newsfirstkannada.com

ಚಂದ್ರ ಆಯ್ತು ಈಗ ಮಂಗಳ, ಶುಕ್ರ ಗ್ರಹದ ಸರದಿ; ಟ್ರೋಲರ್‌ಗಳಿಗೆ ಮತ್ತೆ ಸವಾಲೆಸೆದ ನಟ ಪ್ರಕಾಶ್ ರಾಜ್‌

Share :

24-08-2023

    ಮಲಯಾಳಿ ಚಾಯ್‌ವಾಲ ಎಲ್ಲಿ ಎಂದು ಬಡಬಡಿಸುತ್ತಿರುವವರೇ..

    ಟ್ರೋಲರ್ಸ್‌ಗಳಿಗೆ ನಟ ಪ್ರಕಾಶ್ ರಾಜ್ ಮತ್ತೊಂದು ಕೌಂಟರ್!

    ಪ್ರಕಾಶ್ ರಾಜ್ ಶೇರ್ ಮಾಡಿದ್ದ ಚಾಯ್‌ವಾಲನ ಮೇಲೆ ಭಾರೀ ಟೀಕೆ

ಚಂದ್ರಯಾನ-3 ವಿಚಾರದಲ್ಲಿ ಶುರುವಾದ ನಟ ಪ್ರಕಾಶ್ ರಾಜ್ ಹಾಗೂ ಟ್ರೋಲರ್‌ಗಳ ಫೈಟ್ ನಿಲ್ಲೋ ಲಕ್ಷಣ ಕಾಣುತ್ತಿಲ್ಲ. ನಿನ್ನೆ ಚಂದ್ರನ ಮೇಲೆ ವಿಕ್ರಮ್‌ ಲ್ಯಾಂಡರ್‌ ಸೇಫ್ ಲ್ಯಾಂಡ್ ಆಗುತ್ತಿದ್ದಂತೆ ಸಾಕಷ್ಟು ಟ್ರೋಲ್ ಪೇಜ್‌ಗಳು ಪ್ರಕಾಶ್ ರಾಜ್‌ ಅವರನ್ನೇ ಟಾರ್ಗೆಟ್ ಮಾಡಿದ್ರು. ಡಿಸೈನ್, ಡಿಸೈನ್ ಫೋಟೋ, ವಿಡಿಯೋಗಳನ್ನ ಮಾಡಿ ಪ್ರಕಾಶ್ ರಾಜ್ ಅವರ ಕಾಲೆಳೆದಿದ್ದರು. ಟ್ರೋಲರ್‌ಗಳು ಮಾಡಿದ ವ್ಯಂಗ್ಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿತ್ತು. ಇದೀಗ ಆ ಟ್ರೋಲರ್ಸ್‌ಗಳಿಗೆ ನಟ ಪ್ರಕಾಶ್ ರಾಜ್ ಮತ್ತೊಮ್ಮೆ ಕೌಂಟರ್ ಕೊಟ್ಟಿದ್ದಾರೆ.

ಸಾಮಾಜಿಕ ಜಾಲತಾಣ X ನಲ್ಲಿ ಫೋಸ್ಟ್ ಮಾಡಿರುವ ನಟ ಪ್ರಕಾಶ್ ರಾಜ್, ಮಲಯಾಳಿ ಚಾಯ್‌ವಾಲ ಎಲ್ಲಿ ಎಂದು ಇನ್ನೂ ಬಡಬಡಿಸುತ್ತಿರುವ ಹಾಸ್ಯವೇ ಅರ್ಥವಾಗದ ಹಾಸ್ಯಾಸ್ಪದರೆ ಅವನು ಬುದ್ಧಿವಂತ ಆತನೀಗ ಮಂಗಳ, ಶುಕ್ರ ಗ್ರಹಗಳಲ್ಲಿ ಅಂಗಡಿಯಿಟ್ಟಿದ್ದಾನೆ. ಸಾಧ್ಯವಾದರೆ ನೀವೂ ಅಲ್ಲಿಗೆ ಹೋಗಿ ಎಂದು ಪೋಸ್ಟ್ ಮಾಡಿದ್ದಾರೆ. ತಮ್ಮ ಹಳೇ ಮಲಯಾಳಿ ಚಾಯ್‌ವಾಲನ ಫೋಟೋ ಹಾಕಿ ಖಡಕ್ ಟಾಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ: ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಪ್ರಕಾಶ್ ರಾಜ್ ಮತ್ತೊಂದು ಟ್ವೀಟ್.. ಈ ಬಾರಿ ಏನಂದ್ರು..?

ಪ್ರಕಾಶ್ ರಾಜ್‌ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿರೋದು ಇದೇ ಮೊದಲಲ್ಲ. ಬಹಳಷ್ಟು ಬಾರಿ ನೆಟ್ಟಿಗರು ಹಾಗೂ ಪ್ರಕಾಶ್ ರಾಜ್ ಅವರ ಮಧ್ಯೆ ಕೋಲ್ಡ್ ವಾರ್ ನಡೆಯುತ್ತಲೇ ಇದೆ. ಕಳೆದ ಎರಡು ಮೂರು ದಿನಗಳಿಂದ ಚಂದ್ರಯಾನ-3 ವಿಚಾರದಲ್ಲಿ ಪ್ರಕಾಶ್ ರಾಜ್ ಹಾಗೂ ಟ್ರೋಲಿಗರ ಮಧ್ಯೆ ನಡೆಯುತ್ತಿರುವ ಪೋಸ್ಟ್ ಫೈಟ್ ತಾರಕಕ್ಕೇರಿದೆ. ಚಂದ್ರಯಾನ-3 ಸಕ್ಸಸ್ ಆದ ಬಳಿಕ ವ್ಯಕ್ತವಾದ ನೆಟ್ಟಿಗರ ಆಕ್ರೋಶಕ್ಕೆ ನಟ ಪ್ರಕಾಶ್ ರಾಜ್ ಮತ್ತೆ ಸವಾಲು ಹಾಕಿದ್ದಾರೆ. ಪ್ರಕಾಶ್ ರಾಜ್ ಅವರ ಹೊಸ ಪೋಸ್ಟ್‌ಗೂ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದ್ರ ಆಯ್ತು ಈಗ ಮಂಗಳ, ಶುಕ್ರ ಗ್ರಹದ ಸರದಿ; ಟ್ರೋಲರ್‌ಗಳಿಗೆ ಮತ್ತೆ ಸವಾಲೆಸೆದ ನಟ ಪ್ರಕಾಶ್ ರಾಜ್‌

https://newsfirstlive.com/wp-content/uploads/2023/08/Prakash-Raj-3.jpg

Load More