newsfirstkannada.com

ಕೊಹ್ಲಿ, ರೋಹಿತ್ ಭವಿಷ್ಯ ನಿರ್ಧರಿಸಲಿದ್ದಾರೆ ಅಗರ್ಕರ್! ನೂತನ ಆಯ್ಕೆ ಸಮಿತಿ ಮುಖ್ಯಸ್ಥನ ಮೇಲಿದೆ ದೊಡ್ಡ ಜವಾಬ್ದಾರಿ 

Share :

05-07-2023

    ಬಿಸಿಸಿಐ ಚೀಫ್​​​​ ಸೆಲೆಕ್ಟರ್​​ ಹಗ್ಗಜಗ್ಗಾಟಕ್ಕೆ ಬಿತ್ತು ತೆರೆ..!

    ಅಳೆದು ತೂಗಿ ತಂಡವನ್ನ ಪ್ರಕಟಿಸಬೇಕಿದೆ ಅಗರ್ಕರ್​​ ಟೀಂ

    ಅಗರ್ಕರ್​ಗೆ ವಿಶ್ರಮಿಸಲು ಸಮಯವಿಲ್ಲ, ಮುಳ್ಳಿನ ಹಾದಿ

ಯಾರಾಗ್ತಾರೆ ನೂತನ ಆಯ್ಕೆ ಸಮಿತಿ ಮುಖ್ಯಸ್ಥ ? ನಾಲ್ಕು ತಿಂಗಳಿಂದ ಉತ್ತರವಿಲ್ಲದ ಪ್ರಶ್ನೆಯಾಗಿತ್ತು. ಕೊನೆಗೂ ಅದಕ್ಕೆ ಆನ್ಸರ್ ಸಿಕ್ಕಿದೆ. ಟೀಮ್ ಇಂಡಿಯಾದ ಮಾಜಿ ಆಲ್​ರೌಂಡರ್​​ ಚೀಫ್​ ಸೆಲೆಕ್ಟರ್​​​ ಹುದ್ದೆ ಅಲಂಕರಿಸಿದ್ದಾರೆ.

ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥರ ಹಗ್ಗಜಗ್ಗಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. ರವಿ ಶಾಸ್ತ್ರಿ, ಸೆಹ್ವಾಗ್​​​​​​​​ ಹಾಗೂ ದಿಲೀಪ್​​ ವೆಂಗಸರ್ಕರ್​​​ ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆಂದು ಹೇಳಲಾಗ್ತಿತ್ತು. ಆದರೆ ಇವರನ್ನೆಲ್ಲಾ ಮಾಜಿ ಕ್ರಿಕೆಟಗ ಅಜಿತ್​ ಅಗರ್ಕರ್​ ನೂತನ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.

ಅಜಿತ್​​ ಅಗರ್ಕರ್​ ನೂತನ ಆಯ್ಕೆ ಸಮಿತಿ ಮುಖ್ಯಸ್ಥ..!

ಅಜಿತ್ ಅಗರ್ಕರ್​​​ ಚೀಫ್​ ಸೆಲೆಕ್ಟರ್ ರೇಸ್​​ನಲ್ಲಿ ಕೊನೆಗೂ ಗೆದ್ದು ಬೀಗಿದ್ದಾರೆ ನಿಜ. ಆದರೆ ಇವರ ಹಾದಿ ಹೂವಿನಿಂದ ಕೂಡಿಲ್ಲ. ಸಾಲು ಸಾಲು ಮುಳ್ಳಿನ ಹಾದಿಯಾಗಿದೆ. ಹೆಜ್ಜೆ ಹೆಜ್ಜೆಗೂ ಕಠಿಣ ಸವಾಲುಗಳಿವೆ.

ಏಷ್ಯಾಕಪ್​- ಏಕದಿನ ವಿಶ್ವಕಪ್​ ಟೀಮ್​ ಸಲೆಕ್ಷನ್​

ಅಜಿತ್ ಅಗರ್ಕರ್ ಮುಂದಿರೋ ಸಾಲು ಸಾಲು ಸವಾಲುಗಳಿವೆ. ಈಗಾಗಲೇ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟಗೊಂಡಿದೆ. ಆದರೆ ತಂಡವನ್ನ ಇನ್ನೂ ಆಯ್ಕೆ ಮಾಡಿಲ್ಲ. ಜೊತೆಗೆ ಅದಕ್ಕೂ ಮುನ್ನ ನಡೆಯುವ ಏಷ್ಯಾಕಪ್​​​​ಗು ತಂಡವನ್ನ ಆಯ್ಕೆ ಮಾಡಬೇಕಿದೆ. ಅಗರ್ಕರ್​​ ನೇತೃತ್ವದ ಆಯ್ಕೆ ಸಮಿತಿ ಅಳೆದು ತೂಗಿ ತಂಡವನ್ನ ಪ್ರಕಟಿಸಬೇಕಿದೆ.

ಕೊಹ್ಲಿ- ರೋಹಿತ್​ & ಸೀನಿಯರ್ಸ್​ ಭವಿಷ್ಯ ನಿರ್ಧಾರ

ತಂಡದಲ್ಲಿ 30 ಪ್ಲಸ್​​​​ ವಯಸ್ಸಿನ ಅನೇಕ ಆಟಗಾರರಿದ್ದಾರೆ. ವಿಶ್ವಕಪ್​​ ಬಳಿಕ ಕ್ಯಾಪ್ಟನ್ ರೋಹಿತ್​​​​ ಶರ್ಮಾ, ವಿರಾಟ್ ಕೊಹ್ಲಿ ಭವಿಷ್ಯ ಏನು ? ಜೊತೆಗೆ ಇನ್ನು ಕೆಲ ಆಟಗಾರರ ಫ್ಯೂಚರ್ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾದ ದೊಡ್ಡ ಜವಾಬ್ದಾರಿ ಇದೆ.

ವಿಶ್ವಕಪ್​ ನಂತರ ಟೆಸ್ಟ್​ -ಏಕದಿನ ತಂಡದ ಕ್ಯಾಪ್ಟನ್ ಆಯ್ಕೆ..?

ಒನ್ಡೇ ವಿಶ್ವಕಪ್​ ಬಳಿಕ ರೋಹಿತ್ ಶರ್ಮಾ ನಾಯಕತ್ವಕ್ಕೆ ಗುಡ್​ಬೈ ಹೇಳುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಕೊಟ್ಟರೆ ಏಕದಿನ ಮತ್ತು ಟೆಸ್ಟ್ ಮಾದರಿಗೆ ನೂತನ ನಾಯಕನನ್ನ ನೇಮಿಸುವ ಚಾಲೆಂಜ್​ ಎದುರಾಗಲಿದೆ.

ವರ್ಕ್​​ಲೋಡ್​ ಮ್ಯಾನೇಜ್​ಮೆಂಟ್​ಗೆ ಪ್ಲಾನ್​ ಏನು.?

ಸದ್ಯ ಟೀಮ್ ಇಂಡಿಯಾದಲ್ಲಿ ಇಂಜುರಿ ಅನ್ನೋದು ದೊಡ್ಡ ಪೆಡಂಭೂತದಂತೆ ಬೆಳೆದು ನಿಂತಿದೆ. ಸ್ಟಾರ್ ಆಟಗಾರರೆಲ್ಲಾ ಇಂಜುರಿಗೆ ತುತ್ತಾಗಿದ್ದಾರೆ. ಇದಕ್ಕೆ ಅತಿಯಾದ ವರ್ಕ್​ಲೋಡ್ ಕಾರಣ..ಇದನ್ನ ನೂತನ ಚೀಫ್ ಸೆಲೆಕ್ಟರ್​ ಹೇಗೆ ನಿಯಂತ್ರಣ ಮಾಡ್ತಾರೆ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ.

ಯಂಗ್​ ಇಂಡಿಯಾ ಕಟ್ಟುವ ಬಿಗ್​ ಚಾಲೆಂಜ್​.!

ಈಗಾಗಲೇ ಟಿ20 ತಂಡದಲ್ಲಿ ಯಂಗ್​ಸ್ಟರ್ಸ್​ ಹೆಚ್ಚು ಮಣೆ ಹಾಕಲಾಗಿದೆ. ಉಳಿದ ಎರಡು ಮಾದರಿಯಾದ ಏಕದಿನ ಮತ್ತು ಟೆಸ್ಟ್​​ನಲ್ಲೂ ಯಂಗ್​ ಇಂಡಿಯಾವನ್ನ ಕಟ್ಟಬೇಕಿದೆ. ಹಿರಿಯರನ್ನ ಬದಿಗೆ ಸರಿಸಿ, ಯುವಕರಿಗೆ ಅವಕಾಶ ನೀಡೋದು ಸುಲಭದ ಮಾತಲ್ಲ. ಹೀಗಾಗಿ ಕಠಿಣ ಸವಾಲಿದೆ.

ಯಂಗ್​ಸ್ಟರ್ಸ್​ ಆಯ್ಕೆಗೆ ಮಾನದಂಡ ಏನು ?

ಇತ್ತೀಚೆಗೆ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರರನ್ನ ಇಂಡಿಯಾಗೆ ಆಯ್ಕೆ ಮಾಡಲಾಗಿದೆ. ಆದರೆ ಇದಕ್ಕೆ ಭಾರೀ ಆಕ್ಷೇಪ ವ್ಯಕ್ತವಾಗ್ತಿದೆ. ಡೊಮೆಸ್ಟಿಕ್​​​ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಅನ್ನುವ ಕೂಗು ಕೇಳಿ ಬರ್ತಿದೆ. ನೂತನ ಚೀಫ್​ ಸೆಲೆಕ್ಟರ್​​​ ಆಯ್ಕೆ ಮಾನದಂಡಕ್ಕಿರೋ ಗೊಂದಲವನ್ನ ಬಗೆಹರಿಸಬೇಕಿದೆ.

ಹಿರಿಯ ಮತ್ತು ಕಿರಿಯರನ್ನ ಸಮಾಧಾನ ಮಾಡಬೇಕು

ಈಗಾಗಲೇ ಟೀಮ್ ಇಂಡಿಯಾದಲ್ಲಿ ಟ್ರಾನ್ಸಿಶನ್​ ಶುರುವಾಗಿದೆ. ಹಿರಿಯರಿಗೆ ಕೊಕ್​​ ನೀಡಿ ಯುವಕರಿಗೆ ಮಣೆ ಹಾಕಲು ಬಿಸಿಸಿಐ ಚಿಂತಿಸ್ತಿದೆ. ಹಾಗೊಂದು ವೇಳೆ ಮಾಡಿದ್ದೆ ಆದಲ್ಲಿ ಸೀನಿಯರ್ ಪ್ಲೇಯರ್ಸ್​ ಸಿಡಿದು ನಿಲ್ಲುವ ಸಾಧ್ಯತೆ ಇರುತ್ತೆ. ಇವರನ್ನ ಸಮಾಧಾನ ಮಾಡಬೇಕಾದ ಜವಾಬ್ದಾರಿ ಅಜಿತ್ ಅಗರ್ಕರ್​ ಅವರ ಹೆಗಲಿದೆ. ಇಷ್ಟೆ ಅಲ್ಲದೇ ಇನ್ನು ಕೆಲ ಚಾಲೆಂಜಸ್​ಗಳಿವೆ. ಅವುಗಳೆನ್ನೆಲ್ಲಾ ನೂತನ ಚೀಫ್​ ಸೆಲೆಕ್ಟರ್ ಹೇಗೆ ನಿಭಾಯಿಸ್ತಾರೆ ಅನ್ನೋದೆ ಸದ್ಯಕ್ಕಿರೋ ಯಕ್ಷಪ್ರಶ್ನೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೊಹ್ಲಿ, ರೋಹಿತ್ ಭವಿಷ್ಯ ನಿರ್ಧರಿಸಲಿದ್ದಾರೆ ಅಗರ್ಕರ್! ನೂತನ ಆಯ್ಕೆ ಸಮಿತಿ ಮುಖ್ಯಸ್ಥನ ಮೇಲಿದೆ ದೊಡ್ಡ ಜವಾಬ್ದಾರಿ 

https://newsfirstlive.com/wp-content/uploads/2023/07/Ajit-Agarkar.jpg

Load More