ಬಿಸಿಸಿಐ ಚೀಫ್ ಸೆಲೆಕ್ಟರ್ ಹುದ್ದೆಗೆ ಅಜಿತ್ ಅಗರ್ಕರ್ ನೇಮಕ
ಅಜಿತ್ ಅಗರ್ಕರ್ ಮುಂದಿದೆ ಕಠಿಣ ದಾರಿ, ದೊಡ್ಡ ಸವಾಲು
ಮಾಜಿ ವೇಗಿ ಮೇಲಿದೆ ಟೀಂ ಇಂಡಿಯಾದ ಪೂರ್ಣ ಜವಾಬ್ದಾರಿ
ಟೀಮ್ ಇಂಡಿಯಾ ಸೆಲೆಕ್ಷನ್ ಕಮಿಟಿಯ ನೂತನ ಮುಖ್ಯಸ್ಥರಾಗಿ ಮಾಜಿ ವೇಗಿ ಅಜಿತ್ ಅಗರ್ಕರ್ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ, ಬಿಸಿಸಿಐ ಚೀಫ್ ಸೆಲೆಕ್ಟರ್ ಹುದ್ದೆಯ ವೇತನವನ್ನ ಹೆಚ್ಚಿಸಿದೆ.
ಅಗರ್ಕರ್ಗೆ ವಾರ್ಷಿಕವಾಗಿ 3 ಕೋಟಿ ರೂಪಾಯಿ ವೇತನವನ್ನ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಈ ಹಿಂದೆ ಆಯ್ಕೆ ಸಮಿತಿ ಮುಖ್ಯಸ್ಥರಿಗೆ ವಾರ್ಷಿಕವಾಗಿ 1 ಕೋಟಿ ರೂಪಾಯಿ ವೇತನವನ್ನ ನೀಡಲಾಗ್ತಿತ್ತು. ಆದರೀಗ ಅಜಿತ್ ನೇಮಕವಾದ ಬೆನ್ನಲ್ಲೇ 3 ಕೋಟಿ ಸಂಬಳ ನೀಡಲು ಮುಂದಾಗಿದೆ. ಅಂದರೆ ಅಜಿತ್ ತಿಂಗಳ ಸಂಬಳ 25 ಲಕ್ಷ ರೂಪಾಯಿ ಆಗಿದೆ.
ಅಂದಹಾಗೆಯೇ, ಅಜಿತ್ ಅಗರ್ಕರ್ ಚೀಫ್ ಸೆಲೆಕ್ಟರ್ ರೇಸ್ನಲ್ಲಿ ಕೊನೆಗೂ ಗೆದ್ದು ಬೀಗಿದ್ದಾರೆ ನಿಜ. ಆದರೆ ಇವರ ಹಾದಿ ಹೂವಿನಿಂದ ಕೂಡಿಲ್ಲ. ಸಾಲು ಸಾಲು ಮುಳ್ಳಿನ ಹಾದಿಯಾಗಿದೆ. ಹೆಜ್ಜೆ ಹೆಜ್ಜೆಗೂ ಕಠಿಣ ಸವಾಲುಗಳಿವೆ.
ಅಳೆದು ತೂಗುವ ಪ್ರಮೇಯ
ಅಜಿತ್ ಅಗರ್ಕರ್ ಮುಂದಿರೋ ಸಾಲು ಸಾಲು ಸವಾಲುಗಳಿವೆ. ಈಗಾಗಲೇ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟಗೊಂಡಿದೆ. ಆದರೆ ತಂಡವನ್ನ ಇನ್ನೂ ಆಯ್ಕೆ ಮಾಡಿಲ್ಲ. ಜೊತೆಗೆ ಅದಕ್ಕೂ ಮುನ್ನ ನಡೆಯುವ ಏಷ್ಯಾಕಪ್ಗು ತಂಡವನ್ನ ಆಯ್ಕೆ ಮಾಡಬೇಕಿದೆ. ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಅಳೆದು ತೂಗಿ ತಂಡವನ್ನ ಪ್ರಕಟಿಸಬೇಕಿದೆ.
ಫ್ಯೂಚರ್ ಬಗ್ಗೆ ನಿರ್ಧಾರ
ತಂಡದಲ್ಲಿ 30 ಪ್ಲಸ್ ವಯಸ್ಸಿನ ಅನೇಕ ಆಟಗಾರರಿದ್ದಾರೆ. ವಿಶ್ವಕಪ್ ಬಳಿಕ ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಭವಿಷ್ಯ ಏನು ? ಜೊತೆಗೆ ಇನ್ನು ಕೆಲ ಆಟಗಾರರ ಫ್ಯೂಚರ್ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾದ ದೊಡ್ಡ ಜವಾಬ್ದಾರಿ ಇದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ