newsfirstkannada.com

ರೈಲು ದುರಂತದ ಮಾಹಿತಿ ಪಡೆದ ಪ್ರಧಾನಿ; ಕೆಲವೇ ಕ್ಷಣದಲ್ಲಿ ಒಡಿಶಾದ ಬಾಲಸೋರ್‌ಗೆ ಮೋದಿ ಭೇಟಿ

Share :

Published June 3, 2023 at 9:39am

    ಗೂಡ್ಸ್​ ಟ್ರೈನ್​ಗಳ ಮಧ್ಯೆ ಭೀಕರ ಅಪಘಾತ

    ಘಟನಾ ಸ್ಥಳಕ್ಕೆ ಭೇಟಿ ನೀಡಲಿರುವ ಪ್ರಧಾನಿ

    ಕೆಲವೇ ಹೊತ್ತಲ್ಲಿ ಒಡಿಶಾದ ಬಾಲಸೋರ್‌ಗೆ ಮೋದಿ ಭೇಟಿ

ಒಡಿಶಾದ ಬಾಲಸೋರ್ ಭೀಕರ ರೈಲು ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏರುತ್ತಲೇ ಇದೆ. ದುರಂತಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷಣ, ಕ್ಷಣದ ಮಾಹಿತಿ ಪಡೆದಿದ್ದಾರೆ. ತುರ್ತು ಸಭೆ ನಡೆಸಿ ರೈಲು ದುರಂತದ ಕ್ಷಣ, ಕ್ಷಣದ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಒಡಿಶಾದ ರೈಲು ಅಪಘಾತದ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಇದಾದ ಬಳಿಕ ಖುದ್ದು ಪ್ರಧಾನಿ ಮೋದಿ ಅವರೇ ಅಪಘಾತ ಸಂಭವಿಸಿದ ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಅಪಘಾತದ ಸ್ಥಳ ಪರಿಶೀಲಿಸಲಿರುವ ನರೇಂದ್ರ ಮೋದಿ ಅವರು ಬಳಿಕ ಆಸ್ಪತ್ರೆಗಳಿಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ರೈಲು ದುರಂತಕ್ಕೆ ಸಂಬಂಧಿಸಿದಂತೆ ಚರ್ಚಿಸಲು ದೆಹಲಿಯಲ್ಲಿ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದರು. ಇದಾದ ಬಳಿಕ ಘಟನಾ ಸ್ಥಳಕ್ಕೆ ತೆರಳಿ ವಸ್ತುಸ್ಥಿತಿ ಅರಿಯಲು ತೀರ್ಮಾನಿಸಿದ್ದಾರೆ. ಕೇಂದ್ರ ಸರ್ಕಾರದಿಂದ ನೀಡಬಹುದಾದ ಎಲ್ಲಾ ಸೌಲಭ್ಯಗಳನ್ನು ರಕ್ಷಣಾ ಕಾರ್ಯಚರಣೆಗೆ ನೀಡಲಾಗಿದೆ. ಕೇಂದ್ರದಿಂದ ಸೇನೆ ಮತ್ತು ಇಂಡಿಯನ್ ಎರ್ ಫೋರ್ಸ್ ಸಹಾಯ ನೀಡಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಕ್ಷಣಾ ಕಾರ್ಯಾಚರಣೆ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ.

ರೈಲು ಅಪಘಾತ ಸಂಭವಿಸಿದ ಕೂಡಲೇ ರಕ್ಷಣಾ ಕಾರ್ಯಕ್ಕೆ ಸ್ಪಂದಿಸಿರೋ ಕೇಂದ್ರ ಸರ್ಕಾರ, ಮೃತರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ. ರೈಲ್ವೆ ಇಲಾಖೆ ಮೃತರಿಗೆ 10 ಲಕ್ಷ ರೂಪಾಯಿ, ಗಾಯಾಳುಗಳಿಗೆ 50 ಸಾವಿರ ರೂಪಾಯಿ ನೆರವು ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ರೈಲು ದುರಂತದ ಮಾಹಿತಿ ಪಡೆದ ಪ್ರಧಾನಿ; ಕೆಲವೇ ಕ್ಷಣದಲ್ಲಿ ಒಡಿಶಾದ ಬಾಲಸೋರ್‌ಗೆ ಮೋದಿ ಭೇಟಿ

https://newsfirstlive.com/wp-content/uploads/2023/06/PM-MOdi-2.jpg

Load More