ಕುಡಿದ ನಶೆಯಲ್ಲಿ ವರ ತಾಳಿ ಕಟ್ಟೋದು!
ವಧುವಿನ ತಾಯಿಯೇ ವರನಿಗೆ ಎಣ್ಣೆ ಕುಡಿಸೋದು
ಭಾರತದಲ್ಲಿದೆ ಈ ವಿಚಿತ್ರ ವಿವಾಹ ಸಂಪ್ರದಾಯ!
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ಕುಡಿಯುವುದರಿಂದ ಕಾಯಿಲೆ ಬರಬಹುದು ಮತ್ತು ಸಾವು ಸಂಭವಿಸಬಹುದು ಎಂದು ಎಷ್ಟು ಬಾರಿ ಸಾರಿದರೂ ದೇಶದಲ್ಲಿ ಕುಡುಕರ ಸಂಖ್ಯೆಗೇನು ಕಡಿಮೆ ಇಲ್ಲ. ಅದರಲ್ಲೂ ಕೆಲವು ಕಾರ್ಯಕ್ರಮಗಳು ಮದ್ಯವಿಲ್ಲದೆ ನಡೆಯೋದೇ ಇಲ್ಲ. ಆದರೆ ಇಲ್ಲೊಂದು ಅಚ್ಚರಿಯ ಸಂಗತಿ ಇದೆ. ಅದೇನೆಂದರೆ ಇಲ್ಲಿ ಹೆಣ್ಣು ಕೊಡುವ ಅತ್ತೆಯೇ ಮದುಮಗನಿಗೆ ಎಣ್ಣೆ ಕುಡಿಸುತ್ತಾಳೆ. ಮದುಮಗ ಕೂಡ ಎಣ್ಣೆ ನಶೆಯಲ್ಲೇ ಮದುಮಗಳಿಗೆ ತಾಳಿ ಕಟ್ಟುತ್ತಾನೆ.
ಮದುವೆ ಅನ್ನೋದು ಪವಿತ್ರ ಬಂಧ. ಆದರೀಗ ಕಾಲ ತಕ್ಕಂತೆ ಕೋಲ ಎಂಬಂತೆ ವಿವಾಹ ಸಂಸ್ಕೃತಿಯು ಬದಲಾಗಿದೆ. ಮದುವೆ ದಿನವೇ ಡಿಜೆ ಪಾರ್ಟಿ, ಎಣ್ಣೆ ಪಾರ್ಟಿ ಹುಟ್ಟಿಕೊಂಡಿದೆ. ಮದುವೆ ಆದ ಬಳಿಕ ಹನಿಮೂನ್ಗೆಂದು ಮಾಲ್ಡೀವ್ಸ್ಗೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಅಂದಹಾಗೆಯೇ ಇವೆಲ್ಲ ಕಾಲಕ್ಕೆ ತಕ್ಕಂತೆ ಬದಲಾದ ಸಂಸ್ಕೃತಿಗಳು. ಆದರೆ ಅತ್ತೆಯೇ ಅಳಿಯನಿಗೆ ಎಣ್ಣೆ ಕುಡಿಸುವ ಸಂಪ್ರದಾಯವೊಂದಿಗೆ ಎಂದರೆ ನಂಬುತ್ತೀರಾ? ಅದರಲ್ಲೂ ಭಾರತದಲ್ಲಿ ಇಂತಹ ಸಂಸ್ಕೃತಿ? ಇದಕ್ಕೆ ಉತ್ತರ ಇಲ್ಲಿದೆ.
ಹೌದು. ಇದೊಂದು ಸಂಸ್ಕೃತಿ ಭಾರತದಲ್ಲಿದೆ. ಆದರೆ ಅಚ್ಚರಿಯ ವಿಚಾರವೆಂದರೆ ಹುಡುಗಿಯು ಕೂಡ ಮದುವೆ ವೇಳೆ ಎಣ್ಣೆ ಕುಡಿಯುತ್ತಾಳೆ. ಗಂಡು-ಹೆಣ್ಣು ಎಣ್ಣೆ ಕುಡಿದ ಮೇಲೆ ಮದುವೆ ಆಗಲು ಮುಂದಾಗುತ್ತಾರೆ.
ಪ್ರತಿಯೊಬ್ಬರಿಗೂ ತಿಳಿದಂತೆ ಭಾರತದಲ್ಲಿ ಹಲವಾರು ಸಂಪ್ರದಾಯಗಳಿವೆ. ಒಂದೊಂದು ಪ್ರದೇಶಗಳು ಒಂದೊಂದು ಸಂಪ್ರದಾಯವನ್ನು ಆಚರಿಸುತ್ತವೆ. ಕೆಲವೊಂದು ರಾಜ್ಯಗಳಲ್ಲಿ ವಿಚಿತ್ರ ಸಂಪ್ರದಾಯಗಳಿವೆ. ಆದರಂತೆಯೇ ಛತ್ತೀಸ್ಗಡದಲ್ಲಿರುವ ಬೈಗಾ ಬುಡಕಟ್ಟು ಜನಾಂಗದಲ್ಲಿ ಮದುವಿನ ತಾಯಿ ವರನಿಗೆ ವೈನ್ ಕುಡಿಸುತ್ತಾಳೆ. ನಂತರ ಎರಡು ಕುಟುಂಬಗಳು ಸೇರಿ ಒಟ್ಟಿಗೆ ಮದ್ಯಪಾನ ಮಾಡುತ್ತಾರೆ. ಬಳಿಕ ವಿವಾಹ ನಡೆಯುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ