ನಾವು 60% ಮತಗಳನ್ನು ಪಡೆಯಬೇಕು ಅಂತಾ ಲೆಕ್ಕಾಚಾರ ಇದೆ
ನಾನು ರಾಜಕೀಯದಲ್ಲಿ ಧರ್ಮ ತರೋದಿಲ್ಲ ಎಂದ ಮಲ್ಲಿಕಾರ್ಜುನ ಖರ್ಗೆ
ಜಿ20 ಸಭೆಗೆ ಆಹ್ವಾನ ಇಲ್ಲದೆ ನಾನು ಹೇಗೆ ಹೊಗಲಿ ಎಂದ ಎಐಸಿಸಿ ಅಧ್ಯಕ್ಷ
ಕಲಬುರಗಿ: ದೇವೆಗೌಡರು ಮತ್ತು ಮೋದಿ ಕೈ ಕೈ ಹಿಡಿದುಕೊಂಡಿರೋದು ನೋಡಿದ್ದೇನೆ, ಆದ್ರೆ ನಮ್ಮನ್ನ ಯಾರು ಹತ್ತಿಕ್ಕೋಕೆ ಆಗಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎದುರಾಳಿಗಳಿಗೆ ಟಾಂಟ್ ಕೊಟ್ಟಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಎರಡು ಪಕ್ಷಗಳ ನಾಯಕರು ಒಂದಾಗುವ ಪ್ರಯತ್ನ ಮಾಡ್ತಿದ್ದಾರೆ. ಎಷ್ಟು ಸೀಟ್ ಅವರು ಕೇಳ್ತಾರೆ, ಇವರು ಎಷ್ಟು ಕೊಡ್ತಾರೆ ಅನ್ನೋದು ಇನ್ನೂ ಕ್ಲೀಯರ್ ಆಗಿಲ್ಲ. ಆದರೆ ನಮ್ಮನ್ನ ಯಾರು ಹತ್ತಿಕೋಕೆ ಆಗೋದಿಲ್ಲ ಎಂದಿದ್ದಾರೆ.
ದೇಶದಲ್ಲಿ 28 ಪಾರ್ಟಿ ಒಂದಾಗಿ ಚುನಾವಣೆ ಎದುರಿಸೋದಕ್ಕೆ ಮುಂದಾಗಿದ್ದೇವೆ. ನಾವು 60% ಮತಗಳನ್ನು ಪಡೆಯಬೇಕು ಅಂತಾ ಲೆಕ್ಕಾಚಾರ ಇದೆ. ಇಂಡಿಯಾದ ನಾಲ್ಕನೆ ಮೀಟಿಂಗ್ ಕೂಡ ಮಾಡ್ತಿದ್ದೇವೆ. ನಾವೆಲ್ಲ ಒಂದಾಗಿ ಫೈಟ್ ಮಾಡೋದಕ್ಕೆ ಮುಂದಾಗಿದ್ದೇವೆ. ಜೆಡಿಎಸ್ ಐಡಿಯಾಲಜಿ ಚೇಂಜ್ ಮಾಡಿದ್ರೆ ನಾನು ಕಾಮೆಂಟ್ ಮಾಡೋದಿಲ್ಲ. ಜೆಡಿಎಸ್ ಮೊದಲಿನಿಂದಲೂ ಸೆಕ್ಯೂಲರ್ ಅಂತಾ ಹೇಳ್ತಿದ್ದರು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ನಂತರ ಮಾತು ಮುದುವರಿಸಿದ ಅವರು ನಾನು ರಾಜಕೀಯದಲ್ಲಿ ಧರ್ಮ ತರೋದಿಲ್ಲ. ರಾಜಕೀಯ ಹಾದಿಯಲ್ಲಿ ಒಂದಾಗಿ ಪೈಟ್ ಮಾಡ್ತಿದ್ದೇವೆ. ಧರ್ಮದ ವಿಚಾರ ಬಂದಾಗ ಡಿಬೇಟ್ ಮಾಡೋಣ ಯಾವುದು ಸರಿ ಯಾವುದು ತಪ್ಪು. ಬಸವಣ್ಣ ಸರಿನೋ ಅಂಬೇಡ್ಕರ್ ಸರಿನೋ ಅನ್ನೋದರ ಬಗ್ಗೆ ಚರ್ಚೆ ಮಾಡೋಣ ಎಂದಿದ್ದಾರೆ.
ರಿಪಬ್ಲಿಕ್ ಭಾರತ್ ಹೆಸರು ಬದಲಾವಣೆ ವಿಚಾರವಾಗಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಭಾರತ್ ಏನ್ ಸಂವಿಧಾನದಲ್ಲಿ ಇಲ್ಲವಾ. ಇಂಡಿಯಾ ಅಂದ್ರೆ ಭಾರತ್ ಅದು ಸಂವಿಧಾನದಲ್ಲೇ ಇದೆ. ಇದು ಯಾರು ಬೇಡ ಅಂದ್ರೋ ಗೋತ್ತಿಲ್ಲ. ಎಲ್ಲರು ಭಾರತ್ ಮಾತಾ ಕಿ ಜೈ ಅಂತಾರೆ. ಹಾಗಾದ್ರೆ ಸ್ಟಾರ್ಟಪ್ ಇಂಂಡಿಯಾ, ಡಿಜಿಟಲ್ ಇಂಡಿಯಾ ಅಂತಾ ಯಾಕೆ ಹೆಸರು ಇಟ್ಟಿದ್ದಾರೆ. ಭಾರತ್ ಜೋಡೊ ಅಂತಾ ನಾವೇ ಪ್ರಚಾರ ಮಾಡಿದ್ದೇವೆ ಇಡಿ ದೇಶದಲ್ಲಿ ಎಂದು ಹೇಳಿದ್ದಾರೆ.
ಜಿ -20 ಸಭೆ ಸಾಮರಸ್ಯದ ಸಭೆ ವಿಚಾರವಾಗಿ ಮಾತನಾಡಿದ ಅವರು, ದೇಶದಲ್ಲಿ, ಪ್ರಪಂಚದಲ್ಲಿ ಗದ್ದಲ ಇಲ್ಲದೆ ಸಾಮರಸ್ಯದಿಂದ ಇರೋದು ಒಳ್ಳೆಯದ್ದು. ಜಿ20 ಸಭೆಗೆ ಆಹ್ವಾನ ಇಲ್ಲದೆ ನಾನು ಹೇಗೆ ಹೊಗಲಿ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ