ದಶಕದ ಬಳಿಕ ಕರುಣಾನಿಧಿ ಕುಟುಂಬದ ಕುಡಿಯಿಂದ ಧರ್ಮಯುದ್ಧ
ಸನಾತನದ ಬಗ್ಗೆ ಹೇಳಿದ ಪ್ರತಿ ಮಾತಿಗೂ ಬದ್ಧವಾಗಿದ್ದೇನೆ; ಉದಯನಿಧಿ
ಮತಕ್ಕಾಗಿ INDIA ಕೂಟದಿಂದ ಅವಮಾನ ಎಂದ ಅಮಿತ್ ಶಾ
ಸನಾತನವನ್ನ ಡೆಂಘಿ ಸೊಳ್ಳೆಗೆ ಹೋಲಿಸಿದ ಸಚಿವ ಉದಯನಿಧಿ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಸನಾತನ ಅವಹೇಳನ ವಿಪಕ್ಷಗಳಿಗೆ ಅಸ್ತ್ರವಾಗಿ ಸಿಕ್ಕಿದೆ. ಮತ್ತೊಂದು ಕಡೆ ನಟ ಪ್ರಕಾಶ್ ರಾಜ್ ಕೂಡ ಸನಾತನವನ್ನು ವ್ಯಂಗ್ಯವಾಗಿ ತನಾತನಿ ಎಂದಿದ್ದು ಹಿಂದೂಗಳು ತನಾ ತನಿಗಳಲ್ಲ, ತನಾತನಿಸ್ ಆಗಿದ್ದಾರೆ. ಸನಾತನಿಗಳು ಮಾನವ ವಿರೋಧಿಗಳು ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಕರೆದಿದ್ದಾರೆ. ಉದಯನಿಧಿ ಸ್ಟಾಲಿನ್ ಹಾಗೂ ಪ್ರಕಾಶ್ ರಾಜ್ ಅವರ ಈ ವರಸೆ ಭಾರೀ ವಿವಾದವನ್ನೇ ಸೃಷ್ಟಿಸಿದೆ.
ತಮಿಳುನಾಡಿನಲ್ಲಿ ಮತ್ತೊಮ್ಮೆ ಸಂಘರ್ಷದ ಕಿಡಿ ಹಾರಿದೆ. 60ರ ದಶಕದ ಬಳಿಕ ಕರುಣಾನಿಧಿ ಕುಟುಂಬದ ಕುಡಿ, ಧರ್ಮಯುದ್ಧ ಸಾರಿದಂತೆ ಕಾಣಿಸ್ತಿದೆ. ಸಿಎಂ ಸ್ಟಾಲಿನ್ ಪುತ್ರ ಉದಯನಿಧಿ ಆಡಿದ ಅದೊಂದು ಮಾತು ಇಡೀ ದೇಶದಲ್ಲಿ ಧರ್ಮ ಸೂಕ್ಷ್ಮ ಕೆದಕಿದೆ. ಈ ಮೂಲಕ ಸನಾತನ ವರ್ಸಸ್ ದ್ರಾವಿಡ ಕುಲ ಸಮರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಚಾಲನೆ ದೊರಕಿಸಿ ಕೊಟ್ಟಿದ್ದಾರೆ.
ಸಿಎಂ ಸ್ಟಾಲಿನ್ ಪುತ್ರನ ಮಾತಿಗೆ ರಾಜಕೀಯ ಬಣ್ಣ!
ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್, ಸನಾತನ ಧರ್ಮವನ್ನ ರೋಗಗಳಿಗೆ ಹೋಲಿಸಿ ಹೇಳಿಕೆ ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ. ದ್ರಾವಿಡ ನೆಲ ತಮಿಳುನಾಡಲ್ಲಿ ಹಳಸಿ ಅಂತ್ಯವಾದ ಆರ್ಯ ಮತ್ತು ದ್ರಾವಿಡ ಕದನಕ್ಕೆ ಮರು ಚಾಲನೆ ನೀಡಿದ್ದಾರೆ. ಆದ್ರೆ, ಈ ಸಂಘರ್ಷ ಹೊಸ ಆಯಾಮಕ್ಕೆ ತಿರುಗಿದ್ದು, ರಾಜಕೀಯ ಬಣ್ಣ ಬಳಿದಿದೆ.
ಇದನ್ನೂ ಓದಿ: ಸನಾತನ ಧರ್ಮದ ವಿರುದ್ಧ ಹೇಳಿಕೆ; CM ಸ್ಟಾಲಿನ್ ಪುತ್ರನ ವಿರುದ್ಧ ಆಕ್ರೋಶ ಹೊರಹಾಕಿದ ತೇಜಸ್ವಿ ಸೂರ್ಯ
ಉದಯನಿಧಿ ನೀಡಿದ ಈ ಹೇಳಿಕೆ ಧಾರ್ಮಿಕ ಸಂಘರ್ಷಕ್ಕೆ ವೇದಿಕೆ ಕಲ್ಪಿಸಿದೆ. ಉದಯನಿಧಿ ವಿರುದ್ಧ ಸಂಘ ಪರಿವಾರ ನಿಗಿ ನಿಗಿ ಕೆಂಡಕಾರಿದೆ. ಇತ್ತ, ತಾನು ನೀಡಿದ ಹೇಳಿಕೆಗೆ ಬದ್ಧ ಅಂತ ಉದಯನಿಧಿ ಸಾರಿದ್ದಾರೆ. ಅಲ್ಲದೆ, ಯಾವುದೇ ರೀತಿಯ ಸವಾಲಿಗೂ ಸಿದ್ಧ ಅಂತ ಘೋಷಿಸಿದ್ದಾರೆ. ಆದ್ರೆ, ಕೆಲ ಸ್ಪಷ್ಟೀಕರಣ ನೀಡುವ ಕೆಲಸಕ್ಕೆ ಕೈಹಾಕಿದ್ದಾರೆ..
ಮಾತಿಗೆ ಬದ್ಧ, ಸವಾಲಿಗೆ ಸಿದ್ಧ!
‘ಸನಾತನ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುತ್ತದೆ. ಇದರ ನಿರ್ಮೂಲನೆ ಮಾಡುವುದರ ಮೂಲಕ ಮಾನವೀಯತೆ ಮತ್ತು ಮಾನವ ಸಮಾನತೆಯನ್ನ ಎತ್ತಿಹಿಡಿಯಬೇಕು ಎಂದು ಹೇಳಿಕೆ ನೀಡಿದ್ದೆ. ಸನಾತನಿ ಜನರ ಮಾರಣ ಹೋಮಕ್ಕೆ ಕರೆ ನೀಡಿಲ್ಲ. ಈ ಬಗ್ಗೆ ಸುಳ್ಳು ಸುದ್ದಿ ಹರಡಲಾಗುತ್ತಿದೆ. ಸನಾತನ ಧರ್ಮದ ಬಗ್ಗೆ ನಾನು ಹೇಳಿದ ಪ್ರತಿಯೊಂದು ಮಾತಿಗೂ ಬದ್ಧವಾಗಿದ್ದೇನೆ. ಆ ಧರ್ಮದಿಂದ ತುಳಿತಕ್ಕೊಳಗಾದವರ ಪರವಾಗಿ ಮಾತನಾಡಿದ್ದೇನೆ. ಅದರಿಂದ ಸಮಾಜದ ಮೇಲಾದ ದುಷ್ಪರಿಣಾಮಗಳ ಬಗ್ಗೆ ಹೋರಾಟ ನಡೆಸಿದ ಪೆರಿಯಾರ್ ಮತ್ತು ಅಂಬೇಡ್ಕರ್ ಬರಹಗಳನ್ನ ಯಾವುದೇ ವೇದಿಕೆಯಲ್ಲಿ ಪ್ರಸ್ತುತಪಡಿಸಲು ನಾನು ಸಿದ್ಧ.
ಉದಯ್ನಿಧಿ ಸ್ಟಾಲಿನ್, ತಮಿಳುನಾಡು ಸಚಿವ
ಮತಕ್ಕಾಗಿ INDIA ಕೂಟದಿಂದ ‘ಸನಾತನ’ ಅವಮಾನ!
ತಮಿಳುನಾಡಿನಲ್ಲಿ ಉದಯನಿಧಿ ನೀಡಿದ ಹೇಳಿಕೆ ರಾಷ್ಟ್ರ ರಾಜಕಾರಣದಲ್ಲೂ ಪ್ರತಿಧ್ವನಿಸಿದೆ. ರಾಜಸ್ಥಾನ ಎಲೆಕ್ಷನ್ ಅಖಾಡದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಧರ್ಮಾಸ್ತ್ರ ಪ್ರಯೋಗಿಸಿದ್ದಾರೆ. ಮತಕ್ಕೋಸ್ಕರ ನಮ್ಮ ಸಂಸ್ಕೃತಿಯನ್ನು ಅವಮಾನಿಸಿದ್ದಾರೆ ಅಂತ ಕಿಡಿಕಾರಿದ್ದಾರೆ.
ಅಮಿತ್ ಶಾ, ಕೇಂದ್ರ ಗೃಹ ಸಚಿವ
ಉದಯನಿಧಿ ಬೆನ್ನಿಗೆ ನಿಂತ ನಟ ಪ್ರಕಾಶ್ ರಾಜ್!
ಧರ್ಮ ಸಮರ ಏಳುತ್ತಲೇ ಉದಯನಿಧಿ ಪರ ಬಹುಭಾಷಾ ನಟ ಪ್ರಕಾಶ್ ರಾಜ್ ಎಂಟ್ರಿ ಆಗಿದೆ. ಸನಾತನ ಧರ್ಮವನ್ನು ವ್ಯಂಗ್ಯವಾಗಿ ತನಾತನಿ ಎಂದು ಕರೆದಿದ್ದಾರೆ. ಹಿಂದೂಗಳು ತನಾ ತನಿಗಳಲ್ಲ, ತನಾತನಿಸ್ ಅಂತ ಸನಾತನಿಗಳು ಮಾನವ ವಿರೋಧಿಗಳು ಎಂದು ಕರೆದಿದ್ದಾರೆ.
Hindu s ar not #TanaThanis .. Tanathanis are #AntiHumans .. RT if you agree. Happy Sunday to all #justasking pic.twitter.com/3GZYXdVygg
— Prakash Raj (@prakashraaj) September 3, 2023
ಕಳೆದ ವರ್ಷ ಸೆಪ್ಟೆಂಬರ್ 7 ರಿಂದ ರಾಹುಲ್ ಗಾಂಧಿ ಕೈಗೊಂಡ ಪಾದಯಾತ್ರೆಗೆ ವರ್ಷದ ಹತ್ತಿರ. ಪ್ರತಿ ನಡಿಗೆಯಲ್ಲೂ ಮೊಹಬ್ಬತ್ ಕಿ ದುಕಾನ್ ಅಂತ ಹೇಳಿಕೆ ನೀಡಿದ್ದ ರಾಹುಲ್ಗೆ ತನ್ನ ಮಿತ್ರ ಪಕ್ಷದ ನಡೆ ಬಗ್ಗೆ ಮೌನ ಯಾಕೆ ಅಂತ ಸಂಘ ಪರಿವಾರ ಕೆಣಕಿದೆ. ಈ ವರೆಗೆ ಮೌನವಾಗಿರುವ ಕಾಂಗ್ರೆಸ್, ಉದಯನಿಧಿ ಹೇಳಿಕೆಗೆ ಹೇಗೆ ಪ್ರತಿಕ್ರಿಯಿಸುತ್ತೇ ಅನ್ನೋದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ