26 ವರ್ಷದ ಮಹಿಳೆಯ ಮೇಲೆ ರಾಕ್ಷಸನಾಗಿ ಎರಗಿದ ಯೋಧ
ರೇಪ್ ಆರೋಪಿ ಕಾನ್‌ಸ್ಟಾಬ್ಯುಲರಿ ಪಿಎಸಿ ಜವಾನ್ ಪೊಲೀಸರ ವಶಕ್ಕೆ
ಬೂಟ್ಗಳಿಂದ ನನಗೆ ಮನಬಂದಂತೆ ಥಳಿಸಿದ್ದಾರೆ- ಸಂತ್ರಸ್ತೆ ಮಹಿಳೆ
ಲಕ್ನೋ: 26 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 30 ವರ್ಷದ ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ ಪಿಎಸಿ ಜವಾನ್ನನ್ನು ಆಗ್ರಾ ಪೊಲೀಸರು ಬಂಧಿಸಿದ್ದಾರೆ. ಕಾನ್ಪುರದ ಪಿಎಸಿ ಬೆಟಾಲಿಯನ್‌ನಲ್ಲಿದ್ದ 30 ವರ್ಷದ ಆರೋಪಿ ಯೋಧನನ್ನು ಅರೆಸ್ಟ್ ಮಾಡಲಾಗಿದೆ.
ಪೊಲೀಸರ ಮುಂದೆ ಸಂತ್ರಸ್ತೆ ಮಹಿಳೆ ಹೇಳಿದ್ದೇನು?
ಸಂಜೆ ಮದುವೆ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಪರಿಚಯವಿದ್ದ ಜವಾನ್ ನನ್ನನ್ನು ಡ್ರಾಪ್ ಮಾಡುವುದಾಗಿ ಹೇಳಿದ್ದರು. ಬಳಿಕ ನಾನು ಅವರ ಜೊತೆ ಬೈಕ್ನಲ್ಲಿ ಹೋದೆ. ಅವರು ಕರೆದುಕೊಂಡು ಹೋದ ಸ್ಥಳದಲ್ಲಿ ಇನ್ನೂ ಮೂವರು ಇದ್ದರು. ಆಗ ಒಬ್ಬ ವ್ಯಕ್ತಿ ನನ್ನನ್ನು ಬಲವಂತವಾಗಿ ಕೋಣೆಗೆ ಕರೆದೊಯ್ದು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದಾನೆ. ಹಾಗೇ ತನ್ನ ಮೊಬೈಲ್ ಫೋನ್‌ನಲ್ಲಿ ಕೃತ್ಯವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ತನ್ನ ಬೂಟ್ಗಳಿಂದ ನನಗೆ ಮನಬಂದಂತೆ ಥಳಿಸಿದ್ದಾರೆ ಎಂದು ಸಂತ್ರಸ್ತೆ ಮಹಿಳೆ ಕಾನ್ಪುರದ ಪಿಎಸಿ ಬೆಟಾಲಿಯನ್ ಅವರ ಬಳಿ ಹೇಳಿಕೊಂಡಿದ್ದಾರೆ.
ಸದ್ಯ ಆಗ್ರಾ ಪೊಲೀಸ್ ಅಧಿಕಾರಿಗಳು ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಮೂವರನ್ನು ಸೆಕ್ಷನ್ 376 (ಅತ್ಯಾಚಾರ), 342 (ತಪ್ಪಾದ ಬಂಧನ) ಮತ್ತು 352 (ಹಲ್ಲೆಗೆ ಶಿಕ್ಷೆ) ಮತ್ತು ಐಟಿ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಆಗ್ರಾ ಉಪ ಪೊಲೀಸ್ ಆಯುಕ್ತ ಸೋನಮ್ ಕುಮಾರ್ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ