ವಿಜಯೇಂದ್ರ ಒಳ್ಳೆಯವನು, ಅವನ ಬಗ್ಗೆ ನನಗೆ ಗೌರವವಿದೆ
ಎಲ್ಲ ಪಕ್ಷದಲ್ಲಿಯು ಕುಟುಂಬ ರಾಜಕಾರಣ ಇದ್ದದ್ದೆ ಎಂದ ಕೃಷಿ ಸಚಿವ
ವಿಜಯೇಂದ್ರರನ್ನ ಮಂತ್ರಿ ಮಾಡಿ ಅಂದಾಗ ಮಾಡ್ಲಿಲ್ಲ ಎಂದ ಚಲುವರಾಯಸ್ವಾಮಿ
ಮಂಡ್ಯ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕ ವಿಚಾರವಾಗಿ ಕೃಷಿ ಸಚಿವ ಚಲುವರಾಯಸ್ವಾಮಿ ವ್ಯಂಗ್ಯ ನುಡಿದಿದ್ದಾರೆ. ಬಿಜೆಪಿ ಒಡೆದ ಮಡಕೆ, ಎಷ್ಟೇ ನೀರು ಸುರಿದ್ರು ನೀರು ನಿಲ್ಲಲ್ಲ ಎಂದು ಹೇಳಿದ್ದಾರೆ.
ಮಂಡ್ಯದ ನಾಗಮಂಗಲದಲ್ಲಿ ಮಾತನಾಡಿದ ಚಲುವರಾಯಸ್ವಾಮಿ, ವಿಜಯೇಂದ್ರ ಒಳ್ಳೆಯವನು, ಅವನ ಬಗ್ಗೆ ನನಗೆ ಗೌರವವಿದೆ, ವಿಜಯೇಂದ್ರ ನನ್ನ ಸ್ನೇಹಿತ. ಯಡಿಯೂರಪ್ಪನವರ ಬಗ್ಗೆಯು ಗೌರವವಿದೆ. ಯಡಿಯೂರಪ್ಪನವರನ್ನು ತೆಗೆದು ಹಾಕಿದ್ರಲ್ಲ ಅವತ್ತೇ ಬಿಜೆಪಿ ಮಡಕೆ ಹೊಡೆದು ಹೋಯ್ತು ಎಂದು ಹೇಳಿದ್ದಾರೆ.
ವಿಜಯೇಂದ್ರರನ್ನ ಮಂತ್ರಿ ಮಾಡಿ ಅಂದಾಗ ಮಾಡ್ಲಿಲ್ಲ. ಪರಿಸ್ಥಿತಿ ಗೊತ್ತಾಗಿ ಇವಾಗ ಅದನ್ನ ಪ್ಯಾಚಪ್ ಮಾಡೋಕೆ ಹೋಗಿದ್ದಾರೆ. ಹಿಂದೆ ಯಡಿಯೂರಪ್ಪ ಇದ್ದಾಗ ಬಿಜೆಪಿಗೆ ಇದ್ದ ಶಕ್ತಿ ಯಾವುದೇ ಕಾರಣಕ್ಕೂ ಆಗಲ್ಲ. ಯಡಿಯೂರಪ್ಪ ಇದ್ದಾಗಲೇ 115 ದಾಟಿಲ್ಲ. ಇವಾಗ ಆ ಶಕ್ತಿ ಬರೋದೆ ಇಲ್ಲ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.
ಇದನ್ನು ಓದಿ:4 ವರ್ಷ, 1589 ದಿನ.. ಅಂದು ಟೀಂ ಇಂಡಿಯಾ ಕ್ರಿಕೆಟಿಗರು ಸುರಿಸಿದ ಕಣ್ಣೀರಿಗೆ ಬ್ರೇಕ್ ಹಾಕಲು ಬಂತು ಟೈಮ್!
ಬಳಿಕ ಬಿಜೆಪಿಯಿಂದ ವಂಶ ರಾಜಕಾರಣ ವಿಚಾರವಾಗಿ ಮಾತನಾಡಿದ ಅವರು, ವಂಶನಾದ್ರು ಮಾಡ್ಲಿ ಇನ್ನೊಂದಾದ್ರು ಮಾಡ್ಲಿ. ನಾನು ಮಾತನಾಡಲ್ಲ. ಎಲ್ಲ ಪಕ್ಷದಲ್ಲಿಯು ಕುಟುಂಬ ರಾಜಕಾರಣ ಇದ್ದದ್ದೆ. ಕುಮಾರಸ್ವಾಮಿ ವಂಶ ರಾಜಕಾರಣ ಮಾಡ್ತಿಲ್ವ. ಎಲ್ಲ ಪಾರ್ಟಿಯಲ್ಲಿ ವಂಶ ರಾಜಕಾರಣ ಇರುತ್ತೆ. ಜೆಪಿ ಪಾರ್ಲಿಮೆಂಟ್ ಎಲೆಕ್ಷನ್ ನಲ್ಲಿ ರೀಚ್ ಆಗೋಕೆ ಆಗಲ್ಲ. ಕುಮಾರಸ್ವಾಮಿಯನ್ನ ಸೇರಿಸಿಕೊಳ್ಳೋಕೆ ಹೇಗೆ ಓಡಾಡ್ತಿದ್ದಾರೆ, ಹಾಗೆಯೇ ಇವರನ್ನ ರಾಜ್ಯಾಧ್ಯಕ್ಷರಾಗಿ ಮಾಡಿದ್ದಾರೆ ಎಂದಿದ್ದಾರೆ.
ಮುಂದಿನ ಲೋಕಸಭಾ ಕ್ಷೇತ್ರದಲ್ಲಿ 28 ಕ್ಷೇತ್ರ ಗೆಲ್ಲುತ್ತೇವೆ ಎಂಬ ಬಿಜೆಪಿ ವಿಶ್ವಾಸ ಬಗ್ಗೆ ಉತ್ತರಿಸಿದ ಕೃಷಿ ಸಚಿವ ಚಲುವರಾಯಸ್ವಾಮಿ. ಈ ಸಲ ಬಿಜೆಪಿ ಸಂಸದರು ರಾಜ್ಯದಲ್ಲಿ 10 ಕ್ಕಿಂತಲು ಕಡಿಮೆ ಆಗ್ತಾರೆ ಎಮದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ