ರಾಜಕೀಯದ ಪವರ್ ಹೌಸ್ ಬೆಳಗಾವಿಗೆ ಮುಂದಿನ ಸಿಎಂ ಪಕ್ಕಾನಾ?
ಮುಂದಿನ ಮುಖ್ಯಮಂತ್ರಿ ಪಟ್ಟ ಬೆಳಗಾವಿ ಜಿಲ್ಲೆಗೇ ಸಿಗಲಿದೆಯೇ?
ರಮೇಶ್ ಜಾರಕಿಹೊಳಿ ಫೋಟೋ ಜತೆ ಬೆಳಗಾವಿ ಪಟ್ಟದ ಗುಟ್ಟು ಏನು?
ಮುಡಾ ತೀರ್ಪು ಹೊರಬೀಳುವ ಮುಂಚೆಯೇ ಬಿರುಗಾಳಿ ಎದ್ದಿದೆ. ಮುಂದಿನ ಮುಖ್ಯಮಂತ್ರಿ ನಾನೇ ನಾನೇ ಅಂತ ಕಾಂಗ್ರೆಸ್ನಲ್ಲಿ ಕೂಗಾಟ ಶುರುವಾಗಿದೆ. ಬೆಳಗಾವಿಗೇ Next CM ಪೋಸ್ಟ್ ಅನ್ನೋ ಅದೊಂದು ಜಾಹೀರಾತು ಅಚ್ಚಾಗಿದೆ. ಅಷ್ಟಕ್ಕೂ, ಸಿದ್ದರಾಮಯ್ಯನವರಿಗೇ ನಮ್ಮ ಬೆಂಬಲ ಅಂತಿದ್ದ ನಾಯಕರು, ಈಗ ತಮ್ಮ ಹಂಬಲ ವ್ಯಕ್ತಪಡಿಸ್ತಿದ್ದಾರೆ. ಇಂಥದ್ದೊಂದು ಬೊಬ್ಬೆ ಮಧ್ಯೆಯೇ ಅಲ್ಲೊಬ್ಬ ಸಾಹುಕಾರನ ಸೈಲೆಂಟ್ ಗೇಮ್ ಸದ್ದಿಲ್ಲದೇ ನಡೀತಿದೆ. ಅಷ್ಟಕ್ಕೂ ಸೈಲೆಂಟ್ ಮಾಸ್ಟರ್ ಮೈಂಡ್ ಸತೀಶ್ ಜಾರಕಿಹೊಳಿ ರಣತಂತ್ರವೇನು? ಮಹಾಗುರುವಿನ ಅಣತಿಯಂತೆಯೇ ಇದೆಲ್ಲವೂ ನಡೀತಿದ್ಯಾ? ಅನ್ನೋ ಬಗ್ಗೆ ಸಂಪೂರ್ಣ ವಿವರ ಈ ಲೇಖನದಲ್ಲಿದೆ.
ಮುಂದಿನ ಮುಖ್ಯಮಂತ್ರಿ ನಾನೇ, ನಾನೇ, ನಾನೇ, ಹೀಗಂತ ಹೇಳುತ್ತಲೇ ರಾಜ್ಯ ಕಾಂಗ್ರೆಸ್ನಲ್ಲಿ ಸೈಲೆಂಟ್ ಗೇಮ್ ಶುರುವಾಗಿದೆ. ಆಗಸ್ಟ್ ತಿಂಗಳುದ್ದಕ್ಕೂ ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣದ ಬೆಂಕಿ ಧಗಧಗನೇ ಉರಿದಿತ್ತು.
ಇದನ್ನೂ ಓದಿ:ಅಮೆರಿಕಾ ಎಲೆಕ್ಷನ್‌ಗೂ ಡಿಕೆಶಿ ಯಾಕೆ ಬೇಕು? ಕಮಲಾ ಹ್ಯಾರಿಸ್ ಆಹ್ವಾನ ಕೊಟ್ಟಿದ್ದೇಕೆ? ಅಸಲಿ ಕಾರಣ ಇಲ್ಲಿದೆ!
ಬಿಜೆಪಿ, ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆ ಮಾಡಿತ್ತು. ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿ ಆದೇಶ ಹೊರಡಿಸಿದ್ದರು. ಇದೇ ಆದೇಶ ವಜಾಗೊಳಿಸಲು ಹೈಕೋರ್ಟ್ ಮೋರೆ ಹೋಗಿದ್ದಾರೆ ಸಿಎಂ ಸಿದ್ದರಾಮಯ್ಯ. ಹೈಕೋರ್ಟ್ ಇನ್ನೂ ತೀರ್ಪು ನೀಡಿಯೇ ಇಲ್ಲ. ಈ ಮಧ್ಯೆಯೇ ಸಿಎಂ ಸಿದ್ದರಾಮಯ್ಯರ ಬಣವೇ ಮುಂದಿನ ಮುಖ್ಯಮಂತ್ರಿ ಚರ್ಚೆಯ ಕಿಡಿಗೆ ಮತ್ತೆ ಗಾಳಿ ಬೀಸಿದೆ. ಆ ಬೆಂಕಿ ದೊಡ್ಡ ಜ್ವಾಲೆಯಾಗಿ ಉರಿಯುತ್ತಿರುವಾಗಲೇ, ಸದ್ದಿಲ್ಲದೇ ಒಂದು ಆಟ ಶುರುವಾಗಿದೆ. ಅದಕ್ಕೆ ಸಾಕ್ಷಿಯೇ ಒಂದು ಪತ್ರಿಕೆಯ ಜಾಹೀರಾತು.
ಸತೀಶ್ ಜಾರಕಿಹೊಳಿ ಸಿಎಂ, 48 ಶಾಸಕರ ಬೆಂಬಲದ ಮಾತೇಕೆ?
ಸತೀಶ್ ಜಾರಕಿಹೊಳಿ.. ಕುಂದಾನಗರಿ ಬೆಳಗಾವಿಯ ರಾಜಕಾರಣದ ದಿಕ್ಕು ದೆಸೆಗಳನ್ನೇ ಬದಲಿಸಬಲ್ಲ ಸೈಲೆಂಟ್ ಮಾಸ್ಟರ್ ಮೈಂಡ್. ಸಿದ್ದರಾಮಯ್ಯನವರ ಅತ್ಯಾಪ್ತ, ಅಹಿಂದ ಸಹ ಸಾರಥಿ. ಇಂತಹ ಸತೀಶ್ ಜಾರಕಿಹೊಳಿಯೇ ಮುಂದಿನ ಮುಖ್ಯಮಂತ್ರಿ ಆಗೋದು ಅಂತ ಪತ್ರಿಕೆಯ ಜಾಹೀರಾತುವೊಂದು ಸಾರಿ ಸಾರಿ ಹೇಳುತ್ತಿದೆ. ಇದೇ ಜಾಹೀರಾತು ರಾಜ್ಯ ಕಾಂಗ್ರೆಸ್ನ ಅಂತರ್ಯುದ್ಧ ಎಂಥದ್ದು? ಯಾಮಾರಿದ್ರೆ ಏನಾಗುತ್ತೆ ಅನ್ನೋ ಸಂದೇಶ ನೀಡುತ್ತಿದೆ. ಅದರಲ್ಲೂ ಒಳಸುಳಿಯ ರಾಜಕಾರಣದ ನಿಪುಣ ಗುರು ಶಿಷ್ಯರು ಮಹಾ ಚೆಕ್ಮೆಟ್ ಇಟ್ಟಿದ್ದಾರಾ ಅನ್ನೋ ದೊಡ್ಡ ಸಂಶಯ ಹುಟ್ಟು ಹಾಕಿದೆ. ಯಾಕಂದ್ರೆ, ಪತ್ರಿಕೆಯೊಂದರಲ್ಲಿ ಅಚ್ಚಾದ ಜಾಹೀರಾತಿನೊಳಗಿನ ಹೂರಣ ಸಾಮಾನ್ಯವಾಗಿಲ್ಲ.
ಮೋದಿ ಫೋಟೋ ಜೊತೆ ಸತೀಶ್ ಜಾರಕಿಹೊಳಿ ಸಿಎಂ ಸಂದೇಶ!
ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಅನ್ನೋ ಈ ಜಾಹೀರಾತು ಸಾಕಷ್ಟು ಚರ್ಚೆಗೆ ಗ್ರಾಸವಾಗಿರೋದಷ್ಟೇ ಅಲ್ಲ. ಹಲವರ ತಲೆಗೆ ಹುಳ ಕೂಡ ಬಿಟ್ಟಿದೆ. ಕರ್ನಾಟಕದ ಪ್ರಮುಖ ದಿನಪತ್ರಿಕೆಯಲ್ಲಿ ಸಾಹುಕಾರನ ಅಭಿಮಾನಿಯೊಬ್ಬರು ಜಾಹೀರಾತು ನೀಡಿದ್ದಾರೆ. ಫೋಟೋದಲ್ಲಿ ಅಚ್ಚರಿ ಮೂಡಿಸೋದು ಮೂರು ಫೋಟೋ. ಸಿದ್ದು ಅತ್ಯಾಪ್ತ ಸತೀಶ್ ಜಾರಕಿಹೊಳಿ, ಅವರಿಗೆ ಎದುರಾಗಿ ಪ್ರಧಾನಿ ನರೇಂದ್ರ ಮೋದಿ ಫೋಟೋ. ಇದಿಷ್ಟೇ ಅಲ್ಲದೇ, 2018ರ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರವನ್ನ ಕೆಡವಿದ ಕ್ಷಿಪ್ರಕ್ರಾಂತಿಯ ನಾಯಕ, ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಫೋಟೋ. ರಜನೀಶ್ ಆಚಾರ್ಯ ಫೌಂಡೇಷನ್ ವತಿಯಿಂದ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿಯಾಗಲಿ ಅಂತಾ ಈ ರೀತಿಯ ಕ್ಯಾಂಪೇನ್ ಮಾಡಲಾಗಿದೆ. ಅಷ್ಟಕ್ಕೂ ಇಲ್ಲಿ ಮೋದಿ ಫೋಟೋ ಯಾಕ್ ಬಂತು ನಿಜವಾಗಲೂ ಗೊತ್ತಿಲ್ಲ.
ಇದನ್ನೂ ಓದಿ: ಚನ್ನಪಟ್ಟಣ ಟಿಕೆಟ್ ರೇಸ್ನಿಂದ CPY ಔಟ್? ಯೋಗೇಶ್ವರ್ ಮೇಲೆ ಕುಮಾರಸ್ವಾಮಿ ಗರಂ? ಕಾರಣವೇನು?
ಪಕ್ಷದ ವರಿಷ್ಠರು ಸಿದ್ದರಾಮಯ್ಯನರವರ ಒಪ್ಪಿಗೆ ಪಡೆದು ಅವರ ಬದಲಿಗೆ ಶ್ರೀ ಸತೀಶ್ ಜಾರಕಿಹೊಳಿ ಅವರನ್ನು ಆಯ್ಕೆ ಮಾಡಬೇಕು ಎಂದು ಜನಾಭಿಪ್ರಾಯವಾಗಿದೆ ಏಕೆಂದರೆ ಮೂವರು ಶಾಸಕರು, ಎಂಎಲ್‌ಸಿ ಹಾಗೂ ಸಂಸದರನ್ನು ಹೊಂದಿರುವ ಸತೀಶ್ ಜಾರಕಿಹೊಳಿ ಕುಟುಂಬದೊಂದಿಗೆ ಸಿದ್ದರಾಮಯ್ಯರವರು ನಿಕಟ ಸಂಪರ್ಕ ಹೊಂದಿದ್ದಾರೆ ಅನ್ನೋ ಪೋಸ್ಟರ್ ಕೂಡ ಇದೀಗ ವೈರಲ್ ಆಗ್ತಿದೆ. ಇದಷ್ಟೇ ಅಲ್ಲದೇ ಮತ್ತೊಂದು ವಾಟ್ಸ್ಯಾಪ್ ಪೋಸ್ಟರ್ 48 ಶಾಸಕರು ಸಿದ್ದರಾಮಯ್ಯರ ಸಪೋರ್ಟ್ ಸತೀಶ್ ಜಾರಕಿಹೊಳಿಗಿದೆ ಅನ್ನೋದನ್ನ ಹೇಳುತ್ತಿದೆ. ಈ ಎರಡೂ ಸಂದೇಶ ಸಿದ್ದರಾಮಯ್ಯ ಬಣ ಬಹುದೊಡ್ಡ ಪಲ್ಸ್ ಚೆಕ್ ಮಾಡೋಕೆ ಮುಂದಾಗಿದೆಯೇ ಅನ್ನೋ ಸಂದೇಶ ನೀಡುತ್ತಿದೆ.
ಸಿಎಂ ಪಟ್ಟದ ಬಗ್ಗೆ, ಜಾಹೀರಾತಿನ ಬಗ್ಗೆ ಖುದ್ದು ಸತೀಶ್ ಹೇಳಿದ್ದೇನು?
ಹೇಳಿ ಕೇಳಿ ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯರ ಅತ್ಯಾಪ್ತ. ಕನಸಿನಲ್ಲೂ ಸತೀಶ್ ಸಿದ್ದರಾಮಯ್ಯರ ವಿರುದ್ಧ ಮಾತಾಡೋದಿಲ್ಲ ಅಂತ ರಾಜಕಾರಣದ ವಿದ್ಯಾರ್ಥಿ ಕೂಡ ಹೇಳಬಲ್ಲ. ಆದರೇ, ಸತೀಶ್ ಜಾರಕಿಹೊಳಿ ಅಭಿಮಾನಿಗಳ ಜಾಹೀರಾತು ರಣತಂತ್ರದ ಬಗ್ಗೆ ಖುದ್ದು ಸಾಹುಕಾರ್ ಹೇಳಿದ್ದೇ ಬೇರೆ. ನಾನೇ ಮುಂದಿನ ಮುಖ್ಯಮಂತ್ರಿ ಅಂತ ಎಲ್ಲಿಯೂ ಹೇಳಿಲ್ಲ. ಈ ಬಗ್ಗೆ ಕ್ಲೈಮ್ ಕೂಡ ಮಾಡಿಲ್ಲ. ಯಾರೋ ಅಭಿಮಾನಿಗಳು ವಾಟ್ಸಾಪ್ನಲ್ಲಿ ಹಾಕಿಕೊಂಡ ಮಾತ್ರಕ್ಕೆ ಅದು ನಡೆಯೋದೂ ಇಲ್ಲ. ಮುಖ್ಯಮಂತ್ರಿಯನ್ನು ಬದಲಿಸುವ ಸನ್ನಿವೇಶವೂ ಇಲ್ಲ. ಸಿದ್ದರಾಮಯ್ಯನವರೇ ಮುಂದುವರೆಯುತ್ತಾರೆ. ಅವರೇ ಸಿಎಂ ಆಗಿ ಇರುತ್ತಾರೆ ಅನ್ನೋ ಆಸೆ ಇದೆ. ನಂಬಿಕೆಯೂ ಇದೆ. ಕಾದು ನೋಡೋಣ ಅನ್ನೋದು ಸಾಹುಕಾರನ ಕೊನೆ ಮಾತು. ಸತೀಶ್ ಹೀಗೆ ಹೇಳಿರೋದ್ರ ಹಿಂದೆ ಕಾರಣದ ಜೊತೆಗೆ ಸೈಲೆಂಟ್ ಸ್ಟ್ರಾಟಜಿ ಕೂಡ ಇಲ್ಲದೇ ಹೋಗಿಲ್ಲ.
ಇದನ್ನೂ ಓದಿ: ಆಪ್ತರಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕಂಟಕ; ನಾನು ಸಿಎಂ ಆಗಬೇಕು ಎಂದ MB ಪಾಟೀಲ್
“ನ್ಯಾಯ ನಮ್ಮ ಪರ ಸಿಗುತ್ತೇ ಅನ್ನೋ ಆಸೆಯಲ್ಲಿದ್ದೀನಿ” ಸತೀಶ್ ಸುಳಿವು!
ಮುಂದಿನ ಮುಖ್ಯಮಂತ್ರಿ ಚರ್ಚೆ ಹುಟ್ಟು ಹಾಕಿದ್ದೇ ಸಿದ್ದರಾಮಯ್ಯರ ಆಪ್ತಮಿತ್ರ ಆರ್.ವಿ. ದೇಶಪಾಂಡೆ. ಖುದ್ದು ದೇಶಪಾಂಡೆ ಕೂಡ ಹೇಳಿದ್ರು, ಸಿಎಂ ಬದಲಾವಣೆ ಇಲ್ಲ. ಒಂದು ವೇಳೆ ಬದಲಾದರೇ, ಸ್ನೇಹಿತ ಸಿದ್ದರಾಮಯ್ಯ ಒಪ್ಪಿಕೊಂಡರೆ ರೆಡಿ ಅಂದಿದ್ರು. ಇದೀಗ ಸಿದ್ದು ಮತ್ತೊಬ್ಬ ಶಿಷ್ಯ ಎಂ.ಬಿ. ಪಾಟೀಲ್ ಸಹ ಮುಂದಿನ ಸಿಎಂ ನಾನೇ ಎನ್ನುತ್ತಿದ್ದಾರೆ. ಸದ್ಯ, ಕಾಂಗ್ರೆಸ್ನಲ್ಲಿ ಸಿಎಂ ಪಟ್ಟದ ಮೇಲೆ ಕಣ್ಣಿಟ್ಟಿರೋ ಸಿದ್ದು ವಿರೋಧಿ ಬಣ ಅಕ್ಷರಶಃ ಗೊಂದಲಕ್ಕೆ ಈಡಾಗಿರೋದು ಇದೇ ಕಾರಣಕ್ಕೇ. ಅರೇ, ಸಿದ್ದು ಅತ್ಯಾಪ್ತರೇ ಸಿಎಂ ಚೇಂಜ್ ಅಂತಿರೋದೇಕೆ ಅನ್ನೋ ಡೇಂಜರಸ್ ಡೌಟ್ ಶುರುವಾಗಿದೆ. ಇದೇ ಹೊತ್ತಿಗೆ ಸರಿಯಾಗಿ ಅಹಿಂದ ಸಹ ಸಾರಥಿ ಸತೀಶ್ ಜಾರಕಿಹೊಳಿ ಕೂಡ ಸಿಎಂ ಪಟ್ಟದ ಮಾತಾಡ್ತಿರೋದು ಸಿದ್ದು ವಿರೋಧಿ ಬಣಕ್ಕೆ ಖುಷಿಗಿಂತ್ಲೂ ಹೆಚ್ಚು ಭಯ ಹುಟ್ಟಿಸುತ್ತಿದೆ. ಅದರಲ್ಲೂ ಸತೀಶ್ ಜಾರಕಿಹೊಳಿ ಆಡಿದ ನ್ಯಾಯದ ಮಾತು ಮತ್ತಷ್ಟು ಗೊಂದಲಕ್ಕೆ ದೂಡುತ್ತಿದೆ.
ದೆಹಲಿಗೆ ಹೋಗಿ ಬರೋದು ಮಾಮೂಲಿ ವಿಚಾರ. ಅದಕ್ಕೂ ರಾಜಕೀಯ ಕಲ್ಪಿಸುವುದು ಸರಿಯಲ್ಲ ಎನ್ನುತ್ತಲೇ ಸತೀಶ್ ಜಾರಕಿಹೊಳಿ ಮತ್ತೊಂದು ಸಂಗತಿ ಹೊರ ಹಾಕಿದ್ದಾರೆ. ಎಂ.ಬಿ. ಪಾಟೀಲ್ ಹಾಗೂ ಶಿವಾನಂದ ಪಾಟೀಲರಂತೆಯೇ ಹಲವರ ಆಸಕ್ತಿಯ ಉಲ್ಲೇಖ ಮಾಡಿದ್ದಾರೆ. ಅಂತಿಮವಾಗಿ ನಮ್ಮ ಪರವಾಗಿ ನ್ಯಾಯ ಸಿಗುತ್ತದೆ ಅನ್ನೋ ಮಾತು ಮಾರ್ಮಿಕವಾಗಿದೆ. ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಅನ್ನೋ ಎರಡೂ ಪೋಸ್ಟ್ನಲ್ಲೂ ಇದೇ ಸಿದ್ದು ಪರ ಒಲವಿನ ಲೆಕ್ಕಾಚಾರವೇ ಕಾಣಿಸುತ್ತಿದೆ. ಈ ವಿಷಯಕ್ಕೆ ಬಂದರೇ, ದೇಶಪಾಂಡೆ, ಎಂಬಿ ಪಾಟೀಲ್ ಸಹ ಸಿದ್ದರಾಮಯ್ಯರ ಬೆಂಬಲದೊಂದಿಗೆ ಮುಂದಿನ ಸಿಎಂ ಅನ್ನೋ ಮಾತುಗಳನ್ನೇ ಹೇಳುತ್ತಿರುವುದು ಒಳಸುಳಿ ರಾಜಕಾರಣದ ಆಳ ಅಗಲ ಏನು ಅನ್ನೋದನ್ನ ಹೇಳುತ್ತಿದೆ.
ಜಾರಕಿಹೊಳಿ ಕುಟುಂಬದ ಬಹುದೊಡ್ಡ ಹೆಬ್ಬಯಕೆ ಇದೊಂದೇನಾ?
ಇವತ್ತಿಗೆ ಸರಿಯಾಗಿ ಸರಿಯಾಗಿ ಭರ್ತಿ ಆರು ವರ್ಷಗಳ ಹಿಂದೆ ಗೋಕಾಕ್ ಶಾಸಕ ಸಾಹುಕಾರ್ ರಮೇಶ್ ಜಾರಕಿಹೊಳಿ ಒಂದು ಭವಿಷ್ಯ ನುಡಿದಿದ್ದರು. ಸೋದರ ಸತೀಶ್ ಜಾರಕಿಹೊಳಿಯನ್ನು ಸಿಎಂ ಮಾಡೇ ಮಾಡ್ತೀನಿ ಅನ್ನೋ ಭವಿಷ್ಯ ನುಡಿದಿದ್ದರು. ಕುಂದಾ ನಗರಿಯ ರಾಜಕಾರಣದಲ್ಲಿ ಸಾಹುಕಾರ್ ಕುಟುಂಬ ಮನಸ್ಸು ಮಾಡಿದರೇ ಏನು ಬೇಕಾದ್ರೂ ಆಗುತ್ತದೆ ಅನ್ನೋದಕ್ಕೆ ಕಳೆದ ಎರಡು ಮೂರು ದಶಕಗಳ ಕ್ಷಿಪ್ರಕ್ರಾಂತಿಗಳೇ ಸಾಕ್ಷಿಯಾಗಿವೆ. ಒಂದೇ ಕುಟುಂಬದಲ್ಲಿ ಎಂಎಲ್‌ಸಿ, ಎಂಎಲ್ಎ, ಎಂಪಿಗಳಿದ್ದರೂ ಅದೊಂದು ಆಸೆ ಇನ್ನೂ ಈಡೇರಿಲ್ಲ. ಮುಖ್ಯಮಂತ್ರಿ ಗಾದಿಯ ಮೇಲೆ ಸಾಹುಕಾರ್ ಕುಟುಂಬದ ಒಬ್ಬರನ್ನು ತಂದು ಕೂರಿಸಬೇಕು ಅನ್ನೋ ಮಹಾದಾಸೆ ಹಾಗೆಯೇ ಉಳಿದಿದೆ. ಒಂದು ವೇಳೆ ಅಂಥಾ ಅವಕಾಶ ಒದಗಿಬಂದರೇ ಆ ಜಾಗದಲ್ಲಿ ಬಂದು ಕೂರೋದು ಒನ್ ಅಂಡ್ ಓನ್ಲಿ ಸತೀಶ್ ಜಾರಕಿಹೊಳಿ ಅನ್ನೋದನ್ನ ಸಾಹುಕಾರ್ ಕುಟುಂಬದ ಬಹುಪಾಲು ಮಂದಿ ಒಪ್ಪಿಕೊಳ್ಳುತ್ತಾರೆ. ಅಷ್ಟಕ್ಕೂ ಸತೀಶ್ ಜಾರಕಿಹೊಳಿ ಟೀಮ್ ಮುಂದಿನ ಸಿಎಂ ಪಟ್ಟ ಬೆಳಗಾವಿಗೆ ಅಂತ ಜಾಹೀರಾತು ನೀಡಿದ್ದು ಏಕೆ ಅನ್ನೋ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ