newsfirstkannada.com

625 ಕೋಟಿ ಕಲೆಕ್ಷನ್​​.. ಜೈಲರ್​​ ಸಿನಿಮಾ ಡೈರೆಕ್ಟರ್​​ಗೆ ದುಬಾರಿ ಕಾರ್​ ಗಿಫ್ಟ್​​ ಕೊಟ್ಟ ನಿರ್ಮಾಪಕ

Share :

02-09-2023

  ನಿರ್ಮಾಪಕ ಕೊಟ್ಟ ಬ್ರಾಂಡ್ ನ್ಯೂ ಪೋರ್ಶೆ ಕಾರಿನ ಬೆಲೆ ಎಷ್ಟು ಗೊತ್ತಾ?

  ಜೈಲರ್​ ನಿರ್ಮಾಪಕರಿಂದ ದುಬಾರಿ ಗಿಫ್ಟ್‌ ಪಡೆದ ನೆಲ್ಸನ್ ದಿಲೀಪ್‌!

  625 ಕೋಟಿ ಕಲೆಕ್ಷನ್ ಮಾಡಿದ ತಲೈವಾ ಅಭಿನಯದ ಜೈಲರ್ ಚಿತ್ರ

ಸೂಪರ್​ ಸ್ಟಾರ್​ ರಜನಿಕಾಂತ್ ಅಭಿನಯದ ಜೈಲರ್​ ಸಿನಿಮಾ ಬಿಡುಗಡೆಯಾಗಿ ಬಾಕ್ಸಾಫೀಸ್​ ಧೂಳೆಬ್ಬಿಸಿದೆ. ರಜನಿಕಾಂತ್ ಮತ್ತು ಇಡೀ ಚಿತ್ರತಂಡ ‘ಜೈಲರ್’ ಸಿನಿಮಾದ ಯಶಸ್ಸಿನ ಸಂಭ್ರಮದಲ್ಲಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರವು ಒಟ್ಟು 625 ಕೋಟಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಇದೀಗ ಸಿನಿಮಾ ಹಿಟ್ ಆದ ಬೆನ್ನಲ್ಲೆ ಸೂಪರ್​ ಸ್ಟಾರ್​ ರಜನಿಕಾಂತ್ ಅವರಿಗೆ ನಿರ್ಮಾಪಕ ಕಲಾನಿಧಿ ಮಾರನ್ ಅವರು ಹೊಚ್ಚ ಹೊಸ ಐಶಾರಾಮಿ BMW ಕಾರು ಉಡುಗೊರೆಯಾಗಿ ನೀಡಿದ್ದರು.

ಜತೆಗೆ ಜೈಲರ್ ಸಿನಿಮಾದ ನಿರ್ದೇಶಕ ನೆಲ್ಸನ್ ದಿಲೀಪ್​​ಕುಮಾರ್​ ಅವರಿಗೂ ಕಲಾನಿಧಿ ಮಾರನ್ ದುಬಾರಿ ಉಡುಗೊರೆ ಹಾಗೂ ಚೆಕ್ ನೀಡಿದ್ದಾರೆ. ನೆಲ್ಸನ್ ಅವರ ಭೇಟಿಯಾಗಿದ್ದ ಕಲಾನಿಧಿ ಮಾರನ್ ಚೆಕ್​​ವೊಂದು ಹಸ್ತಾತರಿಸಿದ್ದಾರೆ. ಕಲಾನಿಧಿ ಮಾರನ್ ಅವರು BMW ಸೇರಿದಂತೆ ಇನ್ನೂ ಕೆಲ ಐಶಾರಾಮಿ ಕಾರುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ನೆಲ್ಸನ್​ಗೆ ಅವಕಾಶ ನೀಡಿದ್ದರು. ಕೊನೆಯದಾಗಿ ನೆಲ್ಸನ್ ಕಪ್ಪು ಬಣ್ಣದ ದುಬಾರಿ​ ಪೋರ್ಶೆ ಕಾರನ್ನು ಆರಿಸಿಕೊಂಡಿದ್ದಾರೆ. ಪ್ರಪಂಚದ ದುಬಾರಿ ಕಾರುಗಳಲ್ಲಿ ಇದು ಸಹ ಒಂದಾಗಿದೆ. ಈ ಪೋರ್ಶೆ ಕಾರಿನ ಬೆಲೆ ಭಾರತದಲ್ಲಿ ಬರೋಬ್ಬರಿ 1 ಕೋಟಿ 84 ಲಕ್ಷ ರೂಪಾಯಿಗಳು.

ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಜೈಲರ್‌ ಸಿನಿಮಾ 200 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಿಸಲಾಗಿತ್ತು. 625 ಕೋಟಿ ರೂಪಾಯಿಗಳನ್ನು ಬಾಚಿಕೊಂಡರೂ ಇನ್ನೂ ಮುನ್ನುಗ್ಗುತ್ತಿದೆ. ಜೈಲರ್​ ಒಟ್ಟು 10 ಭಾಷೆಗಳಲ್ಲಿ ಬಿಡುಗಡೆಯಾಗಿದೆ. ವಿನಾಯಕನ್, ರಮ್ಯಾ ಕೃಷ್ಣನ್ ಮತ್ತು ವಸಂತ ರವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮೋಹನ್‌ಲಾಲ್, ಸ್ಯಾಂಡಲ್​ವುಡ್​ ನಟ ಶಿವರಾಜ್‌ಕುಮಾರ್ ಮತ್ತು ಜಾಕಿ ಶ್ರಾಫ್ ಕೂಡ ಕಾಣಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

625 ಕೋಟಿ ಕಲೆಕ್ಷನ್​​.. ಜೈಲರ್​​ ಸಿನಿಮಾ ಡೈರೆಕ್ಟರ್​​ಗೆ ದುಬಾರಿ ಕಾರ್​ ಗಿಫ್ಟ್​​ ಕೊಟ್ಟ ನಿರ್ಮಾಪಕ

https://newsfirstlive.com/wp-content/uploads/2023/09/jailar-3.jpg

Load More