ದಕ್ಷಿಣ ಭಾರತದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾಗೆ ಬಿಗ್ ಶಾಕ್..!
ಬಿಜೆಪಿ ಬಹುದೊಡ್ಡ ಸಂಕಷ್ಟ ತಂದಿಟ್ಟ ತಮಿಳುನಾಡು ರಾಜ್ಯಾಧ್ಯಕ್ಷ
ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅಂಥದ್ದೇನು ಮಾಡಿದ್ರು?
ಚೆನ್ನೈ: ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದ ಬಿಜೆಪಿಗೆ ಮತ್ತೊಂದು ಆಘಾತ ಎದುರಾಗಿದೆ. ಇಡೀ ದಕ್ಷಿಣ ಭಾರತದಲ್ಲೇ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರೋ ಏಕೈಕ ಪಕ್ಷ ಎಐಎಡಿಎಂಕೆ. ಈಗ ತಮಿಳುನಾಡಿನಲ್ಲಿ ಬಿಜೆಪಿ ಜೊತೆ ಮೈತ್ರಿಗೆ ಅಂತ್ಯವಾಡಲು ಎಐಎಡಿಎಂಕೆ ಮುಂದಾಗಿದೆ. ಇದಕ್ಕೆ ಕಾರಣ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಮಾಜಿ ಸಿಎಂ ಜಯಲಲಿತಾ ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆ. ಅದರಲ್ಲೂ ತಮಿಳುನಾಡಿನಲ್ಲಿ ಅಮ್ಮ ಎಂದೇ ಖ್ಯಾತಿಯಾದ ಜಯಲಲಿತಾ ಅವರನ್ನೇ ಅಣ್ಣಾಮಲೈ ಭ್ರಷ್ಟ ಸಿಎಂ ಎಂದು ಕರೆದಿದ್ದು ಎಐಎಡಿಎಂಕೆ ಈ ನಿರ್ಧಾರಕ್ಕೆ ಬರಲು ಕಾರಣ.
ಜಯಲಲಿತಾ ಕುರಿತು ಅಣ್ಣಾಮಲೈ ಹೇಳಿದ್ದೇನು..?
ತಮಿಳುನಾಡು ಭಾರತದಲ್ಲೇ ಅತ್ಯಂತ ಭ್ರಷ್ಟ ರಾಜ್ಯವಾಗಿದೆ. ಇದುವರೆಗೂ ಅಧಿಕಾರಕ್ಕೆ ಬಂದ ಎಲ್ಲಾ ಪಕ್ಷಗಳು ಭ್ರಷ್ಟಾಚಾರದಲ್ಲೇ ಮುಳುಗಿದ್ದವು. ಮಾಜಿ ಸಿಎಂ ಜಯಲಲಿತಾ ಅವರೇ ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಸೇರಿದ್ದರು. ಜಯಲಲಿತಾ ಆಪ್ತೆ ಶಶಿಕಲಾ ಮತ್ತಿತರ ನಾಯಕರು ಕೂಡ ಅಕ್ರಮ ಆಸ್ತಿ ಗಳಿಕೆ ಕೇಸ್ನಲ್ಲಿ ಜೈಲಿಗೆ ಹೋಗಿದ್ದರು.
– ಅಣ್ಣಾಮಲೈ, ತಮಿಳುನಾಡು ಬಿಜೆಪಿ ಅಧ್ಯಕ್ಷ
ಅಣ್ಣಾಮಲೈ ವಿರುದ್ಧ ಎಐಎಡಿಎಂಕೆ ಕೆಂಡಾಮಂಡಲ
ಇನ್ನು, ಈ ಕುರಿತು ಪತ್ರಿಕಾ ಹೇಳಿಕೆ ನೀಡಿರೋ ಎಐಎಡಿಎಂಕೆ, ಅಣ್ಣಾಮಲೈ ಏನಾದ್ರೂ ಮಾತಾಡೋ ಮುನ್ನ ಎಚ್ಚರಿಕೆ ವಹಿಸಬೇಕು. ಮುಂದಿನ ದಿನಗಳಲ್ಲಿ ನಾಲಿಗೆ ಹಿಡಿತದಲ್ಲಿಟ್ಟುಕೊಂಡು ಮಾತಾಡಿದರೆ ಒಳ್ಳೆಯದು. ಹೀಗೆ ಮಾತಾಡುತ್ತಾ ಹೋದರೆ ನಾವು ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಳ್ಳುವ ನಿರ್ಧಾರ ಮಾಡಬೇಕಾಗುತ್ತದೆ. ಕೂಡಲೇ ಬಿಜೆಪಿ ಅಣ್ಣಾಮಲೈ ವಿರುದ್ಧ ಕ್ರಮಕೈಗೊಳ್ಳಬೇಕು. ಆತನಿಗೆ ಒಂದು ಪಕ್ಷದ ರಾಜ್ಯಾಧ್ಯಕ್ಷನಾಗುವ ಅರ್ಹತೆ ಇಲ್ಲ ಎಂದು ಆಕ್ರೋಶ ಹೊರಹಾಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ