್ಯ ಭಾಷೆಯಾದ ಪೀಕಾಲ್ಸ್ನಲ್ಲಿ ಹೆಸರುಗಳ ಮೂಲಕ ಕರೆದಾಗ ಪ್ರತಿಕ್ರಿಯಿಸುತ್ತವೆ ಎಂದು ಹೇಳಲಾಗಿದೆ. ಇಲ್ಲಿಯವರೆಗೂ ಈ ಒಂದು ಗುಣ ಮನುಷ್ಯರು, ಡಾಲ್ಫಿನ್ಸ್ ಹಾಗೂ ಆನೆಗಳಲ್ಲಿ ಮಾತ್ರ ಇವೆ ಎಂದು ಹೇಳಲಾಗುತ್ತಿತ್ತು. ಹೊಸ ಅಧ್ಯಯನ ಪ್ರಕಾರ ಈಗ ಮಾರ್ಮೊಸೆಟ್ ಜಾತಿಯ ಮಂಗಗಳು ಕೂಡ ಒಂದಕ್ಕೊಂದು ಸಂವಹನವನ್ನು ನಡೆಸಲು ಹೆಸರನ್ನುಬಳಸುತ್ತವೆ ಎಂದು ಈ ಮೂಲಕ ಸಾಬೀತಾಗಿದೆ ಎಂದು ಡೆವಿಡ್ ಓಮರ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ