newsfirstkannada.com

Breaking: ತಹಶೀಲ್ದಾರ್​ ಅಜಿತ್​​ ರೈನನ್ನು ಬಂಧಿಸಿದ ಲೋಕಾಯುಕ್ತ ಪೊಲೀಸರು

Share :

29-06-2023

    ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯ್ತುಕ ದಾಳಿ

    30 ಗಂಟೆಗಳ ಪರಿಶೀಲನೆ ಬಳಿಕ ಅಜಿತ್​ ರೈ ಬಂಧನ

    ಅಜಿತ್​ ರೈ ಮನೆಯಲ್ಲಿ ಏನೆಲ್ಲಾ ವಸ್ತುಗಳು ಸಿಕ್ಕಿವೆ?

ತಹಶೀಲ್ದಾರ್ ಅಜಿತ್​ ರೈ ಬಂಧನವಾಗಿದೆ. ನಿನ್ನೆ ಲೋಕಾಯುಕ್ತ ಅಧಿಕಾರಿಗಳು ಅಜಿತ್​ ರೈ ಮನೆ ಮೇಲೆ ದಾಳಿ ಮಾಡಿದ್ದರು. ಅಕ್ರಮ ಆಸ್ತಿ ಆರೋಪದ ಮೇಲೆ ಲೋಕಾಯುಕ್ತ ದಾಳಿ ನಡೆಸಿತ್ತು. ಈ ವೇಳೆ ಅಪಾರ ಪ್ರಮಾಣದಲ್ಲಿ ಚಿನ್ನಾಭರಣ ಸೇರಿದಂತೆ ಮೌಲ್ಯಯುತ ವಸ್ತುಗಳು ಪತ್ತೆಯಾಗಿದ್ದವು.

ಸರ್ಕಾರಿ ಅಧಿಕಾರಿಗಳ ಜನ್ಮ ಜಾಲಾಡಿದ ಲೋಕಾಯುಕ್ತ

ನಿನ್ನೆ ಸರ್ಕಾರಿ ಅಧಿಕಾರಿಗಳ ಕಚೇರಿ, ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿತ್ತು. 15 ಅಧಿಕಾರಿಗಳಿಗೆ ಸಂಬಂಧಿಸಿದ 62 ಕಡೆ ರೇಡ್ ಮಾಡಿ ಶಾಕ್ ಕೊಟ್ಟಿತ್ತು. ಆದ್ರೆ ದಾಳಿ ವೇಳೆ ಸಿಕ್ಕ.. ಕಂತೆ ಕಂತೆ ನೋಟುಗಳು.. ಆಸ್ತಿ ದಾಖಲೆಗಳು.. ಚಿನ್ನಾಭರಣಗಳನ್ನ ಲೋಕಾ ಅಧಿಕಾರಿಗಳೇ ಶಾಕ್ ಆಗಿದ್ದಾರೆ.

ಬೆಂಗಳೂರು ‘ಲೋಕಾ’ ರೇಡ್

ಬೆಂಗಳೂರಿನ ಕೆ.ಆರ್.ಪುರಂ ತಹಶೀಲ್ದಾರ್ ಅಜಿತ್ ರೈ ಮನೆ ಹಾಗೂ ಕಚೇರಿ ಮೇಲೆ‌ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ರು.. ಇನ್ನು ದಾಳಿ ವೇಳೆ 40 ಲಕ್ಷ ನಗದು ಸೇರಿದಂತೆ 1 ಕೋಟಿ 90 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಅಜಿತ್ ರೈಗೆ ಸಂಬಂಧಿಸಿದ ಸುಮಾರು 11 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ಸಂಬಂಧಿಕರು, ಸ್ನೇಹಿತರ ಹೆಸರಲ್ಲಿ ಬೇನಾಮಿ ಆಸ್ತಿ ಮಾಡಿಟ್ಟಿರುವುದು ಪತ್ತೆಯಾಗಿದೆ. ಜೊತೆಗೆ 4 ಫಾರ್ಚ್ಯುನರ್, 4 ಥಾರ್ ಜೀಪ್, ಒಂದು ಲ್ಯಾಂಡ್ ಕ್ರೂಜರ್ ಸೇರಿದಂತೆ ಐಷಾರಾಮಿ ಕಾರುಗಳು. ನಾಲ್ಕು ಐಶಾರಾಮಿ ಬೈಕ್ಗಳು ಪತ್ತೆಯಾಗಿದೆ. ಇನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ಮುಂದುವರೆಸಿದ್ದು, ಅಜಿತ್ ರೈ ಸುಮಾರು 100 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾರೆ ಎನ್ನಲಾಗ್ತಿದೆ.

ಬಾಗಲಕೋಟೆ ‘ಲೋಕಾ’ ರೇಡ್

ಬಾಗಲಕೋಟೆ ವಿದ್ಯಾಗಿರಿಯ ಅಕ್ಕಿಮರಡಿ ಲೇಔಟ್​​ನಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ್ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಇದುವರೆಗೂ 32 ಲಕ್ಷ ರೂಪಾಯಿ ಹಣ ಸೇರಿದಂತೆ ಅಂದಾಜು 1.45 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಇನ್ನೊಬ್ಬ ಬೀಳಗಿ ಸಹಾಯಕ ಕೃಷಿ ನಿರ್ದೇಶಕ ಕೃಷ್ಣಾ ರಾಮಪ್ಪ ಶಿರೂರ್ ಎಂಬುವವರ ಮನೆಯಲ್ಲಿ ಲೋಕಾಯುಕ್ತ ಟೀಂ ದಾಳಿ ಮಾಡಲಾಗಿದೆ. ಕೃಷ್ಣಾರಿಗೆ ಸಂಬಂಧಿಸಿದ ಎಲ್ಲಾ ನಾಲ್ಕು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ ಲೋಕಾಯುಕ್ತ ಟೀಂಗೆ ಒಟ್ಟು 71.88 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

ಮುದ್ದೇಬಿಹಾಳ, ಬಸವನ ಬಾಗೇವಾಡಿ ರೇಡ್

ಮುದ್ದೇಬಿಹಾಳದ ಜಿನ್ನಪ್ಪ ಪದ್ಮಣ್ಣ ಶೆಟ್ಟಿಗೆ ಸೇರಿದ 3 ಸ್ಥಳಗಳಲ್ಲಿ ಲೋಕಾಯುಕ್ತ ಟೀಂ ದಾಳಿ ನಡೆಸಿದೆ. ಜಿನ್ನಪ್ಪ ಪದ್ಮಣ್ಣ ಶೆಟ್ಟಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ದಾಳಿ ವೇಳೆ ಒಟ್ಟು 1.42 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಇನ್ನು ಬಸವನ ಬಾಗೇವಾಡಿ ಪಿಡಬ್ಲ್ಯುಡಿ ಉಪವಿಭಾಗದ ಎಇಇ ಕಚೇರಿಯ ಕಿರಿಯ ಅಭಿಯಂತರರು ಭೀಮನಗೌಡ ಬಿರಾದಾರ್ಗೆ ಸೇರಿದ 2 ಸ್ಥಳಗಳಲ್ಲಿ ರೇಡ್ ಮಾಡಲಾಗಿದೆ. ಈ ವೇಳೆ 1.90 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

ಮಡಿಕೇರಿ, ಸಿಂಧನೂರು ರೇಡ್

ಮಡಿಕೇರಿ ಗ್ರಾಮೀಣ ನೀರು ಮತ್ತು ಒಳಚರಂಡಿ ಎಫ್‌ಡಿಎ ಅಬ್ದುಲ್ ಬಷೀರ್ಗೆ ಸೇರಿದ ಮೂರು ಕಡೆ ದಾಳಿ ನಡೆಸಿ 14 ಲಕ್ಷ ನಗದು ಸೇರಿ 1.14 ಕೋಟಿ ಮೌಲ್ಯದ ಆಸ್ತಿ ಪಾಸ್ತಿ ಪತ್ತೆ ಮಾಡಿದ್ದಾರೆ. ಇತ್ತ ಸಿಂಧನೂರು ಟೌನ್ ಆಂಡ್ ಕಂಟ್ರಿ ಪ್ಲಾನಿಂಗ್ ಮೆಂಬರ್ ಸೆಕ್ರೆಟರಿ ಶರಣಪ್ಪಗೆ ಸೇರಿದ ನಾಲ್ಕು ಕಡೆಗಳಲ್ಲಿ ದಾಳಿ ನಡೆಸಿ 14 ಲಕ್ಷ ನಗದು ಸೇರಿ 2.03 ಕೋಟಿ ಮೌಲ್ಯದ ಆಸ್ತಿ ಪಾಸ್ತಿ ಪತ್ತೆ‌ ಮಾಡಿದ್ದಾರೆ.

ತುಮಕೂರು, ರಾಯಚೂರು ರೇಡ್

ತುಮಕೂರು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಕೆ.ಹೆಚ್ ರವಿಗೆ ಸೇರಿದ ಆರು ಕಡೆ ದಾಳಿ ನಡೆಸಿ 4.27 ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡಿದ್ದಾರೆ. ರಾಯಚೂರು ಲೋಕೋಪಯೋಗಿ ಇಲಾಖೆ ಎಇಇ ಪ್ರಕಾಶ್ಗೆ ಸೇರಿದ ಎರಡು ಕಡೆ ದಾಳಿ ನಡೆಸಿ 2.71 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪತ್ತೆ ಮಾಡಲಾಗಿದೆ.

ಹಗರಿಬೊಮ್ಮನಹಳ್ಳಿ, ಗೌರಿಬಿದನೂರು ರೇಡ್

ಹಗರಿಬೊಮ್ಮನಹಳ್ಳಿ ಇಇ ಜೆಸ್ಕಾಂ ಶೇಖರ್ ಹನುಮಂತ ಬಹುರೂಪಿಗೆ ಸೇರಿದ ನಾಲ್ಕು ಕಡೆ ದಾಳಿ ನಡೆಸಿ 3 ಕೋಟಿ ಮೌಲ್ಯದ ಅಕ್ರಮ ಆಸ್ತಿ ಮಾಡಿದ್ದಾರೆ. ಗೌರಿಬಿದನೂರು ಅಬಕಾರಿ ಇನ್ಸ್‌ಪೆಕ್ಟರ್ ವಿ.ರಮೇಶ್ಗೆ ಸೇರಿದ ಐದು ಕಡೆ ದಾಳಿ ನಡೆಸಿ 2.44 ಕೋಟಿ ರೂಪಾಯಿ ಪತ್ತೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking: ತಹಶೀಲ್ದಾರ್​ ಅಜಿತ್​​ ರೈನನ್ನು ಬಂಧಿಸಿದ ಲೋಕಾಯುಕ್ತ ಪೊಲೀಸರು

https://newsfirstlive.com/wp-content/uploads/2023/06/K-R-Puram-Tahashildar.jpg

Load More