ಬಿಜೆಪಿ ಜೊತೆ ಸೇರಲ್ಲ ಅಂತ ದೇವೇಗೌಡರು ಅನೇಕ ಬಾರಿ ಹೇಳುತ್ತಿದ್ದರು
ಮಾಜಿ ಸಿಎಂ HD ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಕೃಷಿ ಸಚಿವ
ದೇವೇಗೌಡರನ್ನ ಬಿಟ್ಟರೆ ಕುಮಾರಸ್ವಾಮಿ ಅವರ ಪವರ್ ಏನು- ಸಚಿವರ ಪ್ರಶ್ನೆ
ಮಂಡ್ಯ: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಕೃಷಿ ಸಚಿವ ಚಲುವರಾಯಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಂದೆ ಜೀವಂತವಾಗಿದ್ದಾಗ ಮಗ 2 ಬಾರಿ ಮುಖ್ಯಮಂತ್ರಿ ಆದ ಇತಿಹಾಸ ಏನಾದ್ರೂ ಇದೆಯಾ ಎಂದು ಪ್ರಶ್ನೆ ಮಾಡಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ ಅವರು, ರಾಜ್ಯದಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದಕ್ಕೆ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. ನಾನೇನಾದರೂ ಹೆಚ್.ಡಿ ದೇವೇಗೌಡರ ಮಗನಾಗಿದ್ದರೇ ಅವರಿಗೆ ನೋವು ಕೊಟ್ಟು ರಾಜಕೀಯ ಮಾಡುತ್ತಿರಲಿಲ್ಲ. ಇವತ್ತೇ ನನ್ನ ರಾಜಕೀಯ ಭವಿಷ್ಯ ಕೊನೆ ಆಗುತ್ತದೆ ಎಂದಾದರೂ ದೇವೇಗೌಡರಿಗೆ ದುಃಖ ಕೊಡುತ್ತಿರಲಿಲ್ಲ. ಯಾವತ್ತೂ ಬಿಜೆಪಿ ಜೊತೆ ಸೇರಲ್ಲ ಎಂದು ದೊಡ್ಡಗೌಡರು ಹೇಳುತ್ತಿದ್ದರು. ಕುಮಾರಸ್ವಾಮಿ 2 ಬಾರಿ ಸಿಎಂ ಆಗಿದ್ದಾರೆ. ಆದ್ರೆ ಈಗ ಬಿಜೆಪಿ ಜೊತೆ ಮೈತ್ರಿ ಆಗೋಗಿದೆ. ದೇವೇಗೌಡರನ್ನ ಬಿಟ್ಟು ವಿತ್ ಔಟ್ ಕುಮಾರಸ್ವಾಮಿ ಏನು ಎಂದು ಸಚಿವರು ಪ್ರಶ್ನಿಸಿದ್ದಾರೆ.
ಬೇರೆ ಯಾರಾದರೂ ತಂದೆ ಬದುಕಿಗಿದ್ದಾಗ ಮಗ 2 ಬಾರಿ ಸಿಎಂ ಆಗಿರುವ ಇತಿಹಾಸ ಏನಾದ್ರೂ ಇದೆಯಾ. ಅಂತಹ ತಂದೆಗೆ ನೋವು ಮಾಡಿ ಅಮಿತ್ ಶಾ ಜೊತೆ ಸೇರಿಕೊಂಡಿದ್ದಾರೆ. ಇದನ್ನೆಲ್ಲ ನೋಡಿದರೇ ಬಿಜೆಪಿ, ಜೆಡಿಎಸ್ ಪರಿಸ್ಥಿತಿ ಏನಾಗಿದೆಂದು ಅರ್ಥ ಆಗುತ್ತೆ. ಸದ್ಯ ಅವರು ಇರುವ ಹೀನಾಯ ಪರಿಸ್ಥಿತಿಯಿಂದ ಕಾಂಗ್ರೆಸ್ ವಿರುದ್ಧ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ನಮ್ಮ ಸರ್ಕಾರದಲ್ಲಿ ಒಂದು ಸಣ್ಣ ವ್ಯತ್ಯಾಸ ಕೂಡ ಆಗಲ್ಲ, 5 ವರ್ಷ ಇದ್ದೇ ಇರುತ್ತೆ. ಏನಾದ್ರೂ ಆದರೇ ಆ ಮೇಲೆ ನನ್ನನ್ನು ಪ್ರಶ್ನೆ ಮಾಡಿ ಎಂದು ಹೇಳಿದ್ದಾರೆ.
ಸರ್ಕಾರದ ಜತೆ ಫೈಟ್ ಮಾಡಲು ವಿರೋಧ ಪಕ್ಷದ ನಾಯಕನಿಲ್ಲ
ಬಿಜೆಪಿ, ಜೆಡಿಎಸ್ ಶಕ್ತಿ ಹೀನರಾಗಿದ್ದು ಅವರ ಕೈಯಲ್ಲಿ ಲೋಕಸಭಾ ಚುನಾವಣೆ ಎದುರಿಸಲಾಗುತ್ತಿಲ್ಲ. ಅವರನ್ನು ಕಂಡರೆ ನನಗೂ ಅಯ್ಯೋ ಎನಿಸುತ್ತದೆ. ಬಿಜೆಪಿಯವರಿಗೆ ಸುಮ್ಮನೇ ಕೂರುವುದಕ್ಕೆ ಆಗದೇ ಕೈ ಪರಚಿಕೊಳ್ಳುತ್ತಿದ್ದು ಅತ್ಯಂತ ಹೀನಾಯ ಪರಿಸ್ಥಿತಿಯಲ್ಲಿದ್ದಾರೆ. ಸದ್ಯ ಅವರು ಮುಖಂಡರನ್ನ ಸೌಜನ್ಯಕ್ಕೆ ಮಾತಾಡಿಸಲು ಸಿದ್ಧರಿಲ್ಲ. 66 ಸ್ಥಾನಕ್ಕೆ ಬಿಜೆಪಿ ಕುಸಿದಿರೋದು ಮೋದಿ, ಅಮಿತ್ ಶಾಗೆ ಜೀರ್ಣಿಸಿಕೊಳ್ಳಲಾಗ್ತಿಲ್ಲ. ರಾಜ್ಯದಲ್ಲಿ ಬರಗಾಲ, ಕಾವೇರಿ ಸಮಸ್ಯೆ ಇದ್ದರೂ ಸರ್ಕಾರದ ಜತೆ ಫೈಟ್ ಮಾಡಲು ವಿರೋಧ ಪಕ್ಷದ ನಾಯಕನಿಲ್ಲ. ಇದಕ್ಕೆ ಮುಖ್ಯ ಕಾರಣನೇ ರಾಜ್ಯದ ಬಿಜೆಪಿ ನಾಯಕರ ಮೇಲೆ ಮೋದಿ, ಶಾ, ನಡ್ಡಾಗೆ ವಿಶ್ವಾಸವೇ ಇಲ್ಲ. ಅವರೇನು ನನಗೆ ವೈರಿನೇ ಎಂದು ಹೇಳುವ ಮೂಲಕ ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ