newsfirstkannada.com

ವಾರ್ಡ್​​ ಸದಸ್ಯನನ್ನು ಅಟ್ಟಾಡಿಸಿ ತುಂಡು ತುಂಡಾಗಿ ಕತ್ತರಿಸಿದ ಹಂತಕರು.. ಕಾರಣವೇನು?

Share :

22-10-2023

    ವಾರ್ಡ್ ಸದಸ್ಯ ಅನ್ಬರಸು ಕಾರನ್ನು ಅಡ್ಡಗಟ್ಟಿ ಚೇಸ್ ಮಾಡಿದ್ರು!​

    ಎಐಎಡಿಎಂಕೆ ವಾರ್ಡ್ ಸದಸ್ಯನ ಕೊಲೆ ಮಾಡಿದ ಹಂತಕರು

    ಚೆಂಗಲ್ಪಟ್ಟು ಜಿಲ್ಲೆಯ ವಂಡಲೂರು ಬಳಿ ನಡೆಯಿತು ಈ ಕೃತ್ಯ

ಚೆನ್ನೈ: ದುಷ್ಕರ್ಮಿಗಳ ಗ್ಯಾಂಗ್​ವೊಂದು ಎಐಎಡಿಎಂಕೆ ವಾರ್ಡ್ ಸದಸ್ಯನನ್ನು ಬರ್ಬರವಾಗಿ ಕೊಲೆ ಮಾಡಿರೋ ಘಟನೆ ಚೆಂಗಲ್ಪಟ್ಟು ಜಿಲ್ಲೆಯ ವಂಡಲೂರು ಬಳಿ ನಡೆದಿದೆ. ಅನ್ಬರಸು ಮೃತ ಸದಸ್ಯ.

ಮೃತ ಅನ್ಬರಸು ಆಡಳಿತರೂಢ ಪಕ್ಷ ಎಡಿಎಂಕೆ ಪಂಚಾಯತ್ ಅಧ್ಯಕ್ಷರ ಎರಡನೇ ಪುತ್ರ. ಇವರು ಜಿಲ್ಲೆಯ ವಂಡಲೂರು ಪಕ್ಕದಲ್ಲಿರುವ ವೆಂಕಟಮಂಗಲದ 9ನೇ ವಾರ್ಡ್​ನ ಸದಸ್ಯರಾಗಿದ್ದರು. ನಿನ್ನೆ ರಾತ್ರಿ ಕೀರಪ್ಪಕ್ಕಂನ ತುಲ್ಕುಂಠಮ್ಮನ್ ಟೆಂಪಲ್ ಸ್ಟ್ರೀಟ್‌ನಲ್ಲಿ ನವೀನ್‌ಕುಮಾರ್ ಎಂಬ ಸಿನಿಮಾ ಬಿಡುಗಡೆ ಸಮಾರಂಭಕ್ಕೆ ತೆರಳಿದ್ದರು.

ಇದನ್ನು ಓದಿ: ಜಸ್ಟ್ 58 ಸೆಕೆಂಡ್‌.. BMW ಕಾರಿನ ಗ್ಲಾಸ್ ಹೊಡೆದು 13 ಲಕ್ಷ ನಗದು ದೋಚಿ ಪರಾರಿ; ಲೈವ್ ವಿಡಿಯೋ ಇಲ್ಲಿದೆ ನೋಡಿ

ಇದೇ ವೇಳೆ ಅನ್ಬರಸು ಸೇರಿದಂತೆ 7 ಮಂದಿ ಸ್ನೇಹಿತರ ಜೊತೆ ಕಾರಿನಲ್ಲಿ ಹೋಗುತ್ತಿದ್ದಾಗ ದುಷ್ಕರ್ಮಿಗಳ ತಂಡವೊಂದು ಏಕಾಏಕಿ ದಾಳಿ ನಡೆಸಿದೆ. ಜೊತೆಗೆ ಅನ್ಬರಸು ಕಾರಿನ ಮೇಲೆ ಎರಡು ಬಾಂಬ್‌ಗಳನ್ನು ಎಸೆದಿದ್ದಾರೆ. ಪರಿಣಾಮ ಕಾರಿನ ಗಾಜು ಪುಡಿಪುಡಿಯಾಗಿದೆ. ಕೂಡಲೇ ಕಾರಿನಲ್ಲಿದ್ದವು ಹೊರಗಡೆ ಬಂದಿದ್ದಾರೆ. ಇದೇ ವೇಳೆ ಎಐಎಡಿಎಂಕೆ ವಾರ್ಡ್ ಸದಸ್ಯ ಅನ್ಬರಸುನನ್ನು ಅಟ್ಟಾಡಿಸಿಕೊಂಡು ಹೋಗಿ ದೇಹದ ಪೀಸ್ ಪೀಸ್​ ಆಗಿ ಕತ್ತರಿಸಿ ಬಳಿಕ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ಇನ್ನೂ ಈ ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಮಾಮಲ್ಲಪುರಂ ಡಿಎಸ್ಪಿ ಜಗದೀಶ್ವರನ್, ತಿರುಪೋರೂರು ಪೊಲೀಸ್ ಅಧಿಕಾರಿ ವೆಂಕಟೇಶನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತುಂಡು ತುಂಡಾಗಿ ಬಿದ್ದ ಅನ್ಬರಸನ್ ದೇಹದ ಭಾಗಗಳನ್ನು ಸಂಗ್ರಹಿಸಿ ಮರಣೋತ್ತರ ಪರೀಕ್ಷೆಗಾಗಿ ಚೆಂಗಲ್ಪಟ್ಟು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾರ್ಡ್​​ ಸದಸ್ಯನನ್ನು ಅಟ್ಟಾಡಿಸಿ ತುಂಡು ತುಂಡಾಗಿ ಕತ್ತರಿಸಿದ ಹಂತಕರು.. ಕಾರಣವೇನು?

https://newsfirstlive.com/wp-content/uploads/2023/10/death-2023-10-22T173736.311.jpg

Load More