newsfirstkannada.com

VIDEO: ಭಾರತೀಯ ವಿದ್ಯಾರ್ಥಿನಿ ಜೀವಕ್ಕೆ ಬೆಲೆಯೇ ಇಲ್ಲ.. ಹತ್ಯೆ ಮಾಡಿದ ಅಮೆರಿಕ ಪೊಲೀಸರ ಮಾತು ವೈರಲ್

Share :

13-09-2023

    ಜಾಹ್ನವಿ ಕಂಡುಲಾ ಅವರ ಮೇಲೆ ಕಾರು ಹರಿಸಿ ಹತ್ಯೆಗೈದ ಪೊಲೀಸ್

    ವಿದ್ಯಾರ್ಥಿನಿಯ ಹತ್ಯೆ ಬಳಿಕ ಪೊಲೀಸರು ಮಾತಾಡಿದ ಆಡಿಯೋ

    ಪೊಲೀಸರ ಬಾಡಿ ಕ್ಯಾಮೆರಾದಲ್ಲಿ ಸ್ಫೋಟಕ ಮಾತುಕತೆ ರೆಕಾರ್ಡ್

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಕಂಡುಲಾ ಅವರ ಮೇಲೆ ಕಾರು ಹರಿಸಿ ಹತ್ಯೆಗೈದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಹತ್ಯೆ ಮಾಡಿದ ಬಳಿಕ ಸಿಯಾಟಲ್ ಸಿಟಿ ಪೊಲೀಸರು ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಪೊಲೀಸರ ಬಾಡಿ ಕ್ಯಾಮೆರಾದಲ್ಲಿ ಸ್ಫೋಟಕ ವಿಡಿಯೋ, ಆಡಿಯೋ ರೆಕಾರ್ಡ್‌ ಆಗಿದ್ದು, ವಿದ್ಯಾರ್ಥಿನಿಯ ಹತ್ಯೆ ಬಳಿಕ ಪೊಲೀಸರು ಮಾತಾಡಿದ ಸಂಭಾಷಣೆ ಇದೀಗ ವೈರಲ್ ಆಗಿದೆ.

ಇದನ್ನೂ ಓದಿ: ಚೈತ್ರಾ ಕುಂದಾಪುರ ಆಶ್ರಯ ಪಡೆದಿದ್ದು ಮುಸ್ಲಿಂರ ಮನೆಯಲ್ಲಾ?; ಅರೆಸ್ಟ್ ಮಾಡೋ ಸುಳಿವು ಸಿಗ್ತ್ತಿದ್ದಂತೆ ಮಾಡಿದ್ದೇನು?

ಭಾರತೀಯ ವಿದ್ಯಾರ್ಥಿನಿ ಮೇಲೆ ಕಾರು ಹರಿಸಿ ಹತ್ಯೆ ಮಾಡಿದ ಪೊಲೀಸರು ಎಷ್ಟು ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಅಂದ್ರೆ ಈಕೆಗೆ ಇನ್ನೂ 23 ವರ್ಷ ವಯಸ್ಸು. ಈಕೆ ಶ್ರೀಮಂತೆಯೂ ಅಲ್ಲ. ಇವಳ ಜೀವಕ್ಕೆ ಬೆಲೆಯೇ ಇಲ್ಲ. ಸೀಮಿತ ಮೌಲ್ಯ ಮಾತ್ರ ಇದೆ ಎಂದು ಕಾಮಿಡಿ ಮಾಡಿದ್ದಾರೆ. ಜಾಹ್ನವಿ ಕಂಡುಲಾ ಅವರನ್ನು ಹತ್ಯೆ ಮಾಡಿದ ಪೊಲೀಸ್ ಅಧಿಕಾರಿ ಕೆವಿನ್ ದವೆ. ಈ ಅಧಿಕಾರಿ ಜೊತೆ ಇದ್ದ ಡೇನಿಯಲ್ ಅಂಡ್ಯುರರ್ ಸಂಭಾಷಣೆ ನಡೆಸಿದ್ದಾರೆ. ಈ ವೇಳೆ ಡೇನಿಯಲ್ ಅಂಡ್ಯುರರ್, ಈಕೆಗೆ 23 ವರ್ಷ. ಈಕೆಯ ಪ್ರಾಣಕ್ಕೆ ಕಡಿಮೆ ಮೌಲ್ಯವಿದೆ ಎಂದು ಜೋಕ್ ಮಾಡಿದ್ದಾರೆ. ಪೊಲೀಸರ ಬಾಡಿ ಕ್ಯಾಮೆರಾದಲ್ಲಿ ಈ ಸ್ಫೋಟಕ ವಿಡಿಯೋ, ಆಡಿಯೋ ರೆಕಾರ್ಡ್‌ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಏನಿದು ಪೊಲೀಸರ ಹತ್ಯೆ ಪ್ರಕರಣ?

23 ವರ್ಷದ ಜಾಹ್ನವಿ ಕಂಡುಲಾ ಅವರು ಸಿಯಾಟಲ್ ನಗರದ ನಾರ್ತ್ ಈಸ್ಟರ್ನ್ ಕ್ಯಾಂಪಸ್ ನಲ್ಲಿ ಮಾಸ್ಟರ್ ಡಿಗ್ರಿ ಓದುತ್ತಿದ್ದರು. ಕಳೆದ ಜನವರಿ 23ರಂದು ಅಮೆರಿಕಾದ ಸಿಯಾಟಲ್ ಸಿಟಿ ಪೊಲೀಸರು ವಿದ್ಯಾರ್ಥಿನಿ ಮೇಲೆ ಕಾರು ಹರಿಸಿ ಹತ್ಯೆ ಮಾಡಿದ್ದರು. ಪೊಲೀಸರು ಹತ್ಯೆ ಮಾಡಿದ ಸಿಸಿಟಿವಿ ವಿಡಿಯೋ ಕೂಡ ಸಿಕ್ಕಿದ್ದು ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಜಾಹ್ನವಿ ಅವರನ್ನು ಹತ್ಯೆಗೈದ ಪೊಲೀಸ್ ಅಧಿಕಾರಿಗಳು ಕಾಮಿಡಿ ಮಾಡಿ ಅಮಾನವೀಯತೆ ಪ್ರದರ್ಶಿಸಿರೋದು ಬಟಾಬಯಲಾಗಿದೆ.

ಪೊಲೀಸ್ ಅಧಿಕಾರಿಯ ಬಾಡಿ ಕ್ಯಾಮೆರಾದಲ್ಲಿ ರೆಕಾರ್ಡ್‌ ಆಗಿರೋ ಆಡಿಯೋ, ವಿಡಿಯೋ ವೈರಲ್ ಆಗಿದೆ. ಅಮೆರಿಕಾದಲ್ಲಿ ಭಾರತೀಯರ ಜೀವಕ್ಕೆ ಬೆಲೆಯೇ ಇಲ್ವಾ ಅನ್ನೋ ವಿಚಾರ ಬಹಳಷ್ಟು ಚರ್ಚೆಯಾಗುತ್ತಿದ್ದು, ಅಮೆರಿಕಾ ಪೊಲೀಸರ ಅಮಾನವೀಯ ವರ್ತನೆಗೆ ಅಚ್ಚರಿ ವ್ಯಕ್ತವಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

VIDEO: ಭಾರತೀಯ ವಿದ್ಯಾರ್ಥಿನಿ ಜೀವಕ್ಕೆ ಬೆಲೆಯೇ ಇಲ್ಲ.. ಹತ್ಯೆ ಮಾಡಿದ ಅಮೆರಿಕ ಪೊಲೀಸರ ಮಾತು ವೈರಲ್

https://newsfirstlive.com/wp-content/uploads/2023/09/Indian-Student-Death.jpg

Load More