newsfirstkannada.com

ವಿಶ್ವಕಪ್​ ಫೈನಲ್ ವೀಕ್ಷಣೆಗಾಗಿ ಗುಜರಾತ್​ಗೆ ಹೋಗ್ತಿರೋರಿಗೆ ಕಾದಿದೆ ಬಿಗ್ ಶಾಕ್.. ಏನದು ಗೊತ್ತಾ..!?

Share :

18-11-2023

  ನಾಳೆ ಅಹಮದಾಬಾದ್​​ನಲ್ಲಿ ವಿಶ್ವಕಪ್​ ಫೈನಲ್ ಪಂದ್ಯ

  ಆಸ್ಟ್ರೇಲಿಯಾ-ಭಾರತ ನಡುವೆ ಹೈ-ವೋಲ್ಟೇಜ್ ಪಂದ್ಯ

  ಟಿಕೆಟ್​ಗಳು ಸೋಲ್ಡ್​ ಔಟ್, ಹೋಟೆಲ್​ಗಳಂತೂ ದುಬಾರಿ

ಏಕದಿನ ವಿಶ್ವಕಪ್ ಫೈನಲ್‌ ಪಂದ್ಯ ಹಿನ್ನೆಲೆ ಅಹಮದಾಬಾದ್‌ನ ಹೋಟೆಲ್ ಕೊಠಡಿಗಳ ದರ ಹಾಗೂ ವಿಮಾನ ಪ್ರಯಾಣದ ಟಿಕೆಟ್ ದರ ಗಗನಕ್ಕೇರಿದೆ.

ಇಂಡಿಯಾ-ಪಾಕಿಸ್ತಾನದ ಪಂದ್ಯದ ನಂತರ ಮತ್ತೆ ನರೇಂದ್ರ ಮೋದಿ ಸ್ಟೇಡಿಯಂ ಸುತ್ತಮುತ್ತಲಿನ ಹೊಟೇಲ್‌ಗಳಿಗೆ ಭಾರಿ ಡಿಮಾಂಡ್ ಸೃಷ್ಟಿಯಾಗಿದ್ದು, ಪೈನಲ್​ ಪಂದ್ಯವನ್ನು ನೇರವಾಗಿ ವೀಕ್ಷಿಸಲು ಉತ್ಸುಕರಾಗಿರುವ ಕ್ರೀಡಾಭಿಮಾನಿಗಳು ಬೆಲೆ ಏರಿಕೆಯ ಸವಾಲು ಎದುರಿಸುತ್ತಿದ್ದಾರೆ. ಈಗಾಗಲೆ ಫೈನಲ್ ಪಂದ್ಯದ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಸಂಪೂರ್ಣವಾಗಿ ಮಾರಾಟಗೊಂಡಿದ್ದು 10 ಸಾವಿರ ರೂಪಾಯಿ ಮುಖಬೆಲೆಯ ಟಿಕೆಟ್ ಅತಿ ಕನಿಷ್ಠ ಎನಿಸಿದೆ.

ಸಾಮಾನ್ಯವಾಗಿ 24 ಸಾವಿರ ರೂಪಾಯಿಗೆ ಲಭ್ಯವಿರುವ ತ್ರಿ-ಸ್ಟಾರ್ ಹೋಟೆಲ್ ಕೊಠಡಿಗಳ ಒಂದು ದಿನದ ಬಾಡಿಗೆ ಈಗ 2 ಲಕ್ಷ ರೂಪಾಯಿಗೂ ಹೆಚ್ಚಾಗಿದೆ. ಇನ್ನು ವಿಮಾನ ಪ್ರಯಾಣ ದರವೂ ಶೇ.200 ರಿಂದ 300ರಷ್ಟು ಹೆಚ್ಚಳವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಶ್ವಕಪ್​ ಫೈನಲ್ ವೀಕ್ಷಣೆಗಾಗಿ ಗುಜರಾತ್​ಗೆ ಹೋಗ್ತಿರೋರಿಗೆ ಕಾದಿದೆ ಬಿಗ್ ಶಾಕ್.. ಏನದು ಗೊತ್ತಾ..!?

https://newsfirstlive.com/wp-content/uploads/2023/11/World-Cup-3.jpg

Load More