newsfirstkannada.com

ಓದಿದ್ದು ಇಂಜಿನಿಯರಿಂಗ್​, ಆಡಿದ್ದು ಟೆನ್ನಿಸ್​ ಬಾಲ್​! ಆಕಾಶ್​ ಮಾಧ್ವಲ್​ ಲೈಫ್​ ಸ್ಟೋರಿ ಸಖತ್ತಾಗಿದೆ

Share :

25-05-2023

    ಇಂಜಿನಿಯರಿಂಗ್​​ ಸ್ಟೂಡೆಂಟ್​ ಬೌಲರ್​ ಆದ ಕಥೆ

    ಟೆನ್ನಿಸ್​​ ಬಾಲ್​ ಆಡುತ್ತಿದ್ದ ಆಕಾಶ್​​

    ಆಕಾಶ್​ ಮಾಧ್ವಲ್​ ಲೈಫ್​ ಸ್ಟೋರಿ ಸಖತ್ತಾಗಿದೆ

ಆತ ಫಾಸ್ಟ್​ ಬೌಲರ್​ ಅನ್ನೋದು ನಿಜ. ಆದರೆ ಅದಕ್ಕೂ ಮೊದಲು ಆತ ಇಂಜಿನಿಯರ್​ ವಿದ್ಯಾರ್ಥಿ. ಮಾತ್ರವಲ್ಲದೆ, ಟೆನ್ನಿಸ್​​ ಬೌಲರ್​ ಆಗಿದ್ದವನು ನಿನ್ನೆ ಐಪಿಎಲ್​ನಲ್ಲಿ ಹೀರೋ ಆಗಿ ಮೆರೆದನು. ಅಂದಹಾಗೆಯೇ, ಆಕಾಶ್​ ಮಾಧ್ವಲ್​ ನಿಜ ಜೀವನದ ಬಗ್ಗೆ ಒಂದು ರೌಂಡ್​​ ಹಾಕಲೇ ಬೇಕು. ಯಾಕಂದ್ರೆ ಲಕ್ನೋದ 5 ವಿಕೆಟ್​ ಕಿತ್ತು ತಂಡಕ್ಕೆ ಸುಲಭದ ಜಯ ಒದಗಿಸಲು ಈತನೂ ಕೂಡ ಸಾಕ್ಷಿ ಎಂಬುದನ್ನು ಯಾರು ಮರೆಯುವಂತಿಲ್ಲ. ಮಾತ್ರವಲ್ಲದೆ ತಂಡವನ್ನು ಪೈನಲ್​ಗೆ ಕೊಂಡೊಯ್ಯಲು ಸಹಾಯವಾದ ಆಕಾಶ್​ನನ್ನು ನೆನೆಯದೇ ಇರಲು ಸಾಧ್ಯವೇ ಇಲ್ಲ.

ಇಂಜಿನಿಯರಿಂಗ್​​ ಸ್ಟೂಡೆಂಟ್​ ಬೌಲರ್​ ಆದ ಕಥೆ

ಅದೃಷ್ಟವೋ? ಅವಕಾಶವೋ? ಆದರೆ ಆಕಾಶ್​ ಮಾಧ್ವಲ್​ ಮಾತ್ರ ನಿನ್ನೆ ಚಮತ್ಕಾರ ಮಾಡಿದ್ದು ಎಲ್ಲರ ಕಣ್ಣು ಕಟ್ಟಿತ್ತು. ಒಂದಲ್ಲ, ಎರಡರಲ್ಲ ಬರೋಬ್ಬರಿ 5 ವಿಕೆಟ್​ ಕಿತ್ತು ಎಲ್ಲರ ಕಣ್ಣಿಗೆ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆಯೇ ಆಕಾಶ್​ ನಿಜ ಜೀವನ ಬಗ್ಗೆ ತಿಳಿದುಕೊಳ್ಳಲೇ ಬೇಕು.

ಆಕಾಶ್​​ ಇಂಜಿನಿಯರ್​ ವಿದ್ಯಾರ್ಥಿ. ಟೆನ್ನಿಸ್​ ಬಾಲ್​ ಆಡುತ್ತಿದ್ದ ಆಕಾಶ್​ಗೆ ಅದೊಂದು ದಿನ ಅವಕಾಶದ ಬಾಗಿಲು ತೆರೆದಿತ್ತು. ಕಾರಣ ಅವರ ಚೆಂಡು​ ಎಸೆತದ ಶೈಲಿಯಿಂದ ಹಾರ್ಡ್​ ಬಾಲ್​ ಮುಟ್ಟುವ ಅವಕಾಶ ಸಿಕ್ಕಿತ್ತು.

ಟೆನ್ನಿಸ್​​ ಬಾಲ್​ ಆಡುತ್ತಿದ್ದ ಆಕಾಶ್​​

2019ರಲ್ಲಿ ಟೆನ್ನಿಸ್​ ಬಾಲ್​ನಲ್ಲಿ ಕ್ರಿಕೆಟ್​ ಆಡುತ್ತಿದ್ದ ಆಕಾಶ್​ ಅಲ್ಲಿಯವರೆಗೆ ಕೆಂಪು ಬಾಲ್​ ಮುಟ್ಟಿರಲಿಲ್ಲ. ಆದರೆ ಅದೇ ವರ್ಷ ಉತ್ತರಾಖಂಡದ ಕೋಚ್​ ವಾಸಿಮ್​ ಜಾಫರ್​ ಮತ್ತು ಮನೀಶ್​ ಝಾ ಅವರ ಗಮನ ಸೆಳೆದರು. ಇವರಿಂದಾಗಿ ಅವಕಾಶ ಪಡೆದುಕೊಂಡ ಆಕಾಶ್​ ಕೆಂಪು ಬಾಲ್​ ಎಸೆಯಲು ಶುರು ಮಾಡಿದರು.

ನಂತರ ಕೆಂಪು ಬಾಲ್​ ಎಸೆಯಲು ಸತತ ಶ್ರಮ ವಹಿಸಿದರು. ಹೀಗೆ 2022ರಲ್ಲಿ ಮುಂಬೈ ಇಂಡಿಯನ್ಸ್​ ತಂಡಕ್ಕೆ ಆಯ್ಕೆಯಾದರು. ಅಂದು ಗಾಯಗೊಂಡಿದ್ದ ಸೂರ್ಯ ಕುಮಾರ್​ ಯಾದವ್​ ಬದಲಿಯಾಗಿ ತಂಡದೊಳಕ್ಕೆ ಸೇರಿಕೊಂಡರು. ಅಷ್ಟು ಮಾತ್ರವಲ್ಲದೆ, ಅಂದು ಐಪಿಎಲ್​ನಲ್ಲಿ ಮುಂಬೈ ಪರವಾಗಿ ಆಡುವ ಉತ್ತರಾಖಂಡ ರಾಜ್ಯದ ಮೊದಲ ಕ್ರಿಕೆಟಿಗ ಎಂದೆನಿಸಿಕೊಂಡರು.

3 ಓವರ್​ + 5 ರನ್​​ + 5 ವಿಕೆಟ್​

ಆಕಾಶ್​ ಲಕ್ನೋದ 5 ವಿಕೆಟ್​ ಕಬಳಿಸಿದ್ದು ಮಾತ್ರವಲ್ಲ, 3.3 ಓವರ್​ಗೆ ಬರೀ 5 ರನ್​ ಕೊಟ್ಟರು. ಇದೇ ವಿಚಾರಕ್ಕೆ ನಿನ್ನೆ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಇನ್ನು ಕ್ರಿಸ್​ ಜೋರ್ಡಾನ್​ ಕೂಡ 2 ಓವರ್​ನಲ್ಲಿ 7 ರನ್​ ಕೊಟ್ಟು ಗುರುತಿಸಿಕೊಂಡರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಓದಿದ್ದು ಇಂಜಿನಿಯರಿಂಗ್​, ಆಡಿದ್ದು ಟೆನ್ನಿಸ್​ ಬಾಲ್​! ಆಕಾಶ್​ ಮಾಧ್ವಲ್​ ಲೈಫ್​ ಸ್ಟೋರಿ ಸಖತ್ತಾಗಿದೆ

https://newsfirstlive.com/wp-content/uploads/2023/05/Rohit-sharma-1-2.jpg

Load More