ನ್ಯೂಸ್ ಫಸ್ಟ್ ವರದಿ ಬಳಿಕ ಎಚ್ಚೆತ್ತ ವಿಜಯನಗರ ಡಿಸಿ, ಶಾಸಕ ನೇಮಿರಾಜ್ ನಾಯ್ಕ್
ಹೊಸಪೇಟೆ ಕಾರ್ಮಿಕರಿಂದಲೇ ಜಲಾಶಯ ಕ್ರಸ್ಟ್ ಗೇಟ್ ದುರಸ್ಥಿ ಕಾರ್ಯ ಯಶಸ್ವಿ
ಖಾಲಿಯಾಗಿ ಬಿಕೋ ಎನ್ನುತ್ತಿದ್ದ ಜಲಾಶಯ ಬಗ್ಗೆ ಸುದ್ದಿ ವರದಿ ಮಾಡಿದ್ದ ನ್ಯೂಸ್ ಫಸ್ಟ್
ವಿಜಯನಗರ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿ ಎಲ್ಲರ ಆತಂಕಕ್ಕೆ ಕಾರಣವಾಗಿತ್ತು. ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಅವರ ಸಹಾಯದಿಂದ ಅಧಿಕಾರಿಗಳು ತಾತ್ಕಾಲಿಕ ಗೇಟ್ ಕೂರಿಸುವ ಮೂಲಕ ಪೋಲಾಗುತ್ತಿರುವ ನೀರನ್ನು ತಡೆದಿದ್ದಾರೆ. ತಾತ್ಕಾಲಿಕ ಗೇಟ್ ಅಳವಡಿಕೆ ಸಕ್ಸಸ್ ಆದ ಬೆನ್ನಲ್ಲೇ ಕಿರು ಜಲಾಶಯದ ಕ್ರಸ್ಟ್ ಗೇಟ್ ದುರಸ್ಥಿ ಕಾರ್ಯ ಯಶಸ್ವಿಯಾಗಿದೆ.
ಇದನ್ನೂ ಓದಿ: ತುಂಗಭದ್ರಾ ಡ್ಯಾಂ ನೀರಿನ ಮಟ್ಟದಲ್ಲಿ ಭಾರೀ ಇಳಿಕೆ; ಎಷ್ಟು ಅಡಿಗೆ ಬಂದು ನಿಂತಿದೆ ಗೊತ್ತಾ..?
ಈ ಮಾಲವಿ ಜಲಾಶಯವು ವಿಜಯನಗರ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ತಾಲೂಕಿನಲ್ಲಿದೆ. ಈ ಹಿಂದೆ ಖಾಲಿ ಖಾಲಿಯಾಗಿ ಬಿಕೋ ಎನ್ನುತ್ತಿರುವ ಜಲಾಶಯ ಅನ್ನೋ ಸುದ್ದಿಯನ್ನು ನ್ಯೂಸ್ ಫಸ್ಟ್ ಚಾನೆಲ್ ವರದಿ ಮಾಡಿತ್ತು. ಸುದ್ದಿ ಬಿತ್ತರಿಸಿದ ಬಳಿಕ ಎಚ್ಚೆತ್ತ ವಿಜಯನಗರ ಡಿಸಿ ಎಂ.ಎಸ್ ದಿವಾಕರ, ಶಾಸಕ ನೇಮಿರಾಜ್ ನಾಯ್ಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದಾದ ಬಳಿಕ ಮಾಲವಿ ಜಲಾಶಯದ ಕ್ರಸ್ಟ್ ಗೇಟ್ನಿಂದ ಪೋಲಾಗುತ್ತಿದ್ದ ನೀರನ್ನು ತಡೆದಿದ್ದಾರೆ. ವಿಶೇಷ ಎಂದರೆ ಟಿಬಿ ಡ್ಯಾಂ ದುರಸ್ಥಿ ಮಾಡಿದ ಹೊಸಪೇಟೆ ಕಾರ್ಮಿಕರಿಂದಲೇ ಈ ಮಾಲವಿ ಜಲಾಶಯ ಕ್ರಸ್ಟ್ ಗೇಟ್ ದುರಸ್ಥಿ ಕಾರ್ಯ ಯಶಸ್ವಿಯಾಗಿಸಿದ್ದಾರೆ.
2.5 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದ ಮಾಲವಿ ಜಲಾಶಯದಲ್ಲಿ ನೀರು ಸೋರಿಕೆ ತಡೆ ಹಿಡಿಯಲಾಗಿದೆ. ಸಾವಿರಾರು ಎಕರೆಗೆ ನೀರುಣಿಸೋ ಜಲಾಶಯದ 2, 4, 7 ಮತ್ತು 9 ಗೇಟ್ಗಳಲ್ಲಿ ತಾಂತ್ರಿಕ ಸಮಸ್ಯೆಯಾಗಿತ್ತು. ಹೀಗಾಗಿ ಅಧಿಕಾರಿಗಳು ಹೊಸಪೇಟೆ ಕಾರ್ಮಿಕರಿಂದಲೇ ಕ್ರಸ್ಟ್ ಗೇಟ್ ದುರಸ್ಥಿ ಕಾರ್ಯ ಯಶಸ್ವಿಯಾಗಿಸಿದ್ದಾರೆ. ಸದ್ಯ ತುಂಗಭದ್ರಾ ಜಲಾಶಯ ತುಂಬಿರೋ ಕಾರಣ ಜಾಕ್ ವೇಲ್ ಮೂಲಕ ಮಾಲವಿ ಜಲಾಶಯಕ್ಕೆ ಹರಿದು ಬಂದಿದೆ. ಮಾಲವಿ ಜಲಾಶಯದಲ್ಲಿ ನೀರು ಸಂಗ್ರಹವಾಗಿದ್ದರಿಂದ ರೈತರ ಬೋರವೆಲ್ಗಳಿಗೆ ಮರುಜೀವ ಬಂದಂತೆ ಆಗಿದೆ. ಖಾಲಿ ಖಾಲಿಯಾಗಿದ್ದ ಮಾಲವಿ ಜಲಾಶಯಕ್ಕೆ ನೀರಿನಿಂದ ಜೀವಕಳೆ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ