newsfirstkannada.com

ಅಂದು ಬಿಸಿಸಿಐನಿಂದ ಅವಮಾನಕ್ಕೀಡಾಗಿದ್ದ ರಹಾನೆ; ಇಂದು ಭಾರತ ಟೆಸ್ಟ್​ ತಂಡದ ವೈಸ್​ ಕ್ಯಾಪ್ಟನ್​​!

Share :

23-06-2023

    ಅಂದು ಬಿಸಿಸಿಐನಿಂದ ಅವಮಾನಕ್ಕೀಡಾಗಿದ್ದ ಅಜಿಂಕ್ಯ ರಹಾನೆ!

    ಬರೋಬ್ಬರಿ 2 ವರ್ಷದ ಬಳಿಕ ಟೀಂ ಇಂಡಿಯಾಗೆ ಕಮ್​ಬ್ಯಾಕ್​​

    ವಿಧಿಯಿಲ್ಲದೆ ರಹಾನೆಯನ್ನೇ ವೈಸ್​ ಕ್ಯಾಪ್ಟನ್​ ಮಾಡಿದ ಬಿಸಿಸಿಐ

ಇತ್ತೀಚೆಗೆ ನಡೆದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​​ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡರೂ ಅಜಿಂಕ್ಯ ರಹಾನೆ ಮಾತ್ರ ಅದ್ಭುತ ಬ್ಯಾಟಿಂಗ್​ ಮಾಡಿದ್ರು. ಕಳೆದ 2 ವರ್ಷಗಳ ಬಳಿಕ ಟೀಂ ಇಂಡಿಯಾಗೆ ಮತ್ತೆ ಕಮ್​ಬ್ಯಾಕ್​ ಮಾಡಿದ ರಹಾನೆ ಆಸ್ಟ್ರೇಲಿಯಾ ವಿರುದ್ಧ ಅತ್ಯುತ್ತಮ ಆಟವನ್ನು ಪ್ರದರ್ಶಿಸಿದ್ರು.

ಇಂಡಿಯನ್​ ಪ್ರೀಮಿಯರ್​ ಲೀಗ್​​ 2023 ಟೂರ್ನಿಯಲ್ಲಿ ಚೆನ್ನೈ ಸೂಪರ್​​ ಕಿಂಗ್ಸ್​ ತಂಡದ ಪರ ಅದ್ಭುತ ಪ್ರದರ್ಶನ ನೀಡಿದ್ದ ಮುಂಬೈಕರ್​ ರಹಾನೆಗೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ಗೆ ಸೆಲೆಕ್ಷನ್​ ಕಮಿಟಿ ಮಣೆ ಹಾಕಿತ್ತು. ಟೀಂ ಇಂಡಿಯಾ ಇಟ್ಟಿದ್ದ ನಂಬಿಕೆಯನ್ನು ರಹಾನೆ ಉಳಿಸಿಕೊಂಡರು. ಈ ಬೆನ್ನಲ್ಲೀಗ ಭಾರತ ಟೆಸ್ಟ್​ ಟೀಂಗೆ ರಹಾನೆ ವೈಸ್​ ಕ್ಯಾಪ್ಟನ್​ ಆಗಿದ್ದಾರೆ.

ಯೆಸ್​​, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಸೋತ ಬೆನ್ನಲ್ಲೇ ಟೀಂ ಇಂಡಿಯಾ ​​ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಸಜ್ಜಾಗಿದೆ. ಜುಲೈ 12ನೇ ತಾರೀಕಿನಿಂದ ಶುರುವಾಗೋ ವೆಸ್ಟ್ ಇಂಡೀಸ್ ಸೀರೀಸ್​ಗೆ ಈಗಾಗಲೇ ಟೀಂ ಇಂಡಿಯಾ ಪ್ರಕಟವಾಗಿದೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತ ತಂಡ 2 ಟೆಸ್ಟ್, 3 ODI ಮತ್ತು 5 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ.

ಜುಲೈ 12 ರಿಂದ ಟೆಸ್ಟ್ ಸರಣಿ, ಜುಲೈ 27 ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಇದಾದ ಬಳಿಕ ಆಗಸ್ಟ್ 3 ರಿಂದ 5 ಪಂದ್ಯಗಳ ಟಿ 20 ಅಂತಾರಾಷ್ಟ್ರೀಯ ಸರಣಿ ನಡೆಯಲಿದೆ. ಈ ಬಾರಿ ಸೆಲೆಕ್ಷನ್​ ಕಮಿಟಿ ಸೀನಿಯರ್ಸ್​ಗೆ ರೆಸ್ಟ್​ ನೀಡಿಲ್ಲವಾದರೂ ಕೆಲವು ಹೊಸಬರಿಗೂ ಅವಕಾಶ ನೀಡಿದೆ. ಜತೆಗೆ ಮತ್ತೆ ರಹಾನೆ ಟೀಂ ಇಂಡಿಯಾದ ವೈಸ್​ ಕ್ಯಾಪ್ಟನ್​ ಆಗಿ ಕಮ್​ಬ್ಯಾಕ್​ ಮಾಡಿದ್ದಾರೆ. ಹಾಗೆಯೇ ಟೀಂ ಇಂಡಿಯಾವನ್ನು ವಿಂಡೀಸ್​​ ಸೀರೀಸ್​ನಲ್ಲಿ ರೋಹಿತ್​ ಶರ್ಮಾ ಅವರೇ ಮುನ್ನಡೆಸಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂದು ಬಿಸಿಸಿಐನಿಂದ ಅವಮಾನಕ್ಕೀಡಾಗಿದ್ದ ರಹಾನೆ; ಇಂದು ಭಾರತ ಟೆಸ್ಟ್​ ತಂಡದ ವೈಸ್​ ಕ್ಯಾಪ್ಟನ್​​!

https://newsfirstlive.com/wp-content/uploads/2023/06/Rahane-3.jpg

Load More