newsfirstkannada.com

ಟಿಕ್​​.. ಟಿಕ್​​.. ಟಿಕ್​.. ಬದಲಾಗ್ತಿದೆ ‘ಕಾಲ’.. ಪವಾರ್ ಫ್ಯಾಮಿಲಿಯಲ್ಲಿ ‘ಪವರ್​’ಗಾಗಿ ಗಡಿಯಾರ ಗಲಾಟೆ..!

Share :

Published July 6, 2023 at 6:20am

Update July 5, 2023 at 8:20pm

    ಯಾರಿಗೆ ಸೇರಲಿದೆ ಚಿನ್ಹೆ ಮತ್ತು ಪಕ್ಷದ ಹೆಸರು?

    ಯಾರ ಸಭೆಗೆ ಎಷ್ಟು ಶಾಸಕರು ಭಾಗಿಯಾದ್ರು?

    ಅಜಿತ್ ಪವಾರ್ ಬಣ ಅನರ್ಹತೆಯಿಂದ ಸೇಫ್

ಮಹಾರಾಷ್ಟ್ರದಲ್ಲಿ ಪವರ್​​ಗಾಗಿ ಪವಾರ್​​ ಫ್ಯಾಮಿಲಿ ಫೈಟ್​​ ಜೋರಾಗಿದೆ. ಶರದ್ ಪವಾರ್ ಹಾಗೂ ಅಜಿತ್ ಬಣಗಳ ಶಕ್ತಿ ಪ್ರದರ್ಶನಕ್ಕೆ ಇವತ್ತು ಮುಂಬೈ ಸಾಕ್ಷಿ ಆಗಿದೆ. ನನಗೆ 40 ಎನ್​ಸಿಪಿ ಶಾಸಕರ ಬೆಂಬಲ ಇದೆ ಅಂತ ಅಜಿತ್​​ ಹೇಳಿಕೊಂದಿದ್ದಾರೆ. ಈ ಮೂಲಕ ಅಂಕಲ್​ ವಿರುದ್ಧ ಅಜಿತ್​ ಒಂದು ಸುತ್ತಿನ ಮೇಲುಗೈ ಸಾಧಿಸಿದ್ದಾರೆ.

ಗಡಿಯಾರದ ಸದ್ದು ದೇಶದ ರಾಜಕಾರಣದಲ್ಲೇ ಗದ್ದಲ ಎಬ್ಬಿಸಿದೆ.. ಕಾಂಗ್ರೆಸ್​​ನಿಂದ ಸಿಡಿದು ಬಂದು ಎನ್​ಸಿಪಿ ಸ್ಥಾಪಿಸಿದ್ದ ಮಹಾರಾಷ್ಟ್ರದ ಚಾಣಾಕ್ಯಗೆ ಈಗ ಶಾಕ್​ ಎದುರಾಗಿದೆ.. ರಾಜಕೀಯದಲ್ಲಿ ಚಿಕ್ಕ ಅಪ್ಪನೇ ಹೊರತು ಎಲ್ಲಾರಿಗೂ ದೊಡ್ಡಪ್ಪನಾಗಲು ಸಾಧ್ಯವಿಲ್ಲ.. ಬಬ್ರುವಾಹನ ರೀತಿಯೇ ಅಜಿತ್​ ಪವಾರ್​ ಪವರ್​​ ಫೈಟ್​​ ಶುರು ಮಾಡಿದ್ದಾರೆ.. ಸದ್ಯ ಪಕ್ಷದಲ್ಲಿ ಬಿರುಗಾಳಿ ರೀತಿಯಲ್ಲಿ ಮುಳ್ಳುಗಳ ಪಥ ಸಂಚಲನ ನಡೀತಿದ್ದು, ಯಾರ ಕೈಗೆ ಗಡಿಯಾರದ ಉಡುಗೊರೆ ಸಿಗಲಿದೆ ಅನ್ನೋದು ಸ್ಪಷ್ಟವಾಗಬೇಕಿದೆ.

ಟಿಕ್​​.. ಟಿಕ್​​.. ಟಿಕ್​.. ಬದಲಾಗ್ತಿದೆ ‘ಕಾಲ’!

ಎನ್​ಸಿಪಿಗೆ ಈಗ 24ರ ಹರೆಯ.. ಆದ್ರೆ, ಅದರ ಶಿಖರ ನಾಯಕ ಶರದ್​​​ ಪವಾರ್​​ಗೆ 83 ವರ್ಷ.. ಈ ಅಂತರವೇ ಮಧ್ಯಂತರಕ್ಕೆ ಕಾರಣ.. ಮಧ್ಯಂತರದಲ್ಲಿ ನಿಂತ ಅಜಿತ್​ ಪವಾರ್​, ಅಂಕಲ್​ಗೆ ಸೆಡ್ಡು ಹೊಡೆದಿದ್ದಾರೆ.. ಪಕ್ಷಕ್ಕೆ ಯಾರಾಗಲಿದ್ದಾರೆ ನಾಯಕ? ಯಾರ ಚಿಕ್ಕಪ್ಪನ ಕೈ ಮೇಲಾಗುತ್ತಾ? ಪುತ್ರನ ಬಲ ಹೆಚ್ಚಾಗುತ್ತಾ? ಹೀಗೆ ನಿನ್ನೆಯಿಂದ ನಡೀತಿದ್ದ ಮಹಾರಾಷ್ಟ್ರದ ಅಂಕಗಣಿತ, ಇವತ್ತು ಅರ್ಧ ಲೆಕ್ಕ ಸಿಕ್ಕಿದೆ..

ಈ ಮೂರು ಪ್ರಶ್ನೆಗಳಿಗೆ ಇವತ್ತು ಅರ್ಧ ಉತ್ತರ ಲಭ್ಯ ಆಗಿದೆ.. ಪಕ್ಷದ ಶಾಸಕರು, ಪದಾಧಿಕಾರಿಗಳ ಸಭೆಯನ್ನ ಇಬ್ಬರೂ ನಾಯಕರು ಪ್ರತ್ಯೇಕವಾಗಿ ಕರೆದಿದ್ದರು. ಶರದ್ ಪವಾರ್ ದಕ್ಷಿಣ ಮುಂಬೈನ ವೈ.ಬಿ ಚವ್ಹಾಣ್​ ಸೆಂಟರ್​ನಲ್ಲಿ ಮಧ್ಯಾಹ್ನ 1 ಗಂಟೆಯಿಂದ ಸಭೆ ನಡೆಸಿದ್ರು. ಇದಕ್ಕೂ ಮುನ್ನವೇ ಅಜಿತ್ ಪವಾರ್ ಬಣ ಬಾಂದ್ರಾದಲ್ಲಿರುವ ಮುಂಬೈ ಎಜುಕೇಶನ್ ಟ್ರಸ್ಟ್ ಆವರಣದಲ್ಲಿ ಸಭೆ ಸೇರಿತ್ತು. ಎರಡು ಬಣಗಳು ಪ್ರತ್ಯೇಕ ಇಬ್ಬರು ಮುಖ್ಯ ಸಚೇತಕರನ್ನ ನೇಮಿಸಿವೆ.

ಗಡಿಯಾರ ಗಲಾಟೆ!

  • ಎರಡು ಬಣಗಳ ನಡುವೆ ಈಗ ಶಾಸಕರ ಸಂಖ್ಯಾ ಬಲದ ಫೈಟ್
  • ಹೆಸರು, ಚುನಾವಣಾ ಚಿಹ್ನೆ ಪಡೆಯಲು 36 ಶಾಸಕರ ಬಲಬೇಕು
  • ಶಾಸಕರ ಸಂಖ್ಯಾ ಬಲ ಹೊಂದಿಸಲು ಎರಡು ಬಣಗಳ ಕಸರತ್ತು
  • ಅಜಿತ್ ಪವಾರ್ ಕರೆದಿದ್ದ ಸಭೆಗೆ ಬಂದ 29 ಎನ್​ಸಿಪಿ ಶಾಸಕರು
  • ಶರದ್ ಪವಾರ್ ಬಣದ ಸಭೆಗೆ ಬಂದಿದ್ದು ಮಾತ್ರ 12 ಶಾಸಕರು
  • ಎರಡೂ ಬಣಗಳನ್ನ ಸೇರದೆ ಗೊಂದಲದಲ್ಲಿರುವ 14 ಶಾಸಕರು
  • 53 ಶಾಸಕರ ಪೈಕಿ 3/2 ರಷ್ಟು ಶಾಸಕರು ಅಜಿತ್ ಬಣದಲ್ಲಿದ್ದಾರೆ
  • ಅಜಿತ್ ಪವಾರ್ ಬಣದ ಶಾಸಕರು ಅನರ್ಹತೆಯಿಂದ ಸೇಫ್
  • ಈ ದಾಖಲೆಗಳನ್ನ ಚುನಾವಣಾ ಆಯೋಗಕ್ಕೆ ಸಲ್ಲಿಸುವ ಅಜಿತ್

NCP ಪಕ್ಷದ ಹೆಸರು, ಚುನಾವಣಾ ಚಿಹ್ನೆಗಾಗಿ ಶರದ್​ ಪವಾರ್​​ ಈಗಾಗಲೇ ಚುನಾವಣೆ ಆಯೋಗಕ್ಕೆ ಕೆವಿಯಟ್​ ಹಾಕಿದ್ದಾರೆ.. ಇತ್ತ, ಶರದ್ ಪವಾರ್​ ವಯಸ್ಸಿನ ಕುರಿತು ಆಡಿದ ಅಜಿತ್​​ ಮಾತು ಕಿಡಿ ಹೊತ್ತಿಸಿದೆ.. ಇದನ್ನ ಶರದ್​​ ಅಭಿಮಾನಿಗಳು 83 ವರ್ಷದ ಯೋಧನ ಏಕಾಂಗಿ ಹೋರಾಟ ಅಂತ ಬಣ್ಣಿಸಿದ್ದಾರೆ.. ಅಜಿತ್ಗೆ ಕಾರ್ಯಕರ್ತರ, ಶಾಸಕರ ಬೆಂಬಲ ಇಲ್ಲ. ನಾನೊಬ್ಬನೇ ಹೋರಾಡಿ ಮತ್ತೆ ಪಕ್ಷ ಕಟ್ಟುತ್ತೇನೆ ಅಂತ ಗುಡುಗಿದ್ದಾರೆ.. ಅಲ್ಲದೇ ಜುಲೈ 8 ರಿಂದ ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದಾರೆ.

ನಾನು ಮಹಾರಾಷ್ಟ್ರದ ಸಿಎಂ ಆಗಬೇಕು ಅಂತ ಅಜಿತ್, ರಾಜಕೀಯ ಮಹತ್ವಾಕಾಂಕ್ಷೆಯ ಬಿಚ್ಚುಮಾತು ಶಿವಸೇನೆ ಒಡೆದು ಬಂದ ಶಿಂಧೆ ಟೀಮ್​ನಲ್ಲಿ ಕಿಚ್ಚು ಹೊತ್ತಿಸಿದೆ.. ಸಂಸತ್ತಿನ ಮಳೆಗಾಲದ ಅಧಿವೇಶನದ ನಂತರ ಆಗಸ್ಟ್ 11 ರಂದು ಅಜಿತ್ ಪವಾರ್ ಸಿಎಂ ಆಗ್ತಾರೆ ಅನ್ನೋ ಡೇಟ್​​ವೊಂದು ಓಡಾಡ್ತಿದೆ.. ಶಿಂಧೆ ಬಣದಲ್ಲಿ ಆತಂಕವೊಂದು ಅವುಡುಕಚ್ಚಿ ಕುಳಿತಿದೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಿಕ್​​.. ಟಿಕ್​​.. ಟಿಕ್​.. ಬದಲಾಗ್ತಿದೆ ‘ಕಾಲ’.. ಪವಾರ್ ಫ್ಯಾಮಿಲಿಯಲ್ಲಿ ‘ಪವರ್​’ಗಾಗಿ ಗಡಿಯಾರ ಗಲಾಟೆ..!

https://newsfirstlive.com/wp-content/uploads/2023/07/SHARAD_PAWAR.jpg

Load More