newsfirstkannada.com

ಶಾರುಖ್​​​ ಪುತ್ರಿ ಸುಹಾನಾ, ಬಾಲಿವುಡ್​​ ನಟ ಅಗಸ್ತ್ಯ ಡೇಟಿಂಗ್​ ಮಾಡ್ತಿದಾರಾ..? ಏನಿದು ಸ್ಟೋರಿ..?

Share :

06-11-2023

    ಯಾರ ಜತೆ ಸುತ್ತಾಡುತ್ತಿದ್ದಾರೆ ಶಾರುಖ್​​ ಪುತ್ರಿ ಸುಹಾನಾ ಖಾನ್?

    ಸುಹಾನಾ ಕಾರು ಹತ್ತುತ್ತಿದ್ದಂತೆ ಡೋರ್ ಕ್ಲೋಸ್ ಮಾಡಿದ ಅಗಸ್ತ್ಯ

    ಅಗಸ್ತ್ಯ ನಂದ ಯಾರ ಮೊಮ್ಮಗ ಎಂದು ಗೊತ್ತಾದ್ರೆ ಶಾಕ್ ಪಕ್ಕಾ!

ಬಾಲಿವುಡ್​ ಸಿನಿಮಾ ಇಂಡಸ್ಟ್ರಿಯ ಬಿಗ್ ಸ್ಟಾರ್, ಕಿಂಗ್ ಖಾನ್ ಶಾರುಖ್ ಖಾನ್ ಅವರು ಮೊನ್ನೆಯಷ್ಟೇ ತಮ್ಮ 58ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಸದ್ಯ ಇವರ ಮಗಳು ಸುಹಾನಾ ಖಾನ್ ಕೂಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದು ಅಗಸ್ತ್ಯ ನಂದ ಜೊತೆ ಸ್ಕ್ರೀನ್​ ಶೇರ್ ಮಾಡುತ್ತಿದ್ದಾರೆ.

ಈ ರಿಚ್ ಕಿಡ್ಸ್​ ನೆಟ್​ಫ್ಲಿಕ್ಸ್​ನ ಮೂಲಕ ಆರ್ಚೀಸ್ ಎನ್ನುವ ಸಿನಿಮಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಈ ಎಲ್ಲದರ ನಡುವೆ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದು, ಕೆಲ ಸಮಯ ಇಬ್ಬರೇ ಕಳೆಯುತ್ತಿದ್ದಾರೆ ಎಂದು ಬಾಲಿವುಡ್ ಅಂಗಳದಲ್ಲಿ ಪಿಸು ಮಾತುಗಳು ಕೇಳಿ ಬರುತ್ತಿವೆ.

View this post on Instagram

A post shared by Voompla (@voompla)

ಮುಂಬೈನಲ್ಲಿ ಮನೀಶ್ ಮಲ್ಹೋತ್ರಾ ಅವರು ಏರ್ಪಡಿಸಿದ್ದ ದೀಪಾವಳಿ ಪಾರ್ಟಿಯಲ್ಲಿ ಸುಹಾನಾ ಖಾನ್ ಹಾಗೂ ಅಗಸ್ತ್ಯ ನಂದ ಮತ್ತೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಪಾರ್ಟಿ ಮುಗಿದ ಮೇಲೆ ಮನೆಯಿಂದ ಹೊರ ಬಂದ ಶಾರುಕ್ ಪುತ್ರಿ ಸುಹಾನಾ ಕಾರು ಹತ್ತಲು ಹೋಗುತ್ತಾರೆ. ಈ ವೇಳೆ ಸುಹಾನಾಳ ಹಿಂದೆ ಬಂದ ಅಗಸ್ತ್ಯ ಬಾಯ್.. ಹೇಳುತ್ತಾ ಕಾರಿನ ಡೋರ್ ಕ್ಲೋಸ್ ಮಾಡಿದ್ದಾರೆ. ಈ ಬಗ್ಗೆ ಬಾಲಿವುಡ್​ ಅಂಗಳದಲ್ಲಿ ಬೇರೆಯದ್ದೇ ಮಾತುಗಳು ಸದ್ದು ಮಾಡುತ್ತಿವೆ. ಇಬ್ಬರು ಸಿನಿಮಾ ಮಾಡುತ್ತಿದ್ದಾರೆ ಅಷ್ಟೇ, ಆದ್ರೆ ಪಾರ್ಟಿಗಳಲ್ಲಿ ಇಬ್ಬರು ಕಾಣಿಸಿಕೊಳ್ಳುತ್ತಿರುವುದು ನೋಡಿದರೆ ಏನೋ ನಡೆಯುತ್ತಿದೆ ಎಂದು ಫ್ಯಾನ್ಸ್​ ಹೇಳುತ್ತಿದ್ದಾರೆ.

ಇನ್ನು ಅಗಸ್ತ್ಯ ನಂದ ಯಾರು ಎಂಬುದು ಕೇಳಿದ್ರೆ ನಿಮಗೆ ಶಾಕ್ ಆಗಬಹುದು. ಹೌದು ರಾಜ್​ ಕಪೂರ್​ ಹಾಗೂ ಬಾಲಿವುಡ್​ ಬಿಗ್​ ಬೀ ಅಮಿತಾಬ್​ ಬಚ್ಚನ್ ಅವರ ಮೊಮ್ಮಗನೇ ಅಗಸ್ತ್ಯ. ಈಗಾಗಲೇ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟಿರುವ ಅಗಸ್ತ್ಯ, ಸುಹಾನಾ ಜೊತೆಗೆ ಆರ್ಚೀಸ್ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಜೋಯಾ ಅಖ್ತರ್ ಮತ್ತು ರೀಮಾ ಕಾಗ್ತಿ ನಿರ್ದೇಶನ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಾರುಖ್​​​ ಪುತ್ರಿ ಸುಹಾನಾ, ಬಾಲಿವುಡ್​​ ನಟ ಅಗಸ್ತ್ಯ ಡೇಟಿಂಗ್​ ಮಾಡ್ತಿದಾರಾ..? ಏನಿದು ಸ್ಟೋರಿ..?

https://newsfirstlive.com/wp-content/uploads/2023/11/Suhana_Khan.jpg

Load More