ಮೊಹಮ್ಮದ್ ಶಮಿ ಇಲ್ಲ ಅಂದರೂ ಸಮಸ್ಯೆ ಆಗಲ್ಲ
ಮೊಹ್ಮದ್ ಶಮಿಯನ್ನೇ ಓವರ್ ಟೇಕ್ ಮಾಡ್ತಾರಾ?
BGTಗಾಗಿ ಆಸ್ಟೇಲಿಯಾ ಫ್ಲೈಟ್ ಏರುತ್ತಾರೆ ಇವರು?
ಟೀಮ್ ಇಂಡಿಯಾದಲ್ಲೀಗ ನೋ ಮೊಹಮ್ಮದ್ ಶಮಿ, ನೋ ಪ್ರಾಬ್ಲಂ ಅನ್ನೋ ಕಾಲ ಶುರುವಾಗಿದೆ. ಯಾಕಂದ್ರೆ ಟೀಮ್ ಇಂಡಿಯಾಗೆ ಒಬ್ಬ ನಯಾ ಮೊಹಮ್ಮದ್ ಶಮಿ ಸಿಕ್ಕಿದ್ದಾನೆ!
ಮೊಹಮ್ಮದ್ ಶಮಿ.. ಟೀಮ್ ಇಂಡಿಯಾದ ರಿವರ್ಸ್ ಸ್ವಿಂಗ್ ಮಾಸ್ಟರ್.. ನ್ಯೂ ಆ್ಯಂಡ್ ಹೋಲ್ಡ್ ಬಾಲ್ನಲ್ಲಿ ಅದ್ಭುತವನ್ನೇ ಸೃಷ್ಟಿಸಬಲ್ಲ ವೇಗಿ.. ರೆಡ್ ಬಾಲ್ ಕ್ರಿಕೆಟ್ನ ರಿಯಲ್ ಮ್ಯಾಚ್ ವಿನ್ನರ್.. ಇನ್ಫ್ಯಾಕ್ಟ್- ಮೊಹಮ್ಮದ್ ಶಮಿ ಇಲ್ಲದ ಟೆಸ್ಟ್ ಕ್ರಿಕೆಟ್ನಲ್ಲಿ ಬೌಲಿಂಗ್ ಬಲವನ್ನು ಊಹಿಸಿಕೊಳ್ಳುವುದು ನಿಜಕ್ಕೂ ಕಷ್ಟಕರ. ಆದ್ರೀಗ ಕಾಲ ಬದಲಾಗ್ತಿದ್ದು, ನೋ ಶಮಿ.. ನೋ ಪ್ರಾಬ್ಲಂ ಅನ್ನೋ ದಿನಗಳು ಶುರುವಾಗಿದೆ. ಇದಕ್ಕೆಲ್ಲಾ ಕಾರಣ ನ್ಯೂ ಮೊಹಮ್ಮದ್ ಶಮಿ ಎಂಟ್ರಿ.
ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯ ಆಪ್ತ ಜಮೀರ್ ಅಹ್ಮದ್ಗೂ ಸಂಕಷ್ಟ; ಏನಿದು ಪ್ರಕರಣ..?
ಟೀಮ್ ಇಂಡಿಯಾಗೆ ಸಿಕ್ಕಿದ್ದಾನೆ ನ್ಯೂ ಶಮಿ..!
ಟೀಮ್ ಇಂಡಿಯಾಗೆ ನಯಾ ಮೊಹಮ್ಮದ್ ಶಮಿ ಸಿಕ್ಕಿದ್ದಾನೆ. ಅಂದ್ಹಾಗೆ ಆ ನಯಾ ಪೇಸರ್ ಬೇರ್ಯಾರು ಅಲ್ಲ. ನ್ಯೂ ಪೇಸ್ ಸೆನ್ಸೇಷನ್ ಆಕಾಶ್ ದೀಪ್. ಸದ್ಯ ಟೀಮ್ ಇಂಡಿಯಾ ಟೆಸ್ಟ್ ತಂಡದ ಭಾಗವಾಗಿರುವ ಆಕಾಶ್ ದೀಪ್, ದಿನ ಕಳೆದಂತೆ ಅನುಭವಿ ಮೊಹಮ್ಮದ್ ಶಮಿಯನ್ನೇ ಮರೆಸುತ್ತಿದ್ದಾನೆ. ನೋ ಶಮಿ.. ನೋ ಪ್ರಾಬ್ಲಂ ಎಂಬ ಮಾತು ಕೇಳಿ ಬರುವಂತೆ ಮಾಡ್ತಿದ್ದಾನೆ. ಟೀಮ್ ಇಂಡಿಯಾದ ನಯಾ ಮೊಹಮ್ಮದ್ ಶಮಿಯಾಗಿ ಕಾಣಿಸಿಕೊಳ್ತಿದ್ದಾನೆ. ಇದಕ್ಕೆಲ್ಲಾ ಆತನ ಪರ್ಫಾಮೆನ್ಸ್ ಮಾತ್ರವೇ ಅಲ್ಲ. ಶಮಿ ಹಾಗೂ ಆಕಾಶ್ ದೀಪ್ ನಡುವೆ ಕೆಲ ಸಾಮ್ಯತೆಗಳು ಇವೆ.
ಹೊಸ ಬಾಲ್ನಲ್ಲಿ ಬ್ರೇಕ್ ಥ್ರೂ ನೀಡುವಲ್ಲಿ ನಿಸ್ಸೀಮ
ರೆಡ್ ಬಾಲ್ ಹಿಡಿದು ಮೊಹಮ್ಮದ್ ಶಮಿ ದಾಳಿಗಿಳಿದ್ರೆ ಸಾಕು. ವಿಕೆಟ್ ಬೇಟೆಯಾಡುವ ಭರವಸೆ ಫ್ಯಾನ್ಸ್ ಮೂಡುತ್ತೆ. ಆದ್ರೀಗ ಇಂಥದ್ದೇ ಭರವಸೆ ಮೂಡಿಸ್ತಿರೋದು ವೇಗಿ ಆಕಾಶ್ ದೀಪ್. ಇದಕ್ಕೆ ಚೆನ್ನೈ ಟೆಸ್ಟ್ ಹಾಗೂ ಕಾನ್ಪುರ ಟೆಸ್ಟ್ ಮಾತ್ರವಲ್ಲ. ಆತ ಡೆಬ್ಯು ಪಂದ್ಯವೂ ಸಾಕ್ಷಿ. ಇಂಗ್ಲೆಂಡ್ ಎದುರಿನ ರಾಂಚಿ ಟೆಸ್ಟ್ನಲ್ಲಿ ಡೆಬ್ಯು ಮಾಡಿದ್ದ ಆಕಾಶ್ ದೀಪ್, ತಾನು ದಾಳಿಗಿಳಿದ ಮೊದಲ ಓವರ್ನಲ್ಲೇ ಡೇಂಜರಸ್ ಬೆನ್ ಡಕೆಟ್, ಓಲಿ ಪೋಪ್ಗೆ ಗೇಟ್ ಪಾಸ್ ನೀಡಿದ್ದರು. ಇದು ಮೊದಲ ಪಂದ್ಯಕ್ಕೆ ಸಿಮೀತವಾಗಲಿಲ್ಲ. ಈಗಿನ ಬಾಂಗ್ಲಾ ಸರಣಿಯಲ್ಲೂ ಮುಂದುವರಿದಿದೆ.
ಇದನ್ನೂ ಓದಿ:ಭಾರತ-ಬಾಂಗ್ಲಾ ನಡುವಿನ ಟೆಸ್ಟ್ ಪಂದ್ಯ ಸ್ಟಾಪ್.. 2ನೇ ದಿನದಲ್ಲಿ ಇನ್ನಿಂಗ್ಸ್ ನಡೆಯೋದು ಡೌಟ್, ಕಾರಣ?
ಬಾಲ್ ರಿಲೀಸ್.. ಆ್ಯಕ್ಷನ್ನಲ್ಲೂ ಇಬ್ಬರ ಸಾಮ್ಯತೆ
ಆಕಾಶ್ ದೀಪ್ ಬೌಲಿಂಗ್ ಶೈಲಿ ಮೊಹಮ್ಮದ್ ಶಮಿಯನ್ನೇ ನೆನಪಿಸುತ್ತೆ. ಸೀಮ್ ಮೂಮೆಂಟ್, ಬಾಲ್ ರಿಲೀಸಿಂಗ್ ಸ್ಟ್ರೈಲ್, ಬೌಲಿಂಗ್ ಆ್ಯಕ್ಷನ್ ಮಾತ್ರವಲ್ಲ. ಆಕಾಶ್ ದೀಪ್ ಎಸೆಯುವ ಕಟ್ಟರ್ ಬಾಲ್ಸ್, ಸ್ವಿಂಗ್ ಆ್ಯಂಡ್ ಕಟ್ರೋಲ್ ಸೇಮ್ ಸೇಮ್ ಶಮಿಯನ್ನೇ ಹೋಲುತ್ತೆ. ವಿಕೆಟ್ ಬೇಟೆಯಲ್ಲೂ ಇವರಿಬ್ಬರ ನಡುವೆ ಸಾಮ್ಯತೆ ಇದೆ.
ಮೊಹಮ್ಮದ್ ಶಮಿ ಕಬಳಿಸಿರುವ ಶೇಖಡ 60ರಷ್ಟು ವಿಕೆಟ್ಸ್, ಬೋಲ್ಡ್ ಹಾಗೂ ಎಲ್ಬಿಡ್ಲೂ ಮೂಲಕ ಬಂದಿದೆ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಆಕಾಶ್ ದೀಪ್ ಲಿಸ್ಟ್ Aನಲ್ಲಿ ಪಡೆದ ವಿಕೆಟ್ಗಳ ಪೈಕಿ 50ರಷ್ಟು ಬೌಲ್ಡ್ ಮತ್ತು LBW ಮೂಲಕ ಬಂದಿದ್ರೆ, ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ ಪಡೆದ 47.45ರಷ್ಟು ವಿಕೆಟ್ ಬೌಲ್ಡ್ ಅಂಡ್ LBW ಆಗಿರುವುದು ವಿಶೇಷ.
ಲೋವರ್ ಆರ್ಡರ್ನಲ್ಲಿ ಬ್ಯಾಟಿಂಗ್ ಮಾಡುವ ಕೆಪಾಸಿಟಿ
ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದಾಗ ಮೊಹಮ್ಮದ್ ಶಮಿ, ಬ್ಯಾಟ್ಸ್ಮನ್ ಆಗಿ ನೆರವಾಗಿದ್ದಿದೆ. ಇದೇ ಕ್ವಾಲಿಟಿ ಆಕಾಶ್ ದೀಪ್ರಲ್ಲಿ ಕಾಣಬಹುದಾಗಿದೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಚೆನ್ನೈನಲ್ಲಿ ಸಿಡಿಸಿದ 17 ರನ್ ಮಾತ್ರವೇ ಅಲ್ಲ. ದುಲೀಪ್ ಟ್ರೋಫಿಯಲ್ಲಿ ಸಿಡಿಸಿದ ಅರ್ಧಶತಕವೂ ಒಂದಾಗಿದೆ.
ಇದನ್ನೂ ಓದಿ:ಸರ್ಫರಾಜ್ ಖಾನ್ ಸಹೋದರ ಮುಶೀರ್ ಖಾನ್ ಕಾರು ಅಪಘಾತ.. ತಲೆಗೆ ಬಲವಾದ ಪೆಟ್ಟು
ಶಮಿಯನ್ನು ಓವರ್ ಟೇಕ್ ಮಾಡ್ತಾರಾ ಆಕಾಶ್ ದೀಪ್?
ಇಂಜುರಿಯಿಂದ ಚೇತರಿಸಿಕೊಳ್ತಿರುವ ಗೇಮ್ ಚೇಂಜರ್ ಮೊಹಮ್ಮದ್ ಶಮಿ, ಸಂಫೂರ್ಣ ಫಿಟ್ ಆಗಿಲ್ಲ. ಹೀಗಾಗಿ ಮುಂದಿನ ನ್ಯೂಜಿಲೆಂಡ್ ಸಿರೀಸ್ಗೂ ಕಮ್ಬ್ಯಾಕ್ ಮಾಡೋದು ಡೌಟ್. ಇನ್ನೊಂದೆಡೆ ವೇಳೆ ಟೀಮ್ ಇಂಡಿಯಾಗೆ ಎಂಟ್ರಿ ನೀಡಿದ ಆಕಾಶ್ ದೀಪ್, ದಿನೇ ದಿನೇ ಪ್ರಬುದ್ಧತೆ ತೋರುತ್ತಿದ್ದಾರೆ. ರೋಹಿತ್ ಹಾಗೂ ಗಂಭೀರ್ ಮನ ಗೆಲ್ತಿದ್ದಾರೆ. ಇದು ಸಹಜವಾಗೇ ಬಾರ್ಡರ್ ಗವಾಸ್ಕರ್ ಟ್ರೋಫಿಯ ರೇಸ್ನಲ್ಲಿ ನಿಲ್ಲುವಂತೆ ಮಾಡ್ತಿದೆ. ಹೀಗಾಗಿ ಶಮಿ ಜಾಗವನ್ನ ಆಕಾಶ್ ದೀಪ್ ಆಕ್ರಮಿಸಿ ಕೊಳ್ಳುವ ಸಾಧ್ಯತೆ ಇದೆ. ಪೇಸ್ನಲ್ಲಿ ಕೊಂಚ ಇಂಪ್ರೂವ್ ಆಗಬೇಕಿದೆ.
ಟೆಸ್ಟ್ ತಂಡದ ನಯಾ ಸೆನ್ಸೇಷನ್ ಆಗಿರುವ ಆಕಾಶ್, ವಿಕೆಟ್ ಟೇಕರ್ ಬೌಲರ್ ಆಗಿದ್ದಾರೆ. ಇದು ಸಹಜವಾಗೇ ಆಸಿಸ್ ಪ್ರವಾಸದ ಫ್ರಂಟ್ ಲೈನ್ ರೇಸ್ನಲ್ಲಿ ನಿಲ್ಲುವಂತೆ ಮಾಡಿದೆ. ಆದ್ರೆ, ಈಗಲೇ ಆಕಾಶ್ ದೀಪ್, ಶಮಿಗೆ ಪರ್ಯಾಯ ಅನ್ನೋದು ಅತಿಶಯೋಕ್ತಿ ಅನ್ನಿಸಿತು. ಹಾಗಾಗಿ ಇನ್ನಷ್ಟು ಸಮಯ ಕಾಯಲೇಬೇಕಿದೆ.
ಇದನ್ನೂ ಓದಿ:2025 IPL; ವಿದಾಯದ ಬೆನ್ನಲ್ಲೇ CSKಗೂ ಬಿಗ್ ಶಾಕ್ ಕೊಟ್ಟ ಕೋಚ್ ಡ್ವೇನ್ ಬ್ರಾವೋ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್