newsfirstkannada.com

ಕೊಹ್ಲಿ ಮೇಲೆ ಚೀಫ್​ ಸೆಲೆಕ್ಟರ್​​ ಅಜಿತ್​ಗೆ ಎಷ್ಟು ನಂಬಿಕೆ ಗೊತ್ತಾ..? ನೀವು ಈ ಸ್ಟೋರಿ ಓದಲೇಬೇಕು!

Share :

21-08-2023

  ಆಗಸ್ಟ್​ 30ನೇ ತಾರೀಕಿನಿಂದ ಏಷ್ಯಾಕಪ್​ ಟೂರ್ನಿ

  ಪಾಕ್​​ ವಿರುದ್ಧ ಗೆಲ್ಲಲು ಈತನೇ ಮಾಸ್ಟರ್​​ ಮೈಂಡ್​​

  ಕೊಹ್ಲಿ ಮೇಲೆ ಅಜಿತ್​ಗೆ ಎಷ್ಟು ನಂಬಿಕೆ ಗೊತ್ತಾ..?

ನವದೆಹಲಿ: ಕ್ಯಾಪ್ಟನ್​ ರೋಹಿತ್​ ಶರ್ಮಾ, ಚೀಫ್​ ಸೆಲೆಕ್ಟರ್​​ ಅಜಿತ್​ ಅಗರ್ಕರ್ ನೇತೃತ್ವದಲ್ಲಿ ನಡೆದ ಮಹತ್ವದ ಸಭೆ ಬಳಿಕ ಏಷ್ಯಾಕಪ್​​ಗಾಗಿ ಬಲಿಷ್ಠ ಟೀಂ ಇಂಡಿಯಾ ಪ್ರಕಟವಾಗಿದೆ. 17 ಸದಸ್ಯರನ್ನು ಒಳಗೊಂಡ ಟೀಂ ಇಂಡಿಯಾ ಪ್ರಕಟವಾಗಿದ್ದು, ಈ ಬಾರಿ ಕೂಡ ಏಷ್ಯಾಕಪ್​​ನಲ್ಲಿ ಕ್ಯಾಪ್ಟನ್​ ರೋಹಿತ್​ ಶರ್ಮಾ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ. ಸ್ಟಾರ್​ ಆಲ್​ರೌಂಡರ್​​​ ಹಾರ್ದಿಕ್​ ಪಾಂಡ್ಯಗೆ ಉಪನಾಯಕನ ಪಟ್ಟ ಕಟ್ಟಲಾಗಿದೆ.

ಇನ್ನು, ಬಲಿಷ್ಠ ತಂಡವನ್ನು ಪ್ರಕಟಿಸಿದ ಬಳಿಕ ಕ್ಯಾಪ್ಟನ್​ ರೋಹಿತ್​ ಶರ್ಮಾ, ಚೀಫ್​ ಸೆಲೆಕ್ಟರ್​​​ ಅಜಿತ್​ ಅಗರ್ಕರ್​ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತಾಡುವಾಗ ಅಜಿತ್​ ಅಗರ್ಕರ್​ಗೆ ಮಾಧ್ಯಮದವರು, ಪಾಕಿಸ್ತಾನದ ಸ್ಟಾರ್​ ಬೌಲರ್ಸ್​​ ಹ್ಯಾರಿಸ್​ ರೌಫ್ ಮತ್ತು ಶಾಹೀನ್​ ಅವರನ್ನು ಕಟ್ಟಿ ಹಾಕಲು ಪ್ಲಾನ್​ ಏನು? ಎಂಬ ಪ್ರಶ್ನೆ ಕೇಳಿದರು.

ಇದಕ್ಕೆ ಉತ್ತರ ನೀಡಿದ ಟೀಂ ಇಂಡಿಯಾ ಸೆಲೆಕ್ಷನ್​ ಕಮಿಟಿ ಮುಖ್ಯಸ್ಥ ಅಜಿತ್​ ಅಗರ್ಕರ್​​, ಇಬ್ಬರನ್ನು ನೋಡಿಕೊಳ್ಳಲು ಮಾಜಿ ಕ್ಯಾಪ್ಟನ್​​ ವಿರಾಟ್​ ಕೊಹ್ಲಿ ಇದ್ದಾರಲ್ಲ. ನಮಗೇನು ಭಯ ಅನ್ನೋ ರೀತಿಯಲ್ಲಿ ಮಾತಾಡಿದರು. ಕೊಹ್ಲಿ ಬಗ್ಗೆ ಮಾತಾಡುವಾಗ ಅಜಿತ್​ ಅಗರ್ಕರ್​ ಮುಖದಲ್ಲಿ ವಿಶ್ವಾಸದ ನಗೆ ಕಾಣುತ್ತಿತ್ತು.

ಕಳೆದ ಬಾರಿ ನಡೆದ ಏಷ್ಯಾಕಪ್​ ಟೂರ್ನಿಯಲ್ಲಿ ಪಾಕಿಸ್ತಾನದ ಬೌಲರ್ಸ್​ ಬೆಂಡೆತ್ತಿದ್ದ ವಿರಾಟ್​​ ಕೊಹ್ಲಿ ಕೈ ತಪ್ಪಿ ಹೋಗಿದ್ದ ಪಂದ್ಯವನ್ನು ಭಾರತಕ್ಕೆ ಗೆಲ್ಲಿಸಿಕೊಟ್ಟರು. ಆಗ ವಿರಾಟ್​ ಕೊಹ್ಲಿ ಟಾಕ್​ ಆಫ್​​ ಸ್ಪೋರ್ಟ್ಸ್​​​ ವರ್ಲ್ಡ್​​ ಆಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಹ್ಲಿ ಮೇಲೆ ಚೀಫ್​ ಸೆಲೆಕ್ಟರ್​​ ಅಜಿತ್​ಗೆ ಎಷ್ಟು ನಂಬಿಕೆ ಗೊತ್ತಾ..? ನೀವು ಈ ಸ್ಟೋರಿ ಓದಲೇಬೇಕು!

https://newsfirstlive.com/wp-content/uploads/2023/08/VIRAT.jpg

Load More