Advertisment

ಪಾತ್ರೆ ತೊಳೆದು, ಶೌಚಾಲಯ ಸ್ವಚ್ಛಗೊಳಿಸಬೇಕು.. ಪಂಜಾಬ್ ಮಾಜಿ DCM ಸುಖಬೀರ್ ಸಿಂಗ್‌ಗೆ ಕಠಿಣ ಶಿಕ್ಷೆ!

author-image
admin
Updated On
ಪಾತ್ರೆ ತೊಳೆದು, ಶೌಚಾಲಯ ಸ್ವಚ್ಛಗೊಳಿಸಬೇಕು.. ಪಂಜಾಬ್ ಮಾಜಿ DCM ಸುಖಬೀರ್ ಸಿಂಗ್‌ಗೆ ಕಠಿಣ ಶಿಕ್ಷೆ!
Advertisment
  • ಅಮೃತಸರದ ಗೋಲ್ಡನ್ ಟೆಂಪಲ್​ನಲ್ಲಿ ಚಪ್ಪಲಿ ಸ್ವಚ್ಛಗೊಳಿಸಬೇಕು
  • ಇಂದು ಸುಖಬೀರ್ ಸಿಂಗ್‌ ಬಾದಲ್ ಗುರುದ್ವಾರದ ಕಾವಲು ಕಾಯಬೇಕು
  • ಪಂಜಾಬ್‌ನ ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್​ರ ಪುತ್ರನಿಗೆ ಕಠಿಣ ಶಿಕ್ಷೆ!

ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್​ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಂಜಾಬ್​ನಲ್ಲಿ ಧಾರ್ಮಿಕ ದುರ್ವರ್ತನೆ ತೋರಿದ್ದಕ್ಕಾಗಿ ಸಿಖ್ಖರ ಅತ್ಯುನ್ನತ ಸರ್ವೋಚ್ಚ ಧಾರ್ಮಿಕ ಸಂಸ್ಥೆ ಅಕಾಲ್ ತಖ್ತ್​​ ಶಿಕ್ಷೆ ವಿಧಿಸಿದೆ. ಅದು ಏನಂದ್ರೆ ಅಮೃತಸರದ ಗೋಲ್ಡನ್ ಟೆಂಪಲ್​ನಲ್ಲಿ ಚಪ್ಪಲಿ ಸ್ವಚ್ಛಗೊಳಿಸಬೇಕು. ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯಬೇಕು. ಶೌಚಾಲಯ ಸ್ವಚ್ಚಗೊಳಿಸಬೇಕು ಮತ್ತು ಗುರುದ್ವಾರದ ಕಾವಲು ಕಾಯಬೇಕು ಎಂದು ಆದೇಶಿಸಿದೆ.

Advertisment

ಪಂಜಾಬ್​ನಲ್ಲಿ ಬಿಜೆಪಿ-ಅಕಾಲಿ ದಳ ಸರ್ಕಾರದಲ್ಲಿ ಎರಡು ಬಾರಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಸುಖ್​ಬೀರ್ ಸಿಂಗ್, ಪಂಜಾಬ್‌ನ ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್​ರ ಪುತ್ರರೂ ಆಗಿದ್ದಾರೆ.
ಅ*ತ್ಯಾಚಾರ ಕೇಸ್​ನಲ್ಲಿ ಶಿಕ್ಷೆಗೊಳಲಾಗಿರುವ ಡೇರಾ ಸಚ್ಛಾ ಸೌಧದ ಮುಖ್ಯಸ್ಥ ಗುರ್ಮಿತ್​ ರಾಮ್ ರಹೀಂಗೆ ಬೆಂಬಲಿಸಿದ್ದಕ್ಕಾಗಿ ಸುಖಬೀರ್ ಸಿಂಗ್ ಬಾದಲ್​ಗೆ ತಂಖೈಯಾ ಘೋಷಿಸಿದೆ. ಸಿಖ್​ರ ಸರ್ವೋಚ್ಚ ಧಾರ್ಮಿಕ ಸಂಸ್ಥೆ ಅಕಾಲ್ ತಖ್ತ್ ಶಿಕ್ಷೆ ವಿಧಿಸಿದೆ.

publive-image

ಶಿರೋಮಣಿ ಅಕಾಲಿ ದಳ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸುಖಬೀರ್ ಸಿಂಗ್ ಉಪಮುಖ್ಯಮಂತ್ರಿಯಾಗಿದ್ದರು. 2007ರಿಂದ 2017ರವರೆಗೆ ತಮ್ಮ ಅಧಿಕಾರಾವಧಿಯಲ್ಲಿ ಹಲವು ವಿವಾದಾತ್ಮಕ ನಿರ್ಧಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆ ಮೂಲಕ ಸಿಖ್ ಧರ್ಮಕ್ಕೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: WhatsApp ಸ್ಟೇಟಸ್‌ಗೆ ಫೋಟೋ ಹಾಕಿದ್ದಕ್ಕೆ ಪ್ರಾಣ ಬಿಟ್ಟ ಪ್ರೇಯಸಿ; ಕಾರಣವೇನು? 

Advertisment

ಪಂಜಾಬ್ ಡಿಸಿಎಂ ಆಗಿದ್ದಾಗ ಸುಖಬೀರ್ ಸಿಂಗ್ ಬಾದಲ್ ಅವರು ಅ*ತ್ಯಾಚಾರ ಕೇಸ್​ನಲ್ಲಿ ಶಿಕ್ಷೆಯಲ್ಲಿರುವ ಗುರ್ಮಿತ್ ರಾಮ್ ರಹೀಂಗೆ ಬೆಂಬಲಿಸಿರುವ ಆರೋಪವಿದೆ. ಅಲ್ಲದೇ ಗುರುಮಿತ್ ರಾಮ್ ರಹೀಂ, ಸಿಖ್ಖರ ಪವಿತ್ರ ಗ್ರಂಥ ‘ಗುರು ಗ್ರಂಥ’ಕ್ಕೆ ಅಗೌರವ ತೋರಿಸಿದ್ದ. ಆ ಬಳಿಕ ಪಂಜಾಬ್​ನಲ್ಲಿ ಡೇರಾ ಸಚ್ಚಾ ಸೌಧದ ಅನುಯಾಯಿಗಳು ಮತ್ತು ಸಿಖ್ಖರ ನಡುವೆ ಘರ್ಷಣೆ ನಡೆದು ಹಲವರು ಮೃತಪಟ್ಟಿದ್ದರು. ಈ ಸಮಯದಲ್ಲಿ ಗುರ್ಮಿತ್ ರಾಮ್ ರಹೀಂಗೆ ಕ್ಷಮಾದಾನ ನೀಡಿರುವ ಆರೋಪ ಸುಖಬೀರ್ ಸಿಂಗ್ ಬಾದಲ್​ ಮೇಲಿದೆ.

publive-image

ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ಸುಖ್​ಬೀರ್ ಸಿಂಗ್ ಬಾದಲ್ ಕ್ಷಮೆ ಕೇಳಿದ್ದರು. ಬಾದಲ್​ರನ್ನು ವಿಚಾರಣೆ ನಡೆಸಿದ್ದ ಜತೇದಾರ್ ಗ್ಯಾನಿ ರಘಬೀರ್ ಸಿಂಗ್ ನೇತೃತ್ವದ ಐವರು ಸಿಖ್ಖರ ಪ್ರಧಾನ ಅರ್ಚಕರ ತಂಡವಾದ ಅಕಾಲ್ ತಖ್ತ್​ ಆ.30ರಂದು ತಪ್ಪಿತಸ್ಥರು ಎಂದು ಘೋಷಿಸಿತ್ತು. ಶಿಕ್ಷೆ ಪ್ರಕಟಿಸಿರಲಿಲ್ಲ. ಡಿಸೆಂಬರ್ 2ರ ಸೋಮವಾರದಂದು ಶಿಕ್ಷೆ ಪ್ರಕಟಿಸಿದ್ದು, ಸುಖಬೀರ್ ಸಿಂಗ್ ಬಾದಲ್ ಡಿ.3ರಂದು ಮಂಗಳವಾರ ಶಿಕ್ಷೆ ಅನುಭವಿಸಬೇಕಿದೆ.

ಉಪಮುಖ್ಯಮಂತ್ರಿಯಾಗಿದ್ದ ಸಿಖ್ ಧರ್ಮಕ್ಕೆ ಅವಮಾನಿಸುವ 4 ತಪ್ಪು ಮಾಡಿದ್ದಾರೆ ಎಂದು ಸುಖಬೀರ್ ಸಿಂಗ್ ವಿರುದ್ಧ ಆರೋಪಿಸಲಾಗಿದೆ. ಇದೀಗ ಮಾಜಿ ಡಿಸಿಎಂ ಬಾದಲ್ ಅವರು ಸೇವಾದಾರ್ ಸಮವಸ್ತ್ರ ಧರಿಸಿ, ಕೊರಳಲ್ಲಿ ನಾಮಫಲಕ ಧರಿಸಿ, ಅಮೃತಸರದ ಸ್ವರ್ಣಮಂದಿರದಲ್ಲಿ ಪಾತ್ರೆ ತೊಳೆಯಬೇಕು, ಶೌಚಾಲಯ ಸ್ವಚ್ಛಗೊಳಿಸಬೇಕು ಮತ್ತು ಚಪ್ಪಲಿ ಸ್ವಚ್ಛಗೊಳಿಸಬೇಕು ಜೊತೆಗೆ ಗುರುದ್ವಾರದ ಕಾವಲು ಕಾಯಬೇಕಿದೆ.

Advertisment

ವರದಿ - ವಿಶ್ವನಾಥ್ ಜಿ. (ಸೀನಿಯರ್ ಕಾಪಿ ಎಡಿಟರ್)  

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment