newsfirstkannada.com

ಅಜಿಂಕ್ಯಾ ರಹಾನೆ, ಶಾರ್ದೂಲ್ ಮ್ಯಾಜಿಕ್‌; ಕೊನೆಗೂ ಫಾಲೋ ಆನ್‌ ಭೀತಿಯಿಂದ ಪಾರಾದ ಭಾರತ

Share :

09-06-2023

    ಓವಲ್ ಕ್ರೀಡಾಂಗಣದಲ್ಲಿ ಅಬ್ಬರಿಸಿದ ಅಜಿಂಕ್ಯಾ ರಹಾನೆ

    ಟೆಸ್ಟ್​ ಕ್ರಿಕೆಟ್​ನಲ್ಲಿ ದಾಖಲೆ ಬರೆದ ಅಜಿಂಕ್ಯಾ ಬ್ಯಾಟಿಂಗ್

    ಶಾರ್ದೂಲ್ ಠಾಕೂರ್ ಅರ್ಧಶತಕ ಭಾರತಕ್ಕೆ ಆಸರೆ

ಲಂಡನ್‌: ದಿ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ನ​​ ಫೈನಲ್ ಪಂದ್ಯ ಕುತೂಹಲ ಘಟ್ಟಕ್ಕೆ ತಲುಪಿದೆ. ಆಸ್ಟ್ರೇಲಿಯಾದ ಬೃಹತ್ ಟಾರ್ಗೆಟ್‌ ಬೆನ್ನತ್ತಿದ್ದ ಭಾರತ ಮೂರನೇ ದಿನದಾಟದಲ್ಲಿ ದಿಟ್ಟ ಉತ್ತರ ನೀಡಿದೆ. ಅಜಿಂಕ್ಯಾ ರಹಾನೆ ಹಾಗೂ ಶಾರ್ದೂಲ್ ಠಾಕೂರ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ಫಾಲೋ ಆನ್‌ ಭೀತಿಯಿಂದ ಪಾರಾಗಿದೆ.

18 ತಿಂಗಳ ಬಳಿಕ ಟೆಸ್ಟ್ ಕ್ರಿಕೆಟ್​​ಗೆ ರೀ ಎಂಟ್ರಿ ಕೊಟ್ಟ ಟೆಸ್ಟ್ ಸ್ಪೆಷಲಿಸ್ಟ್ ಅಜಿಂಕ್ಯಾ ರಹಾನೆ, ಕಮ್​ಬ್ಯಾಕ್ ಪಂದ್ಯದಲ್ಲೇ ಅದ್ಬುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್​ ಶಿಪ್​ ಫೈನಲ್​​ನ ಮೊದಲ ಇನ್ನಿಂಗ್ಸ್​ನಲ್ಲಿ ಟೀಮ್ ಇಂಡಿಯಾದ ಅಗ್ರಗಣ್ಯ ಬ್ಯಾಟ್ಸ್​ಮನ್​ಗಳು ವೈಫಲ್ಯ ಅನುಭವಿಸಿದರು. ಈ ವೇಳೆ ಕಣಕ್ಕಿಳಿದ ಅಜಿಂಕ್ಯಾ ರಹಾನೆ ಟೀಮ್ ಇಂಡಿಯಾಗೆ ಚೇತರಿಕೆ ನೀಡುವ ಮೂಲಕ ತಂಡಕ್ಕೆ ಆಸರೆಯಾದರು. ಅಷ್ಟೇ ಅಲ್ಲ.! ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತದ ಪರ ಮೊದಲ ಅರ್ಧಶತಕ ಗಳಿಸಿದ ಸಾಧನೆ ಮಾಡಿದ್ದಾರೆ.

ಮೊದಲು ಜಡೇಜಾ ಜೊತೆ ಅರ್ಧಶತಕದ ಜೊತೆಯಾಟವಾಡಿದ್ದ ರಹಾನೆ, ಬಳಿ ಶಾರ್ದೂಲ್ ಠಾಕೂರ್ ಜೊತೆ ಶತಕದ ಜೊತೆಯಾಟ ನಡೆಸಿದರು. ಅದ್ರೆ, 2ನೇ ಸೆಷನ್​​ನ ಆರಂಭದಲ್ಲೇ 89 ರನ್​ ಗಳಿಸಿದ್ದ ಅಜಿಂಕ್ಯಾ ವಿಕೆಟ್ ಒಪ್ಪಿಸಿ ಹೊರ ನಡೆದರು. ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಟೀಮ್ ಇಂಡಿಯಾಗೆ ಆಸರೆಯಾದ ರಹಾನೆ, ಟೆಸ್ಟ್​ ಕ್ರಿಕೆಟ್​ನಲ್ಲಿ 5000 ರನ್‌ಗಳ ಮೈಲಿಗಲ್ಲು ದಾಟಿದ ಸಾಧನೆ ಮಾಡಿದರು. ಆ ಮೂಲಕ ಟೀಮ್ ಇಂಡಿಯಾ ಪರ ಟೆಸ್ಟ್‌ನಲ್ಲಿ 5000 ರನ್‌ಗಳ ಗಡಿ ದಾಟಿದ 13 ನೇ ಭಾರತೀಯ ಆಟಗಾರ ಎನಿಸಿಕೊಂಡರು.

ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸುನಿಲ್ ಗವಾಸ್ಕರ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್, ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ, ದಿಲೀಪ್ ವೆಂಗ್‌ಸರ್ಕರ್, ಚೇತೇಶ್ವರ ಪೂಜಾರ, ಮೊಹಮ್ಮದ್ ಅಜರುದ್ದೀನ್, ಗುಂಡಪ್ಪ ವಿಶ್ವನಾಥ್ ಮತ್ತು ಕಪಿಲ್ ದೇವ್ ಈ ದಾಖಲೆ ಬರೆದಿದ್ದಾರೆ.

ಇನ್ನು, ಮೊದಲ ಇನ್ನಿಂಗ್ಸ್‌ನಲ್ಲಿ ಶಾರ್ದೂಲ್ ಠಾಕೂರ್ ಅವರ ಅರ್ಧಶತಕ ಸಿಡಿಸಿ ಗಮನ ಸೆಳೆದರು. ಮೊದಲ ಇನ್ನಿಂಗ್ಸ್‌ನಲ್ಲಿ ರೋಹಿತ್ ಪಡೆ 296 ರನ್ ಗಳಿಸಲಷ್ಟೇ ಶಕ್ತವಾಗಿದ್ದು, ಉಳಿದ ಎರಡು ದಿನದಾಟ ನಿರ್ಣಾಯಕವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಅಜಿಂಕ್ಯಾ ರಹಾನೆ, ಶಾರ್ದೂಲ್ ಮ್ಯಾಜಿಕ್‌; ಕೊನೆಗೂ ಫಾಲೋ ಆನ್‌ ಭೀತಿಯಿಂದ ಪಾರಾದ ಭಾರತ

https://newsfirstlive.com/wp-content/uploads/2023/06/Rahane-1.jpg

Load More