newsfirstkannada.com

ಟೀಮ್ ಇಂಡಿಯಾಗೆ ಸಿಕ್ಕಿದ್ದಾನೆ ನಯಾ ಶಮಿ.. ಇಬ್ಬರ ನಡುವೆ ಇದೆ ಹಲವು ಸಾಮ್ಯತೆ..!

Share :

Published September 28, 2024 at 2:21pm

    ಮೊಹಮ್ಮದ್​ ಶಮಿ ಇಲ್ಲ ಅಂದರೂ ಸಮಸ್ಯೆ ಆಗಲ್ಲ

    ಮೊಹ್ಮದ್ ಶಮಿಯನ್ನೇ ಓವರ್ ಟೇಕ್ ಮಾಡ್ತಾರಾ?

    BGTಗಾಗಿ ಆಸ್ಟೇಲಿಯಾ​​ ಫ್ಲೈಟ್​ ಏರುತ್ತಾರೆ ಇವರು?

ಟೀಮ್ ಇಂಡಿಯಾದಲ್ಲೀಗ ನೋ ಮೊಹಮ್ಮದ್ ಶಮಿ, ನೋ ಪ್ರಾಬ್ಲಂ ಅನ್ನೋ ಕಾಲ ಶುರುವಾಗಿದೆ. ಯಾಕಂದ್ರೆ ಟೀಮ್ ಇಂಡಿಯಾಗೆ ಒಬ್ಬ ನಯಾ ಮೊಹಮ್ಮದ್ ಶಮಿ ಸಿಕ್ಕಿದ್ದಾನೆ!

ಮೊಹಮ್ಮದ್ ಶಮಿ.. ಟೀಮ್ ಇಂಡಿಯಾದ ರಿವರ್ಸ್ ಸ್ವಿಂಗ್ ಮಾಸ್ಟರ್​.. ನ್ಯೂ ಆ್ಯಂಡ್ ಹೋಲ್ಡ್​ ಬಾಲ್​ನಲ್ಲಿ ಅದ್ಭುತವನ್ನೇ ಸೃಷ್ಟಿಸಬಲ್ಲ ವೇಗಿ.. ರೆಡ್​​ ಬಾಲ್ ಕ್ರಿಕೆಟ್​​ನ ರಿಯಲ್ ಮ್ಯಾಚ್ ವಿನ್ನರ್.. ಇನ್​ಫ್ಯಾಕ್ಟ್​- ಮೊಹಮ್ಮದ್ ಶಮಿ ಇಲ್ಲದ ಟೆಸ್ಟ್ ಕ್ರಿಕೆಟ್​ನಲ್ಲಿ ಬೌಲಿಂಗ್ ಬಲವನ್ನು ಊಹಿಸಿಕೊಳ್ಳುವುದು ನಿಜಕ್ಕೂ ಕಷ್ಟಕರ. ಆದ್ರೀಗ ಕಾಲ ಬದಲಾಗ್ತಿದ್ದು, ನೋ ಶಮಿ.. ನೋ ಪ್ರಾಬ್ಲಂ ಅನ್ನೋ ದಿನಗಳು ಶುರುವಾಗಿದೆ. ಇದಕ್ಕೆಲ್ಲಾ ಕಾರಣ ನ್ಯೂ ಮೊಹಮ್ಮದ್ ಶಮಿ ಎಂಟ್ರಿ.

ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯ ಆಪ್ತ ಜಮೀರ್​ ಅಹ್ಮದ್​​ಗೂ ಸಂಕಷ್ಟ; ಏನಿದು ಪ್ರಕರಣ..?

ಟೀಮ್ ಇಂಡಿಯಾಗೆ ಸಿಕ್ಕಿದ್ದಾನೆ ನ್ಯೂ ಶಮಿ..!
ಟೀಮ್ ಇಂಡಿಯಾಗೆ ನಯಾ ಮೊಹಮ್ಮದ್ ಶಮಿ ಸಿಕ್ಕಿದ್ದಾನೆ. ಅಂದ್ಹಾಗೆ ಆ ನಯಾ ಪೇಸರ್ ಬೇರ್ಯಾರು ಅಲ್ಲ. ನ್ಯೂ ಪೇಸ್​ ಸೆನ್ಸೇಷನ್ ಆಕಾಶ್ ದೀಪ್. ಸದ್ಯ ಟೀಮ್ ಇಂಡಿಯಾ ಟೆಸ್ಟ್​ ತಂಡದ ಭಾಗವಾಗಿರುವ ಆಕಾಶ್ ದೀಪ್, ದಿನ ಕಳೆದಂತೆ ಅನುಭವಿ ಮೊಹಮ್ಮದ್ ಶಮಿಯನ್ನೇ ಮರೆಸುತ್ತಿದ್ದಾನೆ. ನೋ ಶಮಿ.. ನೋ ಪ್ರಾಬ್ಲಂ ಎಂಬ ಮಾತು ಕೇಳಿ ಬರುವಂತೆ ಮಾಡ್ತಿದ್ದಾನೆ. ಟೀಮ್ ಇಂಡಿಯಾದ ನಯಾ ಮೊಹಮ್ಮದ್ ಶಮಿಯಾಗಿ ಕಾಣಿಸಿಕೊಳ್ತಿದ್ದಾನೆ. ಇದಕ್ಕೆಲ್ಲಾ ಆತನ ಪರ್ಫಾಮೆನ್ಸ್​ ಮಾತ್ರವೇ ಅಲ್ಲ. ಶಮಿ ಹಾಗೂ ಆಕಾಶ್ ದೀಪ್​​ ನಡುವೆ ಕೆಲ ಸಾಮ್ಯತೆಗಳು ಇವೆ.

ಹೊಸ ಬಾಲ್​​​​​​ನಲ್ಲಿ ಬ್ರೇಕ್ ಥ್ರೂ ನೀಡುವಲ್ಲಿ ನಿಸ್ಸೀಮ
ರೆಡ್​ ಬಾಲ್​ ಹಿಡಿದು ಮೊಹಮ್ಮದ್ ಶಮಿ ದಾಳಿಗಿಳಿದ್ರೆ ಸಾಕು. ವಿಕೆಟ್ ಬೇಟೆಯಾಡುವ ಭರವಸೆ ಫ್ಯಾನ್ಸ್ ಮೂಡುತ್ತೆ. ಆದ್ರೀಗ ಇಂಥದ್ದೇ ಭರವಸೆ ಮೂಡಿಸ್ತಿರೋದು ವೇಗಿ ಆಕಾಶ್​ ದೀಪ್​. ಇದಕ್ಕೆ ಚೆನ್ನೈ ಟೆಸ್ಟ್ ಹಾಗೂ ಕಾನ್ಪುರ ಟೆಸ್ಟ್​ ಮಾತ್ರವಲ್ಲ. ಆತ ಡೆಬ್ಯು ಪಂದ್ಯವೂ ಸಾಕ್ಷಿ. ಇಂಗ್ಲೆಂಡ್ ಎದುರಿನ ರಾಂಚಿ ಟೆಸ್ಟ್​ನಲ್ಲಿ ಡೆಬ್ಯು ಮಾಡಿದ್ದ ಆಕಾಶ್​ ದೀಪ್, ತಾನು ದಾಳಿಗಿಳಿದ ಮೊದಲ ಓವರ್​​ನಲ್ಲೇ ಡೇಂಜರಸ್ ಬೆನ್ ಡಕೆಟ್, ಓಲಿ ಪೋಪ್​ಗೆ ಗೇಟ್ ಪಾಸ್ ನೀಡಿದ್ದರು. ಇದು ಮೊದಲ ಪಂದ್ಯಕ್ಕೆ ಸಿಮೀತವಾಗಲಿಲ್ಲ. ಈಗಿನ ಬಾಂಗ್ಲಾ ಸರಣಿಯಲ್ಲೂ ಮುಂದುವರಿದಿದೆ.

ಇದನ್ನೂ ಓದಿ:ಭಾರತ-ಬಾಂಗ್ಲಾ ನಡುವಿನ ಟೆಸ್ಟ್ ಪಂದ್ಯ ಸ್ಟಾಪ್.. 2ನೇ ದಿನದಲ್ಲಿ ಇನ್ನಿಂಗ್ಸ್​ ನಡೆಯೋದು ಡೌಟ್, ಕಾರಣ?

ಬಾಲ್​ ರಿಲೀಸ್.. ಆ್ಯಕ್ಷನ್​ನಲ್ಲೂ ಇಬ್ಬರ ಸಾಮ್ಯತೆ
ಆಕಾಶ್ ದೀಪ್ ಬೌಲಿಂಗ್ ಶೈಲಿ ಮೊಹಮ್ಮದ್ ಶಮಿಯನ್ನೇ ನೆನಪಿಸುತ್ತೆ. ಸೀಮ್ ಮೂಮೆಂಟ್, ಬಾಲ್ ರಿಲೀಸಿಂಗ್ ಸ್ಟ್ರೈಲ್​, ಬೌಲಿಂಗ್ ಆ್ಯಕ್ಷನ್ ಮಾತ್ರವಲ್ಲ.​ ಆಕಾಶ್​ ದೀಪ್ ಎಸೆಯುವ ಕಟ್ಟರ್​​ ಬಾಲ್ಸ್​, ಸ್ವಿಂಗ್​​ ಆ್ಯಂಡ್​ ಕಟ್ರೋಲ್​​​​​​​​​​​​​​​​​​​​ ಸೇಮ್ ಸೇಮ್ ಶಮಿಯನ್ನೇ ಹೋಲುತ್ತೆ. ವಿಕೆಟ್ ಬೇಟೆಯಲ್ಲೂ ಇವರಿಬ್ಬರ ನಡುವೆ ಸಾಮ್ಯತೆ ಇದೆ.

ಮೊಹಮ್ಮದ್ ಶಮಿ ಕಬಳಿಸಿರುವ ಶೇಖಡ 60ರಷ್ಟು ವಿಕೆಟ್ಸ್​, ಬೋಲ್ಡ್​ ಹಾಗೂ ಎಲ್​ಬಿಡ್ಲೂ ಮೂಲಕ ಬಂದಿದೆ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಆಕಾಶ್ ದೀಪ್ ಲಿಸ್ಟ್​ Aನಲ್ಲಿ ಪಡೆದ ವಿಕೆಟ್​​ಗಳ ಪೈಕಿ 50ರಷ್ಟು ಬೌಲ್ಡ್ ಮತ್ತು LBW ಮೂಲಕ ಬಂದಿದ್ರೆ, ಫಸ್ಟ್​ ಕ್ಲಾಸ್ ಕ್ರಿಕೆಟ್​​ನಲ್ಲಿ ಪಡೆದ 47.45ರಷ್ಟು ವಿಕೆಟ್​​​​ ಬೌಲ್ಡ್ ಅಂಡ್ LBW ಆಗಿರುವುದು ವಿಶೇಷ.

ಲೋವರ್ ಆರ್ಡರ್​ನಲ್ಲಿ ಬ್ಯಾಟಿಂಗ್ ಮಾಡುವ ಕೆಪಾಸಿಟಿ
ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದಾಗ ಮೊಹಮ್ಮದ್ ಶಮಿ, ಬ್ಯಾಟ್ಸ್​ಮನ್ ಆಗಿ ನೆರವಾಗಿದ್ದಿದೆ. ಇದೇ ಕ್ವಾಲಿಟಿ ಆಕಾಶ್​ ದೀಪ್​​ರಲ್ಲಿ ಕಾಣಬಹುದಾಗಿದೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್​​ ಚೆನ್ನೈನಲ್ಲಿ ಸಿಡಿಸಿದ 17 ರನ್ ಮಾತ್ರವೇ ಅಲ್ಲ. ದುಲೀಪ್​ ಟ್ರೋಫಿಯಲ್ಲಿ ಸಿಡಿಸಿದ ಅರ್ಧಶತಕವೂ ಒಂದಾಗಿದೆ.

ಇದನ್ನೂ ಓದಿ:ಸರ್ಫರಾಜ್ ಖಾನ್​ ಸಹೋದರ ಮುಶೀರ್ ಖಾನ್ ಕಾರು ಅಪಘಾತ.. ತಲೆಗೆ ಬಲವಾದ ಪೆಟ್ಟು

ಶಮಿಯನ್ನು ಓವರ್ ಟೇಕ್ ಮಾಡ್ತಾರಾ ಆಕಾಶ್​ ದೀಪ್?
ಇಂಜುರಿಯಿಂದ ಚೇತರಿಸಿಕೊಳ್ತಿರುವ ಗೇಮ್​ ಚೇಂಜರ್ ಮೊಹಮ್ಮದ್ ಶಮಿ, ಸಂಫೂರ್ಣ ಫಿಟ್​​ ಆಗಿಲ್ಲ. ಹೀಗಾಗಿ ಮುಂದಿನ ನ್ಯೂಜಿಲೆಂಡ್ ಸಿರೀಸ್​ಗೂ ಕಮ್​​ಬ್ಯಾಕ್​​ ಮಾಡೋದು ಡೌಟ್. ಇನ್ನೊಂದೆಡೆ ವೇಳೆ ಟೀಮ್ ಇಂಡಿಯಾಗೆ ಎಂಟ್ರಿ ನೀಡಿದ ಆಕಾಶ್ ದೀಪ್, ದಿನೇ ದಿನೇ ಪ್ರಬುದ್ಧತೆ ತೋರುತ್ತಿದ್ದಾರೆ. ರೋಹಿತ್ ಹಾಗೂ ಗಂಭೀರ್ ಮನ ಗೆಲ್ತಿದ್ದಾರೆ. ಇದು ಸಹಜವಾಗೇ ಬಾರ್ಡರ್ ಗವಾಸ್ಕರ್ ಟ್ರೋಫಿಯ ರೇಸ್​​ನಲ್ಲಿ ನಿಲ್ಲುವಂತೆ ಮಾಡ್ತಿದೆ. ಹೀಗಾಗಿ ಶಮಿ ಜಾಗವನ್ನ ಆಕಾಶ್ ದೀಪ್ ಆಕ್ರಮಿಸಿ ಕೊಳ್ಳುವ ಸಾಧ್ಯತೆ ಇದೆ. ಪೇಸ್​ನಲ್ಲಿ ಕೊಂಚ ಇಂಪ್ರೂವ್ ಆಗಬೇಕಿದೆ.

ಟೆಸ್ಟ್​ ತಂಡದ ನಯಾ ಸೆನ್ಸೇಷನ್​​ ಆಗಿರುವ ಆಕಾಶ್​, ವಿಕೆಟ್ ಟೇಕರ್ ಬೌಲರ್ ಆಗಿದ್ದಾರೆ. ಇದು ಸಹಜವಾಗೇ ಆಸಿಸ್​ ಪ್ರವಾಸದ ಫ್ರಂಟ್​ ಲೈನ್ ರೇಸ್​ನಲ್ಲಿ ನಿಲ್ಲುವಂತೆ ಮಾಡಿದೆ. ಆದ್ರೆ, ಈಗಲೇ ಆಕಾಶ್ ದೀಪ್​, ಶಮಿಗೆ ಪರ್ಯಾಯ ಅನ್ನೋದು ಅತಿಶಯೋಕ್ತಿ ಅನ್ನಿಸಿತು. ಹಾಗಾಗಿ ಇನ್ನಷ್ಟು ಸಮಯ ಕಾಯಲೇಬೇಕಿದೆ.

ಇದನ್ನೂ ಓದಿ:2025 IPL; ವಿದಾಯದ ಬೆನ್ನಲ್ಲೇ CSKಗೂ ಬಿಗ್ ಶಾಕ್ ಕೊಟ್ಟ ಕೋಚ್ ಡ್ವೇನ್ ಬ್ರಾವೋ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟೀಮ್ ಇಂಡಿಯಾಗೆ ಸಿಕ್ಕಿದ್ದಾನೆ ನಯಾ ಶಮಿ.. ಇಬ್ಬರ ನಡುವೆ ಇದೆ ಹಲವು ಸಾಮ್ಯತೆ..!

https://newsfirstlive.com/wp-content/uploads/2024/09/AAKASH-DEEP.jpg

Load More