newsfirstkannada.com

170ನೇ ಸಿನಿಮಾದತ್ತ ರಜಿನಿಕಾಂತ್​.. ತಲೈವಾಗೆ ಸಾಥ್​ ಕೊಡಲಿದ್ದಾರೆ ಮಾಲಿವುಡ್​, ಬಾಲಿವುಡ್​ನ ಈ ಖ್ಯಾತ​ ನಟರು

Share :

26-08-2023

    ಜ್ಞಾನವೇಲ್​ ಜೊತೆ ಸಿನಿಮಾ ಮಾಡೋದು ಕನ್ಫರ್ಮ್

    ತಲೈವಾ 170 ಚಿತ್ರಕ್ಕೆ ಬಿಗ್ ಸೂಪರ್​ ಸ್ಟಾರ್ ಎಂಟ್ರಿ

    ಲೈಕಾ ಪ್ರೊಡಕ್ಷನ್ ಈ ಚಿತ್ರಕ್ಕೆ ಬಂಡವಾಳ ಹಾಕ್ತಿದೆ

ರಜಿನಿಕಾಂತ್ ಕಾಲ ಮುಗಿದೇ ಹೋಯ್ತು. ರಜಿನಿ ಮುಂದೆ ಸಿನಿಮಾ ಮಾಡಿದ್ರೆ ದುಡ್ಡು ವಾಪಸ್ ಬರಲ್ಲ ಅನ್ನೋ ಟೀಕೆಗಳ ಮಧ್ಯೆ ಈಗ ಜೈಲರ್​ ಬಾಕ್ಸಾಫೀಸ್ ದಾಖಲೆ ಬರೆದಿದೆ. ತಲೈವಾಗೆ ಮತ್ತೆ ಬೇಡಿಕೆ ಹೆಚ್ಚಾಗಿದೆ. ಪ್ರೊಡ್ಯೂಸರ್ಸ್​ ಕಾಲ್​ಶೀಟ್​ಗಾಗಿ ಮತ್ತೆ ಅಖಾಡಕ್ಕಿಳಿದ್ದಾರೆ. ಹಾಗಾದ್ರೆ ತಲೈವಾ ಮುಂದಿನ ಸಿನಿಮಾ ಯಾವುದು? ಹೇಗಿರುತ್ತೆ? ಇಲ್ಲಿದೆ ಮಾಹಿತಿ.

ಜೈಲರ್ ಸಿನಿಮಾ ನಂತರ ಸೂಪರ್​ ರಜಿನಿಕಾಂತ್​ ಹವಾ ಜೋರಾಗಿದೆ. ಸಿನಿಮಾ ಪ್ರಪಂಚದಲ್ಲಿ ರಜಿನಿ ಮೇನಿಯಾ ಮುಗಿತು ಅಂತ ಅಂದ್ಕೊಂಡಿದ್ದವರಿಗೆ ಜೈಲರ್​ ಬಿಗ್​ ಸರ್ಪ್ರೈಸ್​ ಕೊಟ್ಟಿದೆ.

ಹೌದು, ಜೈಲರ್ ಸಿನಿಮಾ ಬಾಕ್ಸಾಫೀಸ್​ ಧೂಳೆಬ್ಬಿಸಿದೆ. ಕಳೆದ ಹದಿಮೂರು ವರ್ಷದಲ್ಲಿ ರಜಿನಿಕಾಂತ್ ಪಾಲಿಗೆ ಜೈಲರ್ ಅತಿ ದೊಡ್ಡ ಸಕ್ಸಸ್​ ತಂದಿದೆ. ಆವರೇಜ್, ಪ್ಲಾಫ್​ ಸಿನಿಮಾಗಳ ಮಧ್ಯೆ ಜೈಲರ್ ಭರ್ಜರಿ ವಿಜಯ ಸಾಧಿಸಿದೆ. ಕೇವಲ ಎರಡು ವಾರದಲ್ಲಿ 600 ಕೋಟಿ ಬಾಚಿರುವ ಜೈಲರ್​ ಭಾರಿ ಪರಾಕ್ರಮ ಮೆರೆದಿದೆ.

ತಲೈವಾ ಈಸ್ ಬ್ಯಾಕ್.. ರಜಿನಿಕಾಂತ್​ ಹವಾ ಜೋರು!

2010ರಲ್ಲಿ ತೆರೆಗೆ ಬಂದಿದ್ದ ‘ಎಂಥಿರನ್’ ಸಿನಿಮಾ ರಜಿನಿ ಪಾಲಿಗೆ ದೊಡ್ಡ ಯಶಸ್ಸು ಕೊಟ್ಟಿತ್ತು. ಅದಾದ ಬಳಿಕ ಬಂದ ಚಿತ್ರಗಳೆಲ್ಲವೂ ಆವರೇಜ್​ ಎನಿಸಿಕೊಳ್ತೇ ಹೊರತು ಮ್ಯಾಜಿಕ್ ಮಾಡುವಲ್ಲಿ ಸಫಲವಾಗಿರಲಿಲ್ಲ. ಕಬಾಲಿ, ಕಾಲ, ಪೇಟಾ, ದರ್ಬಾರ್, ಅಣ್ಣಾತ್ತೆ, 2.0 ಚಿತ್ರಗಳು ಹಾಕಿದ ಬಂಡವಾಳ ತಂದುಕೊಟ್ಟಿದ್ದೇ ದೊಡ್ಡ ನಿರಾಳ. ಹಾಗಾಗಿ ರಜಿನಿಸಂ ಮುಗಿತು. ಇನ್ಮುಂದೆ ತಲೈವಾ ಸಿನಿಮಾ ಮಾಡದೇ ಇರುವುದು ಒಳ್ಳೆಯದೇ ಅನ್ನೋ ಮಾತುಗಳು ಕೇಳಿಬಂತು.. ರಜಿನಿ ಜೊತೆ ಸಿನಿಮಾ ಮಾಡೋಕೆ ನಿರ್ಮಾಪಕರು ಯೋಚನೆ ಮಾಡೋಥರಾ ಆಯ್ತು. ಆದರೆ ಟೀಕೆಗಳಿಗೆ ತಲೆಕೆಡಿಸಿಕೊಳ್ಳದ ರಜಿನಿ ಹೊಸ ಹೊಸ ಡೈರೆಕ್ಟರ್ಸ್​ಗೆ ಅವಕಾಶ ಕೊಟ್ಟರು. ಹೊಸ ಶೈಲಿಯ ಪ್ರೆಸೆಂಟೇಶನ್​ ಒತ್ತು ನೀಡಿದರು. ಅದ್ರ ಪರಿಣಾಮವೇ ಈಗ ಜೈಲರ್ ಮೂಲಕ​ ಬಿಗ್ ಬ್ರೇಕ್ ಸಿಕ್ಕಿದೆ.

ಜೈಲರ್ ಸಿನಿಮಾದ ಸಕ್ಸಸ್ ರಜಿನಿಕಾಂತ್​ಗೆ ಇನ್ನಷ್ಟು ಎನರ್ಜಿ ಕೊಟ್ಟಿದೆ. ರಜಿನಿ ಜೊತೆ ಸಿನಿಮಾ ಮಾಡ್ಬೇಕು ಅನ್ನೋ ಡೈರೆಕ್ಟರ್ ಪ್ರೊಡ್ಯೂಸರ್​​ಗೆ ಕಾನ್ಫಿಡೆನ್ಸ್​ ತುಂಬಿದೆ. ಹಾಗಾಗಿ, ತಲೈವಾ ಮಾಡಲಿರುವ ಮುಂದಿನ ಚಿತ್ರಗಳ ಮೇಲೆ ಸಹಜವಾಗಿ ಎಕ್ಸ್​ಪೆಕ್ಟೇಶನ್​ ಜಾಸ್ತಿ ಆಗಿದೆ. ಹಾಗಾದ್ರೆ ರಜಿನಿ ಮಾಡೋ ನೆಕ್ಸ್ಟ್​ ಸಿನಿಮಾ ಯಾವುದು? ಯಾವ ಥರಾ ಸಿನಿಮಾ ಮಾಡ್ತಾರೆ? ಯಾವ ನಿರ್ದೇಶಕರ ಜೊತೆ ಸಿನಿಮಾ ಮಾಡ್ತಾರೆ ಅನ್ನೋದಕ್ಕೆ ಉತ್ತರ ಇಲ್ಲಿದೆ ನೋಡಿ.

ತಲೈವಾ ಹೊಸ ಚಿತ್ರ ಫಿಕ್ಸ್.. ‘ಜೈ-ಭೀಮ್​’ ಡೈರೆಕ್ಟರ್​ ಆ್ಯಕ್ಷನ್ ಕಟ್!

ಜೈಲರ್ ನಂತರ ರಜಿನಿಕಾಂತ್ ‘ಜೈ ಭೀಮ್’ ಡೈರೆಕ್ಟರ್ ಜ್ಞಾನವೇಲ್​ ಜೊತೆ ಸಿನಿಮಾ ಮಾಡೋದು ಕನ್ಫರ್ಮ್ ಆಗಿದೆ. ಇದು ತಲೈವಾ ನಟಿಸಲಿರುವ 170ನೇ ಚಿತ್ರವಾಗಿದ್ದು, ಲೈಕಾ ಪ್ರೊಡಕ್ಷನ್ ಈ ಚಿತ್ರಕ್ಕೆ ಬಂಡವಾಳ ಹಾಕ್ತಿದೆ. ಈಗಾಗ್ಲೇ ಅಫಿಶಿಯಲ್ ಆಗಿ ಸಿನಿಮಾನೂ ಅನೌನ್ಸ್ ಆಗಿದ್ದು, ಪ್ರೂರ್ವ ತಯಾರಿ ನಡೀತಿದೆಯಂತೆ. ಚೆನ್ನೈನಲ್ಲಿ ಚಿತ್ರದ ಸೆಟ್​ವರ್ಕ್​ ಆರಂಭವಾಗಿದ್ದು, ಶೀಘ್ರದಲ್ಲೇ ಚಿತ್ರದ ಮುಹೂರ್ತ ಮಾಡುವ ಯೋಜನೆಯಲ್ಲಿದ್ದಾರಂತೆ.

ರಜಿನಿ ಎದುರು ವಿಲನ್ ಆಗಿ ಅಬ್ಬರಿಸಲಿದ್ದಾರೆ ಸ್ಟಾರ್ ನಟ!

ಸದ್ಯಕ್ಕೆ ರಜಿನಿ ಮಾಡಲಿರುವ ಹೊಸ ಚಿತ್ರಕ್ಕೆ ಕಥೆ ಫಿಕ್ಸ್​ ಆಗಿದೆ. ಡೈರೆಕ್ಟರ್ ಫಿಕ್ಸ್​ ಆಗಿದ್ದಾರೆ. ಪೂರ್ವ ಸಿದ್ಧತೆನೂ ಆರಂಭವಾಗಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ ಇದೇ ತಿಂಗಳು ಚಿತ್ರದ ಪೂಜೆನೂ ನಡೆಯಲಿದ್ದು, ಸೆಪ್ಟೆಂಬರ್ ತಿಂಗಳಿಂದ ಶೂಟಿಂಗ್ ಶುರು ಮಾಡುವ ಲೆಕ್ಕಾಚಾರದಲ್ಲಿದೆಯಂತೆ. ಈ ನಡುವೆ ರಜಿನಿ ಚಿತ್ರದಲ್ಲಿ ಯಾರೆಲ್ಲಾ ಆ್ಯಕ್ಟ್​ ಮಾಡಲಿದ್ದಾರೆ ಎಂಬ ಬಿಗ್ ಸರ್ಪ್ರೈಸ್​ ಹೊರಬಿದ್ದಿದೆ. ಹೌದು, 170ನೇ ಸಿನಿಮಾದಲ್ಲಿ ಸೂಪರ್​ಸ್ಟಾರ್​ ಎದುರು ಮಲಯಾಳಂನ ಮಲ್ಟಿಟ್ಯಾಲೆಂಟೆಂಡ್​​ ಆ್ಯಕ್ಟರ್ ಫಾಹದ್ ಫಾಸಿಲ್​ ನಟಿಸ್ತಿದ್ದಾರಂತೆ.

ಹೌದು, ಪುಷ್ಪ, ಮಾಮಣ್ಣನ್, ವಿಕ್ರಮ್ ಹೀಗೆ ಸಾಲು ಸಾಲು ಹಿಟ್ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರನ್ನ ಕಾಡ್ತಿರುವ ಫಾಹದ್ ಫಾಸಿಲ್, ರಜಿನಿ ಎದುರು ಖಡಕ್ ವಿಲನ್ ಆಗಿ ಅಬ್ಬರಿಸಲಿದ್ದಾರಂತೆ. ತಲೈವಾಗೆ ಟಕ್ಕರ್ ಕೊಡೋ ಕ್ಯಾರೆಕ್ಟರ್​ನಲ್ಲಿ ಮಿಂಚಲಿದ್ದಾರಂತೆ.. ಹಾಗಾಗಿ ಈ ಕಾಂಬಿನೇಷನ್​ ಮೇಲೆ ಈಗಿಂದಲೇ ಎಕ್ಸ್​ಪೆಕ್ಟೇಶನ್ ಜಾಸ್ತಿ ಆಗ್ತಿದೆ.

ಇನ್ನು ರಜಿನಿ 170ನೇ ಚಿತ್ರದ ಮತ್ತೊಂದು ಸ್ಪೆಷಲ್ ಎಂಟ್ರಿ ಅಂದ್ರೆ ಬಾಲಿವುಡ್​ ಬಿಗ್​ ಬಿ ಅಮಿತಾಭ್ ಬಚ್ಚನ್. ಜ್ಞಾನವೇಲ್ ನಿರ್ದೇಶಿಸಲಿರುವ ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಸಹ ಪ್ರಮುಖ ಪಾತ್ರದಲ್ಲಿ ನಟಿಸುವ ಸಾಧ್ಯತೆ ಇದೆಯಂತೆ. ಇವರ ಜೊತೆ ಮಲಯಾಳಂ ನಟಿ ಮಂಜು ವಾರಿಯರ್ ಸಹ ಕಲಾವಿದರ ಬಳಗಕ್ಕೆ ಸೇರಿಕೊಳ್ಳುವ ಬಗ್ಗೆ ಸುದ್ದಿ ಹಬ್ಬಿದೆ.

ಮಗಳ ಚಿತ್ರದ ಮೇಲೆ ಹೆಚ್ಚಿದ ನಿರೀಕ್ಷೆ!

ಜೈಲರ್ ಸಕ್ಸಸ್​ನಿಂದ ಐಶ್ವರ್ಯ ನಿರ್ದೇಶನ ಮಾಡಿರುವ ‘ಲಾಲ್ ಸಲಾಮ್’ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈ ಚಿತ್ರದಲ್ಲಿ ಸೂಪರ್ ಸ್ಟಾರ್​ ಅತಿಥಿ ಪಾತ್ರ ಮಾಡಿದ್ದು, ತಲೈವಾ ಎಂಟ್ರಿ ಹೇಗಿರಲಿದೆ ಎನ್ನುವ ಕುತೂಹಲ ಕಾಡ್ತಿದೆ. ಒಂದು ವೇಳೆ ‘ಲಾಲ್​ ಸಲಾಮ್’​ ಚಿತ್ರದಲ್ಲಿ ರಜಿನಿ ಎಂಟ್ರಿ ವರ್ಕೌಟ್​ ಆಯ್ತು ಅಂದ್ರೆ ಈಗಿರುವ ಟ್ರೆಂಡ್​ಲ್ಲಿ ಲಾಲ್ ಸಲಾಮ್ ಆಟೋಮ್ಯಾಟಿಕ್​ ಆಗಿ ಸಕ್ಸಸ್​ ಆಗಿಬಿಡುತ್ತೆ ಅನ್ನೋ ಅಂದಾಜು. ಹಾಗಾಗಿ ಈಗಾಗಲೇ ಶೂಟಿಂಗ್ ಮುಗಿದಿರುವ ರಜಿನಿ ಪಾತ್ರದ ಕಡೆ ಎಲ್ಲರ ಚಿತ್ತ ಬಿದ್ದಿದೆ.

ಜೈಲರ್ ಸಿನಿಮಾದ ಗೆಲುವು ಈಗ ಸೂಪರ್​ಸ್ಟಾರ್​ಗೆ ದೊಡ್ಡ ಲಾಭ ತಂದುಕೊಟ್ಟಿದೆ. ರಜಿನಿ ಮುಂದೆ ಮಾಡಲಿರುವ ಚಿತ್ರಗಳ ಮೇಲೆ ಲೆಕ್ಕಾಚಾರ ಶುರುವಾಗಿದೆ. ಸದ್ಯಕ್ಕೆ ಜ್ಞಾನವೇಲ್ ಸಿನಿಮಾ ಪಕ್ಕಾ ಆಗಿದ್ದು, ವಕ್ರಮ್ ಖ್ಯಾತಿಯ ಲೋಕೇಶ್ ಕನಕರಾಜ್​, ಅಟ್ಲಿ ಜೊತೆನೂ ಸಿನಿಮಾ ಮಾಡುವ ಬಗ್ಗೆ ಚರ್ಚೆ ಆಗ್ತಿದೆಯಂತೆ.

ಜೈಲರ್ ಸಕ್ಸಸ್​ ಕಂಡಮೇಲೆ ಇಡೀ ಇಂಡಸ್ಟ್ರಿ ಮಾತಾಡ್ತಿರೋದು ಒಂದೇ. ತಲೈವಾ ಈಸ್ ಬ್ಯಾಕ್. ರಜಿನಿ ಸ್ಟಿಲ್​ ಇನ್ ರೇಸ್ ಅಂತ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

170ನೇ ಸಿನಿಮಾದತ್ತ ರಜಿನಿಕಾಂತ್​.. ತಲೈವಾಗೆ ಸಾಥ್​ ಕೊಡಲಿದ್ದಾರೆ ಮಾಲಿವುಡ್​, ಬಾಲಿವುಡ್​ನ ಈ ಖ್ಯಾತ​ ನಟರು

https://newsfirstlive.com/wp-content/uploads/2023/08/Rajinikant.jpg

Load More