ಡೀಪ್ಫೇಕ್ ವಿಡಿಯೋ ವಿರುದ್ಧ ಈಗಾಗಲೇ ಭಾರೀ ವಿರೋಧ
ಮಹಿಳೆಯರನ್ನು ಕೆಟ್ಟದಾಗಿ ತೋರಿಸುವ ಹೊಸ ತಂತ್ರಜ್ಞಾನ
ಕಿಡಿಗೇಡಿಗಳ ಡೀಪ್ಫೇಕ್ ವಿಡಿಯೋದಿಂದ ನಟಿಯರಿಗೆ ಸಂಕಷ್ಟ
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಡೀಪ್ಫೇಕ್ ವಿಡಿಯೋ ಇತ್ತೀಚೆಗೆ ದೇಶದ್ಯಾಂತ ಭಾರೀ ಸದ್ದು ಮಾಡಿತ್ತು. ಇದಕ್ಕೆ ಸಾಕಷ್ಟು ಜನರು ವಿರೋಧ ವ್ಯಕ್ತಪಡಿಸಿದ್ದರು. ಸೋಷಿಯಲ್ ಮೀಡಿಯಾಕ್ಕೆ ಕೇಂದ್ರ ಸರ್ಕಾರ ಎಚ್ಚರಿಕೆಯನ್ನು ನೀಡಿತ್ತು. ಆದರೂ ಕಿಡಿಗೇಡಿಗಳ ಡೀಪ್ಫೇಕ್ ವಿಡಿಯೋ ಹುಚ್ಚಾಟ ನಿಂತಿರಲಿಲ್ಲ. ಬಾಲಿವುಡ್ ಬ್ಯೂಟಿ ಕತ್ರೀನಾ ಕೈಫ್ ಅವರ ವಿಡಿಯೋವನ್ನು ಕೂಡ ಫೇಕ್ ಮಾಡಿದ್ದರು. ಈ ಎಲ್ಲ ಆದ್ರೂ ಇದೀಗ ಬಾಲಿವುಡ್ನ ಮೋಸ್ಟ್ ಬ್ಯುಟಿಫುಲ್ ಹೀರೋಯಿನ್ ಕಾಜೋಲ್ ಅವರ ಡೀಪ್ಫೇಕ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ನಟಿ ರಶ್ಮಿಕಾ ಮಂದಣ್ಣ, ಕತ್ರೀನಾ ಕೈಫ್ ಡೀಪ್ ಫೇಕ್ ವಿಡಿಯೋ ಬಳಿಕ ಇದೀಗ ಬಾಲಿವುಡ್ ಮತ್ತೊಬ್ಬ ಖ್ಯಾತ ನಟಿ ಕಾಜೋಲ್ ಅವರರು ಡೀಪ್ಫೇಕ್ ವಿಡಿಯೋಗೆ ತುತ್ತಾಗಿದ್ದಾರೆ. ವಿಡಿಯೋದಲ್ಲಿ ಕಾಜೋಲ್ ಬಟ್ಟೆ ಬದಲಾಯಿಸುತ್ತಿದ್ದಾರೆ. ಆದ್ರೆ ಇದು ಅವರ ನಿಜವಾದ ವಿಡಿಯೋವಲ್ಲ. ಡೀಪ್ಫೇಕ್ ಮೂಲಕ ಮಾಡಿರುವಂತ ವಿಡಿಯೋ ಆಗಿದೆ. ಕಿಡಿಗೇಡಿಗಳು ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಮಾಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಇತ್ತೀಚಿಗಷ್ಟೇ ರಶ್ಮಿಕಾ ಮಂದಣ್ಣ ಅವರ ಡೀಪ್ಫೇಕ್ ವಿಡಿಯೋ ರಿಲೀಸ್ ಆಗಿದ್ದ ವೇಳೆ ದೇಶದ್ಯಾಂತ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಸ್ವತಹ ಬಾಲಿವುಡ್ ಬಿಗ್ ಬೀ ಅಮಿತಾಬ್ ಬಚ್ಚನ್ ಆರೋಪಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದರು. ಈ ಪ್ರಕರಣ ಸಂಬಂಧ ಬಿಹಾರದ 19 ವರ್ಷದ ಯುವಕನನ್ನ ದೆಹಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಇದೀಗ ಕಾಜೋಲ್ ಅವರು ಡೀಪ್ಫೇಕ್ ವಿಡಿಯೋಗೆ ತುತ್ತಾಗಿರುವುದು ದುರಾದೃಷ್ಟವೇ ಸರಿ. ಏನೇ ಆಗಲಿ ಸರ್ಕಾರ ಇಂತಹ ತಂತ್ರಜ್ಞಾನದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಅನ್ನೋ ಆಗ್ರಹ ಜೋರಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ