newsfirstkannada.com

ಕಾಂತಾರ ಆದ್ಮೇಲೆ ರಿಷಬ್‌ ಶೆಟ್ಟಿ ಬಿಗ್‌ ಪ್ಲಾನ್‌; 200 ಕೋಟಿ ಬಜೆಟ್ ಸಿನಿಮಾಗೆ ಸ್ಟಾರ್ ಡೈರೆಕ್ಟರ್ ಯಾರು?

Share :

09-09-2023

    ಕಾಂತಾರ ಪ್ರೀಕ್ವೆಲ್ ಆದ್ಮೇಲೆ ಐತಿಹಾಸಿಕ ಚಿತ್ರಕ್ಕೆ ರಿಷಬ್ ಹೀರೋ!

    ಬಿಗ್ ಬಜೆಟ್.. ಪ್ಯಾನ್ ಇಂಡಿಯಾ ಸಿನಿಮಾಕ್ಕೆ ರಿಷಬ್ ಶೆಟ್ಟಿ ಪ್ಲಾನ್

    ರಿಷಬ್ ಶೆಟ್ಟಿಗೆ ಆ್ಯಕ್ಷನ್ ಕಟ್ ಹೇಳೋದು ಅಶುತೋಶ್ ಗೌರಿಕರ್

ಕಾಂತಾರ ಆದ್ಮೇಲೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಯ ಸ್ಟಾರ್​ಡಂ, ಅಭಿಮಾನಿ ಸಾಗರ ಗಡಿ ದಾಟಿ ಹೋಗಿದೆ. ರಿಷಬ್ ಶೆಟ್ಟಿ ಸಿನಿಮಾಗಳು ಅಂದ್ರೆ ಈಗ ಬರೀ ಕರ್ನಾಟಕದಲ್ಲಿ ಮಾತ್ರವಲ್ಲ ಹೊರ ರಾಜ್ಯಗಳಲ್ಲಿ, ಅಷ್ಟೇ ಯಾಕೆ ಹೊರ ದೇಶಗಳಲ್ಲಿರುವ ಸಿನಿಮಾ ಅಭಿಮಾನಿಗಳು ಕಾಯುವಂತಾಗಿದೆ. ಹಾಗಿದ್ರೆ ನಟ, ನಿರ್ದೇಶಕ ರಿಷಬ್ ಮುಂದಿನ ಸಿನಿಮಾ ಯಾವುದು ಅಂತ ನೋಡಿದ್ರೆ ಕಾಂತಾರ ಪ್ರೀಕ್ವೆಲ್ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷ್ಯನೇ. ಆದರೆ ನಿಮಗೆ ಯಾರಿಗೂ ಗೊತ್ತಿಲ್ಲದ ಮತ್ತೊಂದು ಬಿಗ್ ಪ್ರಾಜೆಕ್ಟ್​ ಬಗ್ಗೆ ಬಿಗ್ ಸಮಾಚಾರ ಇಲ್ಲಿದೆ ನೋಡಿ.

ಕಾಂತಾರ ಆದ್ಮೇಲೆ ಕಾಂತಾರ ಪ್ರಿಕ್ವೆಲ್​ನಲ್ಲಿ ರಿಷಬ್ ಶೆಟ್ಟಿ ಬ್ಯುಸಿಯಿದ್ದಾರೆ. ಈಗಾಗ್ಲೇ ಕಾಂತಾರ ಪ್ರೀಕ್ವೆಲ್​ನ ಪ್ರಿ-ಪ್ರೊಡಕ್ಷನ್ ಕೆಲಸ ಮುಗಿಸಿ ಅಧಿಕೃತವಾಗಿ ಸಿನಿಮಾ ಲಾಂಚ್ ಮಾಡೋ ಸಿದ್ಧತೆ ನಡೆದಿದೆ. ಎಲ್ಲವೂ ಅಂದುಕೊಂಡಂತೆ ಆದ್ರೆ ಅಕ್ಟೋಬರ್​ನಿಂದ ಕಾಂತಾರ ಪ್ರೀಕ್ವೆಲ್​ ಚಿತ್ರದ ಶೂಟಿಂಗ್ ಸಹ ಶುರುವಾಗಲಿದೆ. ಇದೀಗ ಈ ಸಿನಿಮಾ ಸ್ಟಾರ್ಟ್ ಆಗೋದಕ್ಕೂ ಮುಂಚೆನೇ ಈಗ ಪ್ಯಾನ್ ಇಂಡಿಯಾ ಪ್ರಾಜೆಕ್ಟ್​ ವಿಷಯ ಬಹಿರಂಗವಾಗಿದೆ.

ಡಿವೈನ್ ಸ್ಟಾರ್ ಸದ್ಯಕ್ಕೆ ಕಾಂತಾರ ಪ್ರೀಕ್ವೆಲ್ ಬಿಟ್ಟು ಬೇರೇನೂ ಯೋಚನೆ ಮಾಡ್ತಿಲ್ಲ. ಕಾಂತಾರದ ಶೂಟಿಂಗ್ ಯಾವಾಗ ಶುರು ಮಾಡಬೇಕು, ಎಲ್ಲಿಂದ ಸ್ಟಾರ್ಟ್ ಮಾಡ್ಬೇಕು.? ಅದಕ್ಕೆ ಹೇಗೆ ತಯಾರಾಗಬೇಕು ಅನ್ನೋದ್ರ ಮೇಲೆನೆ ಕೆಲಸ ಮಾಡ್ತಾ ಇದ್ದಾರೆ. ಕೆರಾಡಿ ಸುತ್ತಮುತ್ತವೇ ಕಾಂತಾರ ಶೂಟಿಂಗ್ ಮಾಡುವ ಉದ್ದೇಶವಿದ್ದು, ದಿನ ಬೆಳಗಾದ್ರೆ ಇದೇ ಕೆಲಸದಲ್ಲಿ ಶೆಟ್ರು ಬ್ಯುಸಿ ಇದ್ದಾರೆ. ಆದ್ರೀಗ ರಿಷಬ್ ಶೆಟ್ಟಿಯ ಬಾಲಿವುಡ್ ಸಿನಿಮಾದ ಬಗ್ಗೆ ವಿಷಯ ಸೋರಿಕೆಯಾಗಿದೆ. ಕಾಂತಾರ ಆದ್ಮೇಲೆ ರಿಷಬ್ ಶೆಟ್ಟಿ ಮಾಡೋ ಚಿತ್ರದ ಬಗ್ಗೆ ಎಕ್ಸ್​ಕ್ಲೂಸಿವ್ ವಿಚಾರ ಹೊರಬಿದ್ದಿದ್ದು, ಕುತೂಹಲ ಹೆಚ್ಚಾಗಿದೆ.

ರಿಷಬ್ ಶೆಟ್ಟಿ ಬಾಲಿವುಡ್​ ಎಂಟ್ರಿ ಫಿಕ್ಸ್​!
ಬಿಗ್ ಬಜೆಟ್.. ಪ್ಯಾನ್ ಇಂಡಿಯಾ ಸಿನಿಮಾ!

ರಿಷಬ್ ಶೆಟ್ಟಿ ಬಾಲಿವುಡ್​ಗೆ ಹೋಗೋದು ಪಕ್ಕಾ ಆಗಿದೆ. ಈಗಾಗಲೇ ಪ್ರೊಡಕ್ಷನ್ ಸಂಸ್ಥೆಯೂ ಫೈನಲ್ ಆಗಿದೆ. ಚಿತ್ರದ ಕಥೆಯೂ ಓಕೆ ಆಗಿದೆ. ಕಾಂತಾರ ಮುಗಿದ ತಕ್ಷಣ ಈ ಚಿತ್ರ ಅಫಿಷಿಯಲ್ ಆಗಿ ಶುರುವಾಗಲಿದೆಯಂತೆ. ಈ ಕುರಿತು ‘ಬಾಲಿವುಡ್​ ಹಂಗಾಮ’ ವೆಬ್​ಸೈಟ್​ ಎಕ್ಸ್​ಕ್ಲೂಸಿವ್​ ಆಗಿ ವರದಿ ಮಾಡಿದ್ದು, ರಿಷಬ್ ಶೆಟ್ಟಿಯ ಪ್ಯಾನ್ ಇಂಡಿಯಾ ಚಿತ್ರದ ಬಗ್ಗೆ ಇನ್ನಷ್ಟು ಇಂಟರೆಸ್ಟಿಂಗ್ ವಿಷ್ಯಗಳನ್ನ ಬಹಿರಂಗಪಡಿಸಿದೆ.

ಐತಿಹಾಸಿಕ ಚಿತ್ರಕ್ಕೆ ರಿಷಬ್ ಶೆಟ್ಟಿ ಹೀರೋ!
ಹಿಸ್ಟಾರಿಕ್ ಚಿತ್ರದ ಬಜೆಟ್​ ಎಷ್ಟು ಗೊತ್ತಾ?

ಕಾಂತಾರ ಪ್ರೀಕ್ವೆಲ್ ಆದ್ಮೇಲೆ ರಿಷಬ್ ಶೆಟ್ಟಿ ಐತಿಹಾಸಿಕ ಕಥೆಯಾಧರಿತ ಸಿನಿಮಾ ಮಾಡೋಕೆ ಮುಂದಾಗಿದ್ದಾರಂತೆ. ದಕ್ಷಿಣ ಭಾರತವನ್ನ ಆಳಿದ ರಾಜನೊಬ್ಬನ ಸತ್ಯ ಘಟನೆಯ ಬಗ್ಗೆ ಕಥೆ ಮಾಡಿದ್ದು, ಹಿಸ್ಟಾರಿಕ್ ಪಾತ್ರದಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರಂತೆ. ಇನ್ನು ಈ ಚಿತ್ರಕ್ಕೆ 150 ರಿಂದ 200 ಕೋಟಿ ಬಜೆಟ್ ಆಗಬಹುದು ಅಂತ ಅಂದಾಜಿಸಲಾಗಿದೆಯಂತೆ.

ಸದ್ಯ ರಿಷಬ್ ಶೆಟ್ಟಿ ಮಾಡೋಕೆ ಹೊರಟಿರುವ ಆ ಹಿಸ್ಟಾರಿಕ್ ಕಥೆ ಯಾವುದು? ಆ ದಕ್ಷಿಣ ಭಾರತದ ರಾಜಮನೆತನ ಯಾವುದು ಅನ್ನೋದ್ರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ ಇಂಥಹದೊಂದು ಕಥೆಯ ಮೇಲೆ ಚಿತ್ರತಂಡ ಅದಾಗಲೇ ಕೆಲಸ ಆರಂಭಿಸಿದೆಯಂತೆ. ಎಲ್ಲವೂ ಅಂದುಕೊಂಡಂತೆ ಆದ್ರೆ 2024ಕ್ಕೆ ಈ ಸಿನಿಮಾ ಸ್ಟಾರ್ಟ್ ಮಾಡಿ 2025ಕ್ಕೆ ತೆರೆಮೇಲೆ ತರೋ ಪ್ಲಾನ್ ಇದೆಯಂತೆ.

ರಿಷಬ್ ಶೆಟ್ಟಿಗೆ ಆ್ಯಕ್ಷನ್ ಕಟ್ ಹೇಳೋದ್ಯಾರು?

ಐತಿಹಾಸಿಕ ಸಿನಿಮಾ ಬಿಗ್ ಬಜೆಟ್​ ಅಂದ್ಮೇಲೆ ಈ ಚಿತ್ರವನ್ನ ಯಾರು ನಿರ್ದೇಶನ ಮಾಡ್ತಾರೆ ಅನ್ನೋದು ಅಷ್ಟೇ ಕ್ಯೂರಿಯಸ್ ಅಲ್ವಾ. ಅದಕ್ಕೆ ಉತ್ತರ ಬಾಲಿವುಡ್​​ನ ಖ್ಯಾತ ಹಾಗೂ ಐತಿಹಾಸಿಕ ಸಿನಿಮಾಗಳಿಂದ ಖ್ಯಾತಿಯಾಗಿರುವ ಅಶುತೋಶ್ ಗೌರಿಕರ್. ಈ ಹಿಂದೆ ಲಗಾನ್, ಜೋಧೋ ಅಕ್ಬರ್, ಪಾನಿಪತ್, ಮೊಹೆಂಜೊದಾರೋ ಅಂಥಹ ಸಿನಿಮಾಗಳನ್ನ ನಿರ್ದೇಶಿಸಿರುವ ಅಶುತೋಶ್ ಈ ಚಿತ್ರದ ಜವಾಬ್ದಾರಿ ವಹಿಸಿಕೊಂಡಿದ್ದು, ದಕ್ಷಿಣದ ಖ್ಯಾತ ನಿರ್ಮಾಪಕ ವಿಷ್ಣು ಇಂದುರಿ ಬಂಡವಾಳ ಹಾಕಲಿದ್ದಾರೆ.. ಹಾಗ್ನೋಡಿದ್ರೆ ವಿಷ್ಣು ಇಂದುರಿ ಕೂಡ ದೊಡ್ಡ ನಿರ್ಮಾಪಕರೇ.. ಕಂಗನಾ ರಣಾವತ್ ಜೊತೆ ‘ತಲೈವಿ’, ರಣ್ವೀರ್ ಸಿಂಗ್ ನಟನೆಯ ’83’, ಎನ್​ಟಿಆರ್​ ಅವರ ಕಥಾನಾಯಕ, ಮಹಾನಾಯಕ ಚಿತ್ರಗಳನ್ನ ನಿರ್ಮಾಣ ಮಾಡಿದ್ದಾರೆ. ಹಾಗಾಗಿ ಲೆಜೆಂಡ್​ ನಿರ್ದೇಶಕ-ನಿರ್ಮಾಪಕ ಒಟ್ಟಿಗೆ ಕೈ ಜೋಡಿಸಿರುವುದರಿಂದ ರಿಷಬ್ ಶೆಟ್ಟಿಯ ನೆಕ್ಸ್ಟ್ ಸಿನಿಮಾದ ಮೇಲೆ ನಿರೀಕ್ಷೆ ಜಾಸ್ತಿ ಆಗಿದೆ.

ಅಂದ ಹಾಗೆ ಈ ಚಿತ್ರಕ್ಕೆ ರಿಷಬ್ ಶೆಟ್ಟಿನೇ ಹೀರೋ ಆಗ್ಬೇಕು ಅನ್ನೋದು ನಿರ್ಮಾಪಕ ವಿಷ್ಣು ಇಂದುರಿ ಆಸೆಯಾಗಿದೆಯಂತೆ. ದಕ್ಷಿಣ ಭಾರತದ ರಾಜನ ಕಥೆ, ಜೊತೆಗೆ ಧಾರ್ಮಿಕವಾಗಿಯೂ ಸಿನಿಮಾ ಕನೆಕ್ಟ್​ ಆಗುತ್ತೆ. ಸದ್ಯಕ್ಕೆ ಕಾಂತಾರ ಚಿತ್ರದೊಂದಿಗೆ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಹಾಗಾಗಿ ಈ ಕಥೆಗೆ ರಿಷಬ್ ಸೂಕ್ತ ಅನ್ನೋದು ನಿರ್ಮಾಪಕ ಲೆಕ್ಕಾಚಾರ. ಈ ಸಂಬಂಧ ರಿಷಬ್ ಜೊತೆಯೂ ಮಾತುಕತೆ ಆಗಿದ್ದು, ಒಪ್ಪಿಗೆ ಕೊಟ್ಟಿದ್ದಾರಂತೆ.

ಕಾಂತಾರ ಮೂಲಕ ಪ್ಯಾನ್ ಇಂಡಿಯಾದ ಸೆನ್ಸೇಷನ್ ಆದ ರಿಷಬ್ ಶೆಟ್ಟಿಗೆ ತೆಲುಗು, ತಮಿಳು ಹಾಗೂ ಬಾಲಿವುಡ್​ನಿಂದ ಹೆಚ್ಚು ಹೆಚ್ಚು ಆಫರ್ಸ್​ ಇದೆ.. ಆದರೆ ಸದ್ಯಕ್ಕೆ ಕಾಂತಾರ ಪ್ರಿಕ್ವೆಲ್​ ಅಂತ ಡಿಸೈಡ್​ ಆಗಿರೋ ಶೆಟ್ರು ಅದಕ್ಕೂ ಮುಂಚೆಯೇ ಐತಿಹಾಸಿಕ ಚಿತ್ರವೊಂದಕ್ಕೆ ಅಸ್ತು ಎಂದಿರೋದು ವಿಶೇಷ.. ಎನಿ ವೇ.. ಮುಂದಿನದ ವರ್ಷದ ಸೆಕೆಂಡ್ ಹಾಫ್​ನಲ್ಲಿ ಕಾಂತಾರ ಬರುತ್ತೆ.. ಅಷ್ಟೋತ್ತಿಗೆ ಈ ಚಿತ್ರವೂ ಶುರುವಾಗುತ್ತಾ ಕಾದು ನೋಡೋಣ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಕಾಂತಾರ ಆದ್ಮೇಲೆ ರಿಷಬ್‌ ಶೆಟ್ಟಿ ಬಿಗ್‌ ಪ್ಲಾನ್‌; 200 ಕೋಟಿ ಬಜೆಟ್ ಸಿನಿಮಾಗೆ ಸ್ಟಾರ್ ಡೈರೆಕ್ಟರ್ ಯಾರು?

https://newsfirstlive.com/wp-content/uploads/2023/06/Rishabh-Shetty.jpg

Load More