newsfirstkannada.com

​​ಕನ್ನಡದ ಈ ಮೂರು ಸೀರಿಯಲ್​ಗಳಿಗೆ ಭರ್ಜರಿ ರೆಸ್ಪಾನ್ಸ್​​; ಕಾರಣ ಇದೇ!

Share :

23-06-2023

    ವೀಕ್ಷಕರನ್ನು ತನ್ನತ್ತ ಸೆಳೆಯಲು ಕಿರುತೆರೆ ಚಾನೆಲ್​ಗಳ ಶತ ಪ್ರಯತ್ನ

    ಮಧ್ಯಾಹ್ನದ ಶೋಗಳಿಗೆ ವೀಕ್ಷಕರಿಂದ ಸಿಗುತ್ತಿದೆ ಉತ್ತಮ ರೆಸ್ಪಾನ್ಸ್​

    ಜೀ ಕನ್ನಡ ಹಾಗೂ ಕಲರ್ಸ್​ ಕನ್ನಡದ ನಡುವೆ ಶುರುವಾಯ್ತು​​ ಜಾಟಾಪಟಿ

ಪ್ರತಿ ಮನೆಯ ಪ್ರತಿದಿನದ ಎಂಟರ್​ಟೈಮೆಂಟ್​ ಡೋಸ್​ ಅಂದ್ರೆ ಧಾರಾವಾಹಿ. ಏನ್​ ಮಿಸ್​ ಆದ್ರೂ ನೆಚ್ಚಿನ ಸೀರಿಯಲ್​ಗಳು ಮಾತ್ರ ಇರಲೇಬೇಕು. ಅಂತಹ ಒಂದು ಅದ್ಭುತ ಮನರಂಜನೆಯ ಲೋಕ ಕಿರುತೆರೆ. ಕಾಲ ಬದಲಾದಂತೆ ಮೇಕಿಂಗ್​ನಲ್ಲಿ ಕೂಡ ಬದಲಾವಣೆಯಾಗ್ತಿದೆ. ಅಷ್ಟೇ ಟಫ್​ ಕಾಂಪಿಟೇಶನ್​ ಶುರುವಾಗಿದೆ.

ವೀಕ್ಷಕರನ್ನು ತನ್ನತ್ತ ಸೆಳೆಯಲು ಚಾನೆಲ್​ಗಳು ವಿಭಿನ್ನ ರೀತಿಯ ಪ್ರಯತ್ನಗಳನ್ನ ಮಾಡ್ತಾನೆ ಇರುತ್ತವೆ. ಸದ್ಯ ಚಾನಲ್​ಗಳ ಕಣ್ಣು ಮಧ್ಯಾಹ್ನದ ಮೇಲೆ ನೆಟ್ಟಿದೆ. ಹೌದು, ಪ್ರೈಮ್​ ಟೈಮ್​ಗೆ ಹೆಚ್ಚು ಒತ್ತು ಕೊಡ್ತಿದ್ದ ಚಾನಲ್ಸ್​ ಆಫ್ಟರ್​ ನೂನ್​ ಸ್ಲಾಟ್​ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರಲಿಲ್ಲ. ಇದಕ್ಕೆ ಕಾರಣ ಇಷ್ಟೇ ಡೇ ಟೈಮ್​ನಲ್ಲಿ ಸೀರಿಯಲ್​ ನೋಡುವವರ ಸಂಖ್ಯೆ ಕಡಿಮೆ ಅನ್ನೋ ಭಾವ ಇತ್ತು. ಸದ್ಯ ಈ ಮನಸ್ಥಿತಿ ಚೇಂಜ್​ ಆಗಿದೆ. ವೀಕ್ಷಕರಿಂದ ಮಧ್ಯಾಹ್ನದ ಶೋಗಳಿಗೆ ಉತ್ತಮ ರೆಸ್ಪಾನ್ಸ್​ ಸಿಗ್ತಿದೆ.

ಜೀ ಕನ್ನಡ ಹಾಗೂ ಕಲರ್ಸ್​ ಕನ್ನಡದ ಜಾಟಾಪಟಿ ಮಧ್ಯಾಹ್ನ ಕೂಡ ಜೋರಾಗಿ ನಡೆಯುತ್ತಿದೆ. ಸ್ವಮೇಕ್​ ಕತೆಗಳ ಮೂಲಕ ಕಲರ್ಸ್​ ಕನ್ನಡ ವೀಕ್ಷಕರನ್ನ ಸೆಳೆಯುತ್ತಿದೆ. ಗಂಡ-ಹೆಂಡ್ತಿ, ಗೃಹಪ್ರವೇಶ ಹಾಗೂ ಶಾಂತಂ ಪಾಪಂ ಕತೆಗಳ ಮೂಲಕ ಮಧ್ಯಾಹ್ನ ಬಿಸಿ ಬಿಸಿ ಮನರಂಜನೆಯ ರಸದೌತಣ ಬಡಿಸ್ತಿದೆ. ಜೀ ಕನ್ನಡ ಪಕ್ಕದ ರಾಜ್ಯದ ಕತೆಗಳಿಗೆ ಮೋರೆ ಹೋಗಿದ್ದು, ಡಬ್ಬಿಂಗ್​ ಧಾರಾವಾಹಿಗಳಿಗೆ ಒತ್ತು ಕೊಡ್ತಿದೆ.

ತೆಲುಗು, ತಮಿಳಿನ ಧಾರಾವಾಹಿಗಳನ್ನ ಡಬ್​ ಮಾಡಿ ಪ್ರಸಾರ ಮಾಡ್ತಿದೆ. ವೀಕ್ಷಕರ ರೆಸ್ಪಾನ್ಸ್​ ಕೂಡ ಚನ್ನಾಗಿದೆ. ಒಟ್ಟಿನಲ್ಲಿ ಒಂದು ವರ್ಗಕ್ಕೆ ಮನೆ ಊಟ ಇಷ್ಟ. ಆದ್ರೆ ಮತ್ತೊಂದು ವರ್ಗಕ್ಕೆ ಹೋಟಲ್​ ಊಟ ಇಷ್ಟ ಆಗ್ತಿದ್ದು, ಈ ಭರ್ಜರಿ ಮನರಂಜನೆಯಲ್ಲಿ ಮಧ್ಯಾಹ್ನದ ನಿದ್ದೆ ಟೈಮ್​ ಮಿಸ್​ ಆಗ್ತಿರೋದಂತೂ ನಿಜ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

​​ಕನ್ನಡದ ಈ ಮೂರು ಸೀರಿಯಲ್​ಗಳಿಗೆ ಭರ್ಜರಿ ರೆಸ್ಪಾನ್ಸ್​​; ಕಾರಣ ಇದೇ!

https://newsfirstlive.com/wp-content/uploads/2023/06/colors-6.jpg

Load More