1996ರಲ್ಲಿ ಡಾ. ರಾಜ್‌ಕುಮಾರ್ ಪ್ರಚಾರ ರಾಯಭಾರಿ
2009ರಲ್ಲಿ ನಂದಿನಿಗೆ ಪುನೀತ್ ರಾಜ್‌ಕುಮಾರ್ ‘ಅಪ್ಪುಗೆ’
ಶಿವಣ್ಣನಿಗೆ KMF ಅಧ್ಯಕ್ಷ ಭೀಮಾ ನಾಯ್ಕ್ ಅಭಿನಂದನೆ
ಬೆಂಗಳೂರು: 1996ರಲ್ಲಿ ಡಾ. ರಾಜ್‌ಕುಮಾರ್, 2009ರಲ್ಲಿ ಪುನೀತ್ ರಾಜ್‌ಕುಮಾರ್, 2023ರಲ್ಲಿ ಡಾ. ಶಿವರಾಜ್ ಕುಮಾರ್. ನಮ್ಮ ಹೆಮ್ಮೆ ನಂದಿನಿಯ ಪ್ರಚಾರ ರಾಯಭಾರಿಯಾಗಲು ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಒಪ್ಪಿಕೊಂಡಿದ್ದಾರೆ. ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಅವರೇ ಖುದ್ದು ಶಿವರಾಜ್‌ಕುಮಾರ್ ಅವರನ್ನ ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಭೀಮಾ ನಾಯ್ಕ್ ಅವರು, ಕರುನಾಡ ಚಕ್ರವರ್ತಿ, ಹೀರೋ ಶಿವರಾಜ್ ಕುಮಾರ್ “ನಂದಿನಿ” ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಒಪ್ಪಿಕೊಂಡಿರುವುದಕ್ಕೆ ಅಭಿನಂದನೆ ಸಲ್ಲಿಸಲಾಗಿದೆ. ಅವರಿಗೆ ಕೆ.ಎಂ.ಎಫ್ ಮತ್ತು ಸಮಸ್ತ ಕರ್ನಾಟಕ ರೈತರ ಹಾಗೂ ಜನತೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ತಿಳಿಸಿದ್ದಾರೆ.
ನಂದಿನಿ ಪರ ನಿಂತಿರೋ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಣ್ಣಾವ್ರ ಹಾದಿಯನ್ನೇ ಮುಂದುವರಿಸಿದ್ದಾರೆ. 1996ರಲ್ಲಿ ನಂದಿನಿ ಸಂಸ್ಥೆಯ ಮನವಿಗೆ ಸ್ಪಂದಿಸಿದ ವರನಟ ಡಾ.ರಾಜ್ ಕುಮಾರ್ ಅವರು ನಂದಿನಿ ರಾಯಭಾರಿಯಾಗಲು ಒಪ್ಪಿದ್ದರು. ರೈತ ಪರ ಕಾಳಜಿಯಿಂದ ಒಂದು ರೂಪಾಯಿಯನ್ನು ತೆಗೆದುಕೊಳ್ಳದೇ ನಂದಿನಿ ಸಂಸ್ಥೆಯ ಜಾಹೀರಾತಿನಲ್ಲಿ ಭಾಗಿಯಾಗಿದ್ದರು. 2009ರಲ್ಲಿ ತಂದೆಯ ದಾರಿಯನ್ನೇ ಮುಂದುವರಿಸಿದ ಪುನೀತ್ ರಾಜ್‌ಕುಮಾರ್, ನಂದಿನಿ ಹಾಲಿನ ಉತ್ಪನ್ನಗಳ ರಾಯಭಾರಿಯಾಗಿ ಜಾಹೀರಾತು ಮಾಡಿದರು. ಪುನೀತ್ ರಾಜ್‌ಕುಮಾರ್ ಸಹ ನಂದಿನಿ ಪರ ಪ್ರಚಾರಕ್ಕೆ ಒಂದು ರೂಪಾಯಿಯನ್ನು ಪಡೆಯದೇ ಜಾಹೀರಾತು ಮಾಡಿದ್ದರು. ಇದೀಗ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಬಳಿಕ ಶಿವರಾಜ್‌ಕುಮಾರ್ ಅವರು ನಂದಿನಿ ಹಾಲಿನ ಉತ್ಪನ್ನಗಳ ರಾಯಭಾರಿಯಾಗಲು ಒಪ್ಪಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ