ಅಮೆರಿಕಾದ ವರ್ಜಿನಿಯಾದಲ್ಲಿ ಶುರುವಾಗಿರುವ ಕನ್ನಡ ಕಲರವ
ಮೂರು ದಿನಗಳ ಕಾಲ ನಡೆಯಲಿದೆ 12ನೇ ಅಕ್ಕ ವಿಶ್ವ ಸಮ್ಮೇಳನ
ಒಂದೇ ಸೂರಿನಡಿ ಬರಲಿದ್ದಾರೆ ಯುಎಸ್ನ ಎಲ್ಲ ಕನ್ನಡದ ಕಲಿಗಳು
ವರ್ಜಿನಿಯಾ: ಎಲ್ಲಾದರೂ ಇರು, ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ರಾಷ್ಟ್ರಕವಿ ಕುವೆಂಪು ಅವರ ಸಾಲುಗಳನ್ನು ಅಕ್ಷರಶಃ ಅಳವಡಿಸಿಕೊಂಡಿದ್ದು ಅಮೆರಿಕದ ಕನ್ನಡ ಕೂಟಗಳ ಒಕ್ಕೂಟ ಅಂದ್ರೆ ಅಕ್ಕ. ಈಗ ಅಮೆರಿಕದಲ್ಲಿ ಮತ್ತೆ ಕನ್ನಡ ಡಿಂಡಿಮ ಬಾರಿಸಲು ಅಕ್ಕ ಸಮ್ಮೇಳವನವೆಂಬ ಮಹಾಹಬ್ಬ ಶುರುವಾಗಿದೆ. 12ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಈಗಾಗಲೇ ಚಾಲನೆ ಸಿಕ್ಕಿದೆ. ಆಗಸ್ಟ್ 30 ರಿಂದ ಸೆಪ್ಟೆಂಬರ್ 1ರವರೆಗೆ ವರ್ಜಿನಿಯಾದ ರಿಚ್ಮಂಡ್ನಲ್ಲಿ ನಡೆಯಲಿದೆ.
ಇದನ್ನೂ ಓದಿ: ನಮ್ಮ ಮೆಟ್ರೋದಿಂದ ಭರ್ಜರಿ ಗುಡ್ನ್ಯೂಸ್.. ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ
ಅಕ್ಕ ಒಕ್ಕೂಟ ನಡೆಸುತ್ತಿರುವ 12ನೇ ಸಮ್ಮೆಳನವಿದು. ಒಂದೇ ಸೂರಿನಡಿ ಯುಎಸ್ನ ಎಲ್ಲ ಕನ್ನಡಿಗರು ಈ ಮೂರು ದಿನ ಬಂದು ಸೇರುತ್ತಾರೆ. ಕನ್ನಡದ ಸಂಸ್ಕೃತಿ, ಭಾಷೆ, ಅದರ ಬೆಡಗು, ಎಲ್ಲವೂ ಇಲ್ಲಿ ಮೇಳೈಸುತ್ತದೆ. ಕರ್ನಾಟಕದ ವೈಭವವು ಇಲ್ಲಿ ಪ್ರತಿಬಿಂಬಿಸಲಿದೆ. ಜಾನಪದ ಸಾಹಿತಿಗಳು, ಗಾಯಕರು, ನಟ ನಟಿಯರು ಹೀಗೆ ಕನ್ನಡದ ಒಂದೊಂದು ರತ್ನಗಳು ನಮ್ಮ ನಾಡಿನ ಚೆಲುವಿನ ಪುಟಗಳನ್ನು ತೆರೆದಿಡಲಿದ್ದಾರೆ.
ಇದನ್ನೂ ನೋಡಿ:Gold Rate: ಇಂದು ಇಳಿಕೆ ಕಂಡಿತೆ ಚಿನ್ನ? ಎಷ್ಟಿದೆ ಬಂಗಾರದ ಬೆಲೆ? ಇಲ್ಲಿದೆ ಮಾಹಿತಿ
ಕನ್ನಡ ನಾಡು, ನುಡಿ ಕುರಿತು ವಿವಿಧ ಗೋಷ್ಠಿಗಳು, ಚಿಂತನ -ಮಂಥನಗಳು, ಸಂವಾದಗಳು ಇಲ್ಲಿ ನಡೆಯಲಿವೆ. ಅತ್ಯುತ್ತಮ ಮನರಂಜನಾ ಕಾರ್ಯಕ್ರಮಗಳು ಕೂಡ ಇಲ್ಲಿ ನೆರವೇರಲಿದ್ದು, ಅಲ್ಲಿ ನೆರೆದ ಕನ್ನಡಿಗರು ಅಕ್ಷರಶಃ ಕರ್ನಾಟಕವೇ ಅಮೆರಿಕಾದಲ್ಲಿ ಇಳಿದು ಬಂದಿದೆಯೋ ಅನ್ನೊ ಅನುಭವ ಪಡೆಯುತ್ತಾರೆ. ವಿವಿಧ ಕ್ರೀಡಾಕೂಟಗಳಿಂದ ಹಿಡಿದು, ರುಚಿಕರ ತಿಂಡಿಗಳಿಂದ ಹಿಡಿದು ವಾಣಿಜ್ಯ ವ್ಯಾಪಾರದಂತಹ ಮೇಳಗಳು ಇಲ್ಲಿ ನಡೆಯುತ್ತವೆ. ಹೀಗೆ ಹತ್ತು ಹಲವು ಕಾರ್ಯಕ್ರಮಗಳ ವಿಶೇಷ ಕಾರ್ಯಕ್ರಮಗಳು ಅಕ್ಕ ಸಮ್ಮೇಳನದ ಪ್ರಮುಖ ಭಾಗ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ