newsfirstkannada.com

ಎಡವಿದ್ರಾ ಅಜಿತ್​ ಅಗರ್ಕರ್? ರಿಂಕು ಸಿಂಗ್​ಗೆ ಚಾನ್ಸ್​ ಯಾಕೆ ಕೊಟ್ಟಿಲ್ಲ?

Share :

08-07-2023

    ಫಿನಿಷರ್​ ರಿಂಕು ಸಿಂಗ್​ ಕೈ ಬಿಟ್ಟ ಆಯ್ಕೆ ಸಮಿತಿ

    ಅರ್ಥವೇ ಆಗದ ಸೆಲೆಕ್ಷನ್​ ಕಮಿಟಿ ಲೆಕ್ಕಾಚಾರ.!

    ಆಯ್ಕೆಯಾದ ತಿಲಕ್​ ವರ್ಮಾ ಆಡೋಕೆ ಸ್ಲಾಟೇ ಇಲ್ಲ..!

ಮೊದಲ ಟಾಸ್ಕ್​ನಲ್ಲೆ ಅಜಿತ್​ ಅಗರ್ಕರ್​ ಎಡವಿಬಿಟ್ರಾ.? ಈ ಪ್ರಶ್ನೆ ಸದ್ಯ ಚರ್ಚೆಯಲ್ಲಿದೆ. ಐಪಿಎಲ್​ ಸ್ಟಾರ್​ ರಿಂಕು ಸಿಂಗ್​​ರನ್ನ ವಿಂಡೀಸ್​​ ಸರಣಿಯಿಂದ ಕೈ ಬಿಟ್ಟು ಸೆಲೆಕ್ಷನ್​ ಕಮಿಟಿ ದೊಡ್ಡ ತಪ್ಪನ್ನೇ ಮಾಡಿದಂತಿದೆ. ಫಿನಿಷರ್​​ ಕೊರತೆ ತಂಡಕ್ಕೆ ಕಾಡ್ತಾ ಇದ್ದಿದ್ದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಇದಕ್ಕೆ ಪರಿಹಾರ ಹುಡುಕಬೇಕಿದ್ದ ಅಗರ್ಕರ್​ & ಟೀಮ್​ ಮತ್ತೊಂದು ಸಮಸ್ಯೆಯನ್ನ ಸೃಷ್ಟಿಸಿದೆ.

ವೆಸ್ಟ್​ ಇಂಡೀಸ್​ ವಿರುದ್ಧದ ಟಿ20 ಸರಣಿಗೆ ಟೀಮ್​ ಇಂಡಿಯಾ ಪ್ರಕಟವಾಗಿ ದಿನಗಳೇ ಕಳೆದಿವೆ. ಆದ್ರೆ, ಸೆಲೆಕ್ಷನ್​ ಡಿಬೆಟ್​ ಮಾತ್ರ ದಿನದಿಂದ ದಿನಕ್ಕೆ ತಾರಕ್ಕೇರ್ತಾ ಇದೆ. ಐಪಿಎಲ್​​ ಆರ್ಭಟಿಸಿದ ತಿಲಕ್​​ ವರ್ಮಾಗೆ ಆಯ್ಕೆ ಸಮಿತಿ ಮಣೆ ಹಾಕಿದೆ. ಇದೇ ಸಮಯದಲ್ಲಿ ಈ ಬಾರಿಯ ಐಪಿಎಲ್​ನಲ್ಲಿ ಫಿನಿಷರ್​ ಆಗಿ ಮಿಂಚು ಹರಿಸಿದ ರಿಂಕು ಸಿಂಗ್​ರನ್ನ ಕೈ ಬಿಡಲಾಗಿದೆ.

ಯುವ ಕ್ರಿಕೆಟಿಗನಿಗೆ ಸೆಲೆಕ್ಷನ್​ ಕಮಿಟಿಯಿಂದ ಅನ್ಯಾಯ.!

ಯಂಗ್​ & ಎನರ್ಜಿಟಿಕ್​ ರಿಂಕು ಸಿಂಗ್​ ಈ ಬಾರಿಯ ಐಪಿಎಲ್​ನಲ್ಲಿ ಘರ್ಜಿಸಿದ್ರು. ಕೊಲ್ಕತ್ತಾ ನೈಟ್​​ ರೈಡರ್ಸ್​ ಪರ ಲೋವರ್​ ಆರ್ಡರ್​​ನಲ್ಲಿ ಕಣಕ್ಕಿಳೀತಾ ಇದ್ದ ಲೆಫ್ಟ್​ ಹ್ಯಾಂಡೆಡ್​ ಬ್ಯಾಟ್ಸ್​ಮನ್​, ಪರ್ಫೆಕ್ಟ್​ ಆಗಿ ಫಿನಿಷಿಂಗ್​ ರೋಲ್​ ಪ್ಲೇ ಮಾಡಿದ್ರು. ಪ್ರೆಶರ್​ ಟೈಮ್​ನಲ್ಲೂ ಫೋರ್​, ಸಿಕ್ಸರ್​​ಗಳ ಬಾರಿಸಿ ಬೌಲರ್​ಗಳ ದಾಳಿಯನ್ನ ಉಡೀಸ್​ ಮಾಡಿದ್ರು. ಯಶ್​ ದಯಾಳ್​ ಹಾಕಿದ ಕೊನೆ ಓವರ್​ನಲ್ಲಿ ಸತತ 5 ಸಿಕ್ಸರ್​ ಸಿಡಿಸಿದ್ದಂತೂ ಬೊಂಬಾಟ್​.

ಐಪಿಎಲ್​ನಲ್ಲಿ ಆಡಿದ 14 ಪಂದ್ಯಗಳಲ್ಲಿ 474 ರನ್​ ಸಿಡಿಸಿದ ರಿಂಕು ಬೆಸ್ಟ್​ ಫಿನಿಷರ್​ ಆಗಿ ಹೊರ ಹೊಮ್ಮಿದ್ರು. ಅದ್ರಲ್ಲೂ ಡೆತ್​ ಓವರ್​ಗಳಲ್ಲಿ 194.30ರ ಸ್ಟ್ರೈಕ್​ರೇಟ್​​ನಲ್ಲಿ 239 ರನ್​​ ಕೊಳ್ಳೆ ಹೊಡೆದಿದ್ರು. ಇಷ್ಟೇ ಅಲ್ಲ. ಧೋನಿ, ರಸೆಲ್​ ರಂತಹ ದಿಗ್ಗಜರನ್ನೂ ಹಿಂದಿಕ್ಕಿ 20 ಅಮೋಘ ಸಿಕ್ಸರ್​​ ಸಿಡಿಸಿದ್ರು. ಟೀಮ್​ ಇಂಡಿಯಾಗೆ ಫಿನಿಷರ್​ ಕೊರತೆ ಕಾಡ್ತಿರೋದ್ರಿಂದ ರಿಂಕು ಆಟವನ್ನ ನೋಡಿದ ಎಲ್ಲರೂ ಶೀಘ್ರದಲ್ಲೇ ಭಾರತ ತಂಡದಲ್ಲಿ ಸ್ಥಾನ ಸಿಗುತ್ತೆ ಎಂದಿದ್ರು. ಆದ್ರೆ, ತಂಡ ಅನೌನ್ಸ್​ ಆದಾಗ ಆಗಿದ್ದು ನಿರಾಸೆ.

ತಿಲಕ್​ ವರ್ಮಾ ಇನ್​, ರಿಂಕು ಸಿಂಗ್​ ಔಟ್​.!

ಹೌದು. ಶಾಕಿಂಗ್​ ರೀತಿಯಲ್ಲಿ​ ಸೆಲೆಕ್ಷನ್​ ರೇಸ್​​ನಿಂದ ರಿಂಕು ಸಿಂಗ್​ ಔಟ್​ ಆದ್ರೆ, ಮುಂಬೈ ಇಂಡಿಯನ್ಸ್​​​​ ತಿಲಕ್​ ವರ್ಮಾಗೆ ಚಾನ್ಸ್​ ಸಿಕ್ಕಿದೆ. ತಿಲಕ್​​ ವರ್ಮಾ ಕೂಡ ಐಪಿಎಲ್​ನಲ್ಲಿ ಸಾಲಿಡ್​ ಪರ್ಫಾಮೆನ್ಸ್​ ನೀಡಿದ್ರು. 2022ರ ಸೀಸನ್​ನಲ್ಲಿ ಡಿಸೇಂಟ್​ ಪರ್ಫಾಮೆನ್ಸ್​ ನೀಡಿದ್ದ ತಿಲಕ್​, 2023 ಸೀಸನ್​ನಲ್ಲಿ ಆರ್ಭಟಿಸಿದ್ರು. 11 ಪಂದ್ಯಗಳಲ್ಲಿ 42.88ರ ಸರಾಸರಿಯಲ್ಲಿ ರನ್​ ಕಲೆ ಹಾಕಿ ಗಮನ ಸೆಳೆದಿದ್ರು. ಹಾಗಿದ್ರೂ, ತಿಲಕ್​ ವರ್ಮಾಗೆ ಚಾನ್ಸ್​ ನೀಡಿದ್ದು ದೊಡ್ಡ ಪ್ರಶ್ನೆಯಾಗಿದೆ.

ಆಯ್ಕೆಯಾದ ತಿಲಕ್​ ಆಡೋಕೆ ಸ್ಲಾಟೇ ಇಲ್ಲ..!

ವಿಂಡೀಸ್​​ ಪ್ರವಾಸಕ್ಕೆ ಅಜಿತ್​ ಅಗರ್ಕರ್​ ನೇತೃತ್ವದ ಸೆಲೆಕ್ಷನ್​ ಕಮಿಟಿ ಯಾವ ಲೆಕ್ಕಾಚಾರದಲ್ಲಿ ಆಟಗಾರರಿಗೆ ಮಣೆ ಹಾಕಿದೆ ಅನ್ನೋದೆ ಅರ್ಥವಾಗ್ತಿಲ್ಲ. ಟಾಪ್​ ಆರ್ಡರ್​ನಲ್ಲಿ ಯಶಸ್ವಿ ಜೈಸ್ವಾಲ್​, ಇಶಾನ್​ ಕಿಶನ್​, ಶುಭ್​ಮನ್ ಗಿಲ್ ಹಾಗೂ ಸಂಜು ಸ್ಯಾಮ್ಸನ್​ ಪೈಪೋಟಿಯಿದೆ. ಮಿಡಲ್​ ಆರ್ಡರ್​ನಲ್ಲಿ ಆಡೋ ಆಟಗಾರರ ಪಟ್ಟಿ ದೊಡ್ಡದಿದೆ. ಹೀಗಿರೋವಾಗ ತಿಲಕ್​ ಸ್ಥಾನ ಎಲ್ಲಿ ಅನ್ನೋದೆ ದೊಡ್ಡ ಪ್ರಶ್ನೆಯಾಗಿದೆ.

‘ರಿಂಕು ಉತ್ತಮ ಆಯ್ಕೆಯಾಗಿದ್ರು’

‘ಟಾಪ್​ 3 ಸ್ಲಾಟ್​ಗಳನ್ನ ಬಿಟ್ರೆ, 4ನೇ ಕ್ರಮಾಂಕದಲ್ಲಿ ಆಡಲು ಸೂರ್ಯಕುಮಾರ್​ ಇದ್ದಾರೆ. 5ನೇ ಕ್ರಮಾಂಕಕ್ಕೆ ಹಾರ್ದಿಕ್​ ಪಾಂಡ್ಯ ಇದ್ದಾರೆ. ಹೀಗಾಗಿ ತಿಲಕ್​ ವರ್ಮಾ ಆಡಿದ್ರೆ 6 ಕ್ರಮಾಂಕದಲ್ಲಿ ಆಡಬೇಕು. ಈ ಕ್ರಮಾಂಕಕ್ಕೆ ತಿಲಕ್​ ಉತ್ತಮ ಆಯ್ಕೆನಾ.? ಈ ಬಾರಿಯ ಐಪಿಎಲ್​ ಆರಂಭದಲ್ಲಿ ಟಾಪ್​ ಆರ್ಡರ್​​ ಬ್ಯಾಟಿಂಗ್​ನಲ್ಲಿ ತಿಲಕ್​ ಉತ್ತಮ ಪ್ರದರ್ಶನ ನೀಡಿದ್ರು. ತಿಲಕ್​​​ ವರ್ಮಾನ 3ನೇ ಕ್ರಮಾಂಕಕ್ಕೆ ಆಯ್ಕೆ ಮಾಡಿಲ್ಲ ಅಂದ ಮೇಲೆ 5,6 ಅಥವಾ 7ನೇ ಕ್ರಮಾಂಕದಲ್ಲಿ ಆಡಲು ರಿಂಕು ಉತ್ತಮ ಆಯ್ಕೆಯಾಗಿದ್ರು​​’
ಆಕಾಶ್​ ಚೋಪ್ರಾ, ಮಾಜಿ ಕ್ರಿಕೆಟಿಗ

ಫಸ್ಟ್​ ಟಾಸ್ಕ್​ನಲ್ಲೇ ಎಡವಿದ್ರಾ ಅಜಿತ್​ ಅಗರ್ಕರ್​.?

ಈಗಾಗಲೇ ತಂಡಕ್ಕೆ ಫಿನಿಷರ್​ ಕೊರತೆ ಕಾಡ್ತಿದೆ. 2024ರ ಟಿ20 ವಿಶ್ವಕಪ್​ ಮುಂದಿರೋದ್ರಿಂದ ಆಯ್ಕೆ ಸಮಿತಿ ಕೊರತೆಗೆ ಪರಿಹಾರ ಹುಡುಕುವ ಕೆಲಸ ಮಾಡ್ಬೇಕಿತ್ತು. ಅಜಿತ್​ ಅಗರ್ಕರ್​ ಚೀಫ್​ ಸೆಲೆಕ್ಟರ್​ ಆದ ಮೇಲೆ ಸಮರ್ಥ ತಂಡವನ್ನ ಆಯ್ಕೆ ಮಾಡ್ತಾರೆ ಎಂಬ ಭರವಸೆ ಎಲ್ಲರದ್ದಾಗಿತ್ತು. ಆದ್ರೆ, ರಿಂಕು ಸಿಂಗ್​ರನ್ನ ಕೈ ಬಿಟ್ಟಿರೋದು ನೋಡಿದ್ರೆ, ಮೊದಲ ಟಾಸ್ಕ್​ನಲ್ಲೇ ಎಡವಿದ್ರಾ ಎಂಬ ಪ್ರಶ್ನೆ ಹುಟ್ಟಿದೆ.

ಒಟ್ಟಿನಲ್ಲಿ, ಟೀಮ್​ ಸೆಲೆಕ್ಷನ್​ಗೂ ಮುನ್ನ ಆಯ್ಕೆಯಾಗೋ ರೇಸ್​​ನಲ್ಲಿ ಮುಂಚೂಣಿಯಲ್ಲಿದ್ದ ರಿಂಕು ಸಿಂಗ್​, ಶಾಕಿಂಗ್​ ರೀತಿಯಲ್ಲಿ ಸ್ಥಾನ ವಂಚಿತರಾಗಿದ್ದಾರೆ. ಟ್ಯಾಲೆಂಟ್​ ಇದೆ. ಐಪಿಎಲ್​ನಂತಹ ಬಿಗ್​ ಸ್ಟೇಜ್​ನಲ್ಲಿ ಪರ್ಫಾಮ್​ ಮಾಡಿದ್ದು ಆಗಿದೆ. ಹಾಗಿದ್ರೂ ಅದೃಷ್ಟ ರಿಂಕು ಕೈ ಹಿಡಿದಿಲ್ಲ.. ಮುಂಬರುವ ಐರ್ಲೆಂಡ್​ ಸರಣಿಗಾದ್ರೂ, ರಿಂಕುಗೆ ಜಾಕ್​ ಪಾಟ್​ ಹೊಡೆಯುತ್ತಾ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಎಡವಿದ್ರಾ ಅಜಿತ್​ ಅಗರ್ಕರ್? ರಿಂಕು ಸಿಂಗ್​ಗೆ ಚಾನ್ಸ್​ ಯಾಕೆ ಕೊಟ್ಟಿಲ್ಲ?

https://newsfirstlive.com/wp-content/uploads/2023/07/Rinku-Singh.jpg

Load More