ಜಬರ್ದಸ್ತ್ ಟ್ರೇಲರ್, ಮಸ್ತ್ ಸಾಂಗ್ಸ್, ಹೊಸಬರ ಭರವಸೆ ಚಿತ್ರ ನಾಳೆ ಬಿಡುಗಡೆ
ಸ್ಯಾಂಡಲ್ವುಡ್ಗೆ ಈ ವಾರ ಅದ್ಧೂರಿಯಾಗಿ ಎಂಟ್ರಿ ಕೊಡುತ್ತಿದೆ ಅಗ್ರಸೇನಾ ಚಿತ್ರ
ಈ ಅಗ್ರಸೇನಾ ಚಿತ್ರಕ್ಕೆ ಮುರುಗೇಶ್ ಕಣ್ಣಪ್ಪ ಕಥೆ, ಚಿತ್ರಕಥೆ, ನಿರ್ದೇಶನ ಮಾಡಿದ್ದಾರೆ
ಜಬರ್ದಸ್ತ್ ಟ್ರೇಲರ್, ಮಸ್ತ್ ಮಸ್ತ್ ಸಾಂಗ್ಸ್, ಹೊಸಬರ ಭರವಸೆಯ ಚಿತ್ರ ಅಗ್ರಸೇನಾ. ಈ ವಾರ ಅಗ್ರಸೇನಾ ರಿಲೀಸ್ ಆಗಲು ಸಜ್ಜಾಗಿದೆ. ಸ್ಯಾಂಡಲ್ವುಡ್ನಲ್ಲಿ ಈ ವಾರ ಅಗ್ರಸೇನಾನ ಅದ್ಧೂರಿ ಎಂಟ್ರಿ ಆಗ್ತಿದೆ. ಟ್ರೇಲರ್, ಸಾಂಗ್ಸ್ ಮೂಲಕ ಭರವಸೆ ಮೂಡಿಸಿರುವ ಅಗ್ರಸೇನಾ ಶುಭ ಶುಕ್ರವಾರ ಪ್ರೇಕ್ಷಕರ ಎದುರು ಬರ್ತಿದೆ. ಅಗ್ರಸೇನಾ ಪ್ಯೂರ್ಲಿ ಕಮರ್ಷಿಯಲ್ ಎಂಟರ್ಟೈನ್ಮೆಂಟ್ ಸಿನಿಮಾ. ಆಕ್ಷನ್ ಫ್ಯಾಮಿಲಿ, ಲವ್, ಸೆಂಟಿಮೆಂಟ್ ಎಲ್ಲಾ ರೀತಿಯ ಅಂಶಗಳನ್ನು ಒಳಗೊಂಡ ಚಿತ್ರ. ಈ ಚಿತ್ರದ ಮೂಲಕ ಅಮರ್ ವಿರಾಜ್ ಮತ್ತು ಅಗಸ್ತ್ಯ ಬೆಳಗೆರೆ ಇಬ್ಬರು ನಾಯಕರಾಗಿ ಎಂಟ್ರಿ ಕೊಡುತ್ತಿದ್ದರೆ, ರಚನಾ ದಶರಥ್, ಭಾರತಿ ಹೆಗ್ಡೆ ಇಬ್ಬರು ಹೀರೋಯಿನ್.
ಹಳ್ಳಿ ಹಾಗೂ ನಗರದಲ್ಲಿ ಡಬಲ್ ಟ್ರ್ಯಾಕ್ನಲ್ಲಿ ಸಾಗುವ ಕಥಾಹಂದರ ಹೊಂದಿದ್ದು, ತಂದೆ-ಮಗನ ಸಂಬಂಧದ ಕಥೆ ಒಂದು ಕಡೆಯಾದರೆ, ನಾಯಕ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಹೇಗೆ ಹೋರಾಡುತ್ತಾನೆ ಎನ್ನುವುದು ಮತ್ತೊಂದು ಟ್ರಾಕ್‌ನಲ್ಲಿ ಸಾಗುತ್ತದೆ. ಇನ್ನು ಮುರುಗೇಶ್ ಕಣ್ಣಪ್ಪ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮಮತಾ ಜಯರಾಮರೆಡ್ಡಿ ಹಾಗೂ ಜಯರಾಮರೆಡ್ಡಿ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ನಿರ್ಮಾಪಕರ ಪುತ್ರಿ ತನಿಶರೆಡ್ಡಿ ಸಹ ಚಿತ್ರದ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಹಿರಿಯ ನಟ ರಾಮಕೃಷ್ಣ ಅವರು ಗ್ರಾಮದ ಮುಖಂಡ ಸೂರಪ್ಪ ಹಾಗೂ ನಾಯಕನ ತಂದೆಯ ಪಾತ್ರ ನಿರ್ವಹಿಸಿದ್ದು, ಇದು ಅವರ 200ನೇ ಚಿತ್ರ ಎನ್ನುವುದು ವಿಶೇಷ. ಇನ್ನುಳಿದಂತೆ ಎಂ.ಎಸ್. ತ್ಯಾಗರಾಜ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, 6 ಹಾಡುಗಳಿವೆ. ಈ ಶುಕ್ರವಾರ ಒಂದೊಳ್ಳೆ ಸಿನಿಮಾ ನೋಡಬೇಕು ಅಂತಾ ಅಂದುಕೊಂಡಿದ್ರೆ ಅಗ್ರಸೇನಾ ಕಡೆ ಒಂದು ರೌಂಡ್ ಹೋಗಿಬರಬಹುದು.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ