/newsfirstlive-kannada/media/post_attachments/wp-content/uploads/2023/11/Aliya-Bhatt-1.jpg)
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ, ಬಾಲಿವುಡ್ ನಟಿಯರಾದ ಕತ್ರಿನಾ ಕೈಫ್, ಕಾಜೋಲ್ ಬಳಿಕ ಡೀಪ್ ಫೇಕ್ ಹಾವಳಿಗೆ ಆಲಿಯಾ ಭಟ್ ತುತ್ತಾಗಿದ್ದಾರೆ. ಬೇರೊಬ್ಬರ ದೇಹಕ್ಕೆ ಆಲಿಯಾ ಭಟ್ ಮುಖವನ್ನು ಹೊಂದಿಸಿರೋ ಡೀಪ್ ಫೇಕ್ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
/newsfirstlive-kannada/media/post_attachments/wp-content/uploads/2023/11/Aliya-Bhatt-Deepfake.jpg)
ವೈರಲ್ ಆಗಿರೋ ವಿಡಿಯೋದಲ್ಲಿ ಆಲಿಯಾ ಭಟ್ ಮುಖವನ್ನು ಬೇರೆ ಮಹಿಳೆಯ ಮೇಲೆ ಎಡಿಟ್ ಮಾಡಲಾಗಿದೆ. ಆಲಿಯಾಳ ಮುಖವನ್ನು ಹೊಂದಿರುವ ಹುಡುಗಿಯೊಬ್ಬಳು ಕ್ಯಾಮೆರಾಗೆ ಅಸಭ್ಯವಾಗಿ ಕೆಲವು ಸನ್ನೆಗಳನ್ನು ಮಾಡುವುದನ್ನು ಈ ವಿಡಿಯೋ ತೋರಿಸುತ್ತಿದೆ. ಮಾರ್ಫ್ ಮಾಡಿರೋ ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ: ಡೀಪ್ ಫೇಕ್ ವಿಡಿಯೋ ಮಾಡಿದ್ರೆ IP ಅಡ್ರೆಸ್ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು; ಸಚಿವ ಅಶ್ವಿನ್ ವೈಷ್ಣವ್
/newsfirstlive-kannada/media/post_attachments/wp-content/uploads/2023/11/Aliya-Bhatt.jpg)
ಇತ್ತೀಚೆಗೆ ಡೀಪ್ ಫೇಕ್ ವಿಡಿಯೋಗಳ ಹಾವಳಿ ಹೆಚ್ಚಾಗಿದೆ. ನಟಿ ರಶ್ಮಿಕಾ ಮಂದಣ್ಣ ಅವರ ಕ್ಲಿಪ್ ವೈರಲ್ ಆದ ನಂತರ ಡೀಪ್‌ಫೇಕ್ ಬಗ್ಗೆ ಹೆಚ್ಚುತ್ತಿರುವ ಅಪಾಯದ ಬಗ್ಗೆ ದೇಶಾದ್ಯಂತ ಚರ್ಚಿಸಲಾಯಿತು. ಇದಾದ ನಂತರವೂ ನಟಿ ಕತ್ರಿನಾ ಕೈಫ್, ಕಾಜೋಲ್ ಅವರ ಡೀಪ್ ಫೇಕ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷವಾಗಿತ್ತು. ಇದೀಗ ಆಲಿಯಾ ಭಟ್ ಅವರ ಈ ವಿಡಿಯೋ ವೈರಲ್ ಆಗಿದ್ದು, ಡೀಪ್ ಫೇಕ್ ಟೆಕ್ನಾಲಜಿ ಮತ್ತೊಮ್ಮೆ ಆತಂಕಕ್ಕೆ ಕಾರಣವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us