ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ನಿಂದ ಕೈ ಬಿಟ್ಟಿದ್ದಕ್ಕೆ ಆಕ್ರೋಶ
ಬಿಸಿಸಿಐ ಮ್ಯಾನೇಜ್ಮೆಂಟ್ ವಿರುದ್ಧ ಆರ್.ಅಶ್ವಿನ್ ಟೀಕಾಸ್ತ್ರ
ಪ್ಲೇಯಿಂಗ್-11 ಆಡಿಸುವುದು ಧೋನಿಗೆ ಕರೆಕ್ಟ್ ಆಗಿ ಗೊತ್ತಿತ್ತು
ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಸೋಲು ಟೀಮ್ ಇಂಡಿಯಾದಲ್ಲಿ ಆಕ್ರೋಶದ ಕಿಡಿ ಹೊತ್ತಿಸಿದೆ. ವಿಶ್ವದ ನಂ.1 ಆಲ್ರೌಂಡರ್ ಆರ್.ಅಶ್ವಿನ್ ಕ್ಯಾಪ್ಟನ್ ಹಾಗೂ ಹೆಡ್ ಕೋಚ್ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಇನ್ನೊಂದೆಡೆ ಧೋನಿ ಕ್ಯಾಪ್ಟನ್ಸಿಗೆ ಸಲಾಂ ಹೊಡೆದಿರುವ ಕೇರಂ ಸ್ಪೆಶಲಿಸ್ಟ್ ಮಾಜಿ ಕೋಚ್ಗೆ ಸಖತ್ ಗೂಗ್ಲಿ ಎಸೆದಿದ್ದಾರೆ.
WTC ಸೋಲಿನ ಗಾಯ ಇನ್ನೂ ಆರಿಲ್ಲ. ಇದೇ ಹೊತ್ತಲ್ಲಿ ಸ್ಟಾರ್ ಸ್ಪಿನ್ನರ್ ಅಶ್ವಿನ್ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಿಂದ ಕೇರಂ ಸ್ಪೆಶಲಿಸ್ಟ್ ಅನ್ನು ಹೊರಗಿಡಲಾಗಿತ್ತು. ಇದರಿಂದ ಅಶ್ವಿನ್ ಕೆರಳಿ ಕೆಂಡವಾಗಿದ್ದಾರೆ. ಅವಕಾಶ ವಂಚಿತ ಸ್ಪಿನ್ ಮೆಜಿಶೀಯನ್ ಇನ್ನೂ ಅದೇ ಬೇಸರದಲ್ಲಿದ್ದು ಟೀಮ್ ಮ್ಯಾನೇಜ್ಮೆಂಟ್ ವಿರುದ್ಧವೇ ತೊಡೆ ತಟ್ಟಿದ್ದಾರೆ.
WTC ಫೈನಲ್ನಲ್ಲಿ ಚಾನ್ಸ್ ಸಿಗದಿದ್ದಕ್ಕೆ ಸಿಡಿದೆದ್ದ ಅಶ್ವಿನ್..!
ಸದ್ಯ ಟೀಮ್ ಇಂಡಿಯಾ ಆಟಗಾರರು ಟೆಸ್ಟ್ ವಿಶ್ವಕಪ್ ಸೋಲಿನ ಕಹಿ ಮರೆತು ಮುಂದಿನ ಅಸೈನ್ಮೆಂಟ್ಗೆ ಸಜ್ಜಾಗಿದ್ದಾರೆ. ಆದರೆ ಒಬ್ಬರನ್ನ ಹೊರತುಡಿಸಿ. ಅವರೇ ಸ್ಪಿನ್ ಮಾಂತ್ರಿಕ ಆರ್. ಅಶ್ವಿನ್. ಶಾಂತ ಸ್ವಭಾವಕ್ಕೆ ಹೆಸರುವಾಸಿಯಾದ ಅಶ್ವಿನ್ ಫುಲ್ ರೆಬೆಲ್ ಆಗಿದ್ದಾರೆ. ಮಹತ್ವದ ಪಂದ್ಯದಲ್ಲಿ ಕೈ ಬಿಟ್ಟ ವಿಚಾರ ಅವರನ್ನ ಹತಾಶೆಗೆ ದೂಡಿದೆ. ಇದೇ ಸಿಟ್ಟಿನಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಹೆಡ್ ಕೋಚ್ ರಾಹುಲ್ ದ್ರಾವಿಡ್ ವಿರುದ್ಧ ಸಮರ ಸಾರಿದ್ದಾರೆ.
ಧೋನಿ ನಾಯಕತ್ವಕ್ಕೆ ಸ್ಪಿನ್ ಮಾಂತ್ರಿಕ ಬಹುಪರಾಕ್..!
ಬಿಸಿಸಿಐ ಮ್ಯಾನೇಜ್ಮೆಂಟ್ ವಿರುದ್ಧ ಅಶ್ವಿನ್ ಟೀಕಾಸ್ತ್ರ ಸದ್ಯಕ್ಕೆ ನಿಲ್ಲುವಂತೆ ಕಾಣಿಸ್ತಿಲ್ಲ. ಯೂಟ್ಯೂಬ್ ಸಂದರ್ಶವೊಂದರಲ್ಲಿ ಮಾತನಾಡಿರೋ ಕೇರಂ ಸ್ಪೆಶಲಿಸ್ಟ್ ಮಾಜಿ ದಿಗ್ಗಜ ಕ್ಯಾಪ್ಟನ್ ಧೋನಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಪರೋಕ್ಷವಾಗಿ ರೋಹಿತ್ ಹಾಗೂ ದ್ರಾವಿಡ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಆಟಗಾರನ ಗುಣಮಟ್ಟ ರಾತ್ರೋರಾತ್ರಿ ಬದಲಾಗುವುದಿಲ್ಲ. ಎಂಎಸ್ ಧೋನಿ ನಾಯಕತ್ವದ ಬಗ್ಗೆ ಹಲವರು ಮಾತನಾಡ್ತಾರೆ. ಅಷ್ಟಕ್ಕೂ ಅವರು ಮಾಡಿದ್ದೇನು?. ಅವರು 15 ಸದಸ್ಯರ ತಂಡವನ್ನ ಆಯ್ಕೆ ಮಾಡ್ತಾರೆ. ಆ 15 ರ ಪೈಕಿ 11 ಆಟಗಾರರು ವರ್ಷಪೂರ್ತಿ ಆಡುತ್ತಿದ್ದರು. ಆಟಗಾರ ಆದವನಿಗೆ ಭದ್ರತೆಯ ಸೂಕ್ಷ್ಮತೆ ಬಹುಮುಖ್ಯ.
ಆರ್.ಅಶ್ವಿನ್, ಟೀಮ್ ಇಂಡಿಯಾ ಕ್ರಿಕೆಟಿಗ
ಕೋಚ್-ಕ್ಯಾಪ್ಟನ್ ಕಾರ್ಯವೈಖರಿಗೆ ಅಶ್ವಿನ್ ಅಸಮಾಧಾನ?.
ಸದ್ಯ ಅಶ್ವಿನ್ ಹೇಳಿಕೆ ನೋಡ್ತಿದ್ರೆ ರೋಹಿತ್ ಶರ್ಮಾ ಹಾಗೂ ರಾಹುಲ್ ದ್ರಾವಿಡ್ ಕೆಲಸದ ವೈಖರಿ ಬಗ್ಗೆ ಅವರಿಗೆ ಅಸಮಾಧಾನ ಇರೋದು ಗೊತ್ತಾಗ್ತಿದೆ. ಧೋನಿ ಆಟಗಾರರ ಆಯ್ಕೆ ವಿಚಾರದಲ್ಲಿ ಜಾಣ ನಡೆ ಹೊಂದಿದ್ರು ಪ್ಲೇಯರ್ಸ್ ಬಗ್ಗೆ ಕಾನ್ಫಿಡೆಂಟ್ಸ್ ನೆಕ್ಸ್ಟ್ ಲೆವೆಲ್ನಲ್ಲಿ ಇರುತ್ತಿತ್ತು. ಜೊತೆಗೆ ಆಟಗಾರರಿಗೆ ಅವಕಾಶದ ಅಭದ್ರತೆ ಕಾಡುತ್ತಿರಲಿಲ್ಲ ಅನ್ನೋದು ಅಶ್ವಿನ್ ಮಾತಿನ ಅರ್ಥವಾಗಿದೆ. ಆ ಮೂಲಕ ಇನ್ಡೈರೆಕ್ಟ್ ಆಗಿ ಕೋಚ್-ಕ್ಯಾಪ್ಟನ್ಗೆ ಟಾಂಗ್ ನೀಡಿದ್ದಾರೆ.
ಅಶ್ವಿನ್ ಸಖತ್ ಟಾಂಗ್ ಕೊಟ್ಟ ರವಿಶಾಸ್ತ್ರಿ..!
ಒಂದೆಡೆ ಅಶ್ವಿನ್ ಟೀಮ್ ಮ್ಯಾನೇಜ್ ವಿರುದ್ಧ ಹರಿಹಾಯ್ತಿದ್ರೆ, ಇತ್ತ ಮಾಜಿ ಕೋಚ್ ರವಿಶಾಸ್ತ್ರಿ ಸ್ಪಿನ್ ಮಾಸ್ಟರ್ಗೆ ಗೂಗ್ಲಿ ಎಸೆದಿದ್ದಾರೆ. ಅಶ್ವಿನ್ ಇತ್ತೀಚೆಗಷ್ಟೇ ರಾಷ್ಟ್ರೀಯ ತಂಡದಲ್ಲಿ ಯಾರು ಫ್ರೆಂಡ್ಸ್ ಇಲ್ಲ. ಇರೋರೆಲ್ಲ ಕೊಲಿಗ್ಸ್ ಅಂತ ಹೇಳಿದ್ರು. ಸದ್ಯ ಅಶ್ವಿನ್ ಮೇಲೆ ರವಿಶಾಸ್ತ್ರಿ ಅಟ್ಯಾಕ್ ಮಾಡಿದ್ದಾರೆ.
ಯಾರಾದರೂ ನಿಮಗೆ ಎಷ್ಟು ಸ್ನೇಹಿತರು ಇದ್ದಾರೆ ಎಂದು ಕೇಳಿದ್ರೆ ಅವರು 4 ಅಥವಾ 5 ಜನ ಎಂದು ಹೇಳುತ್ತಾರೆ. ನನಗೆ 5 ಜನ ಸ್ನೇಹಿತರು ಇರೋದಕ್ಕೆ ಖುಷಿ ಇದೆ. ಹೆಚ್ಚಿನವರ ಅಗತ್ಯವಿಲ್ಲ.
ರವಿ ಶಾಸ್ತ್ರಿ, ಮಾಜಿ ಕೋಚ್
WTC ಫೈನಲ್ನಲ್ಲಿ ಅವಕಾಶ ಸಿಗದಿದ್ದಕ್ಕೆ ಆರ್.ಅಶ್ವಿನ್ ರೆಬೆಲ್ ಆಗಿದ್ದಾರೆ. ಈ ಆಕ್ರೋಶದ ಕಿಚ್ಚು ಸದ್ಯಕ್ಕೆ ಆರುವಂತೆ ಕಾಣ್ತಿಲ್ಲ. ಮುಂದೆ ಮತ್ಯಾವ ಬಗೆಯಲ್ಲಿ ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಗೂಗ್ಲಿ ಎಸೆಯುತ್ತಾರೆ ಅನ್ನೋದಕ್ಕೆ ಕಾದು ನೋಡಬೇಕು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ