ಕರೆಂಟ್, ಆ್ಯಕ್ಸಿಜನ್ ಸೌಲಭ್ಯವಿಲ್ಲದೆೇ 12ಕ್ಕೂ ಹೆಚ್ಚು ಮಕ್ಕಳ ಸಾವು
ಇಸ್ರೇಲ್ ಯೋಧರ ದಾಳಿಯಿಂದ ಗಾಯಗೊಂಡವರ ಸಂಖ್ಯೆ ಹೆಚ್ಚಳ
ಗಾಜಾದ ಅಲಾ-ಶಿಫಾ ಆಸ್ಪತ್ರೆಯಲ್ಲಿ ಯಾವುದೇ ಸೌಕರ್ಯಗಳಿಲ್ಲ
ಹಮಾಸ್ ಉಗ್ರರ ಸರ್ವನಾಶಕ್ಕೆ ಪಣತೊಟ್ಟಿರುವ ಇಸ್ರೇಲ್ ಸೈನಿಕರ ಯುದ್ಧ ನಿಂತಿಲ್ಲ. ಸತತ 38 ದಿನಗಳಿಂದ ನಡೆಯುತ್ತಿರುವ ಭಯಾನಕ ದಾಳಿ, ಪ್ರತಿದಾಳಿಯಿಂದ ಗಾಜಾದಲ್ಲಿ ಅಕ್ಷರಶಃ ನರಕವೇ ಸೃಷ್ಟಿಯಾಗಿದೆ. ಗಾಜಾವನ್ನು ಸುತ್ತುವರೆದಿರುವ ಇಸ್ರೇಲ್ ಯೋಧರ ದಾಳಿಯಿಂದ ಗಾಯಗೊಂಡ ಪ್ಯಾಲೆಸ್ತೈನ್ ಮಕ್ಕಳು, ನಾಗರಿಕರು ಚಿಕಿತ್ಸೆ ಸಿಗದೇ ಪರದಾಡುತ್ತಿದ್ದಾರೆ.
ಗಾಜಾದ ಅತಿ ದೊಡ್ಡ ಆಸ್ಪತ್ರೆ ಅಲಾ-ಶಿಫಾದ ಒಂದೊಂದು ದೃಶ್ಯವೂ ಭಯಾನಕವಾಗಿದೆ. ಈ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಕರೆಂಟ್ ಇಲ್ಲ. ಮೊಬೈಲ್ ಟಾರ್ಚರ್ ಹಿಡಿದು ವೈದ್ಯರು ಹೊಲಿಗೆ ಹಾಕುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Gaza doctors work under the most difficult conditions at the Indonesian Hospital.
src: Ahmed Al-Arini pic.twitter.com/IaWFejMvC9— Gaza Notifications (@gazanotice) November 12, 2023
ಅಲಾ-ಶಿಫಾದ ಆಸ್ಪತ್ರೆಯಲ್ಲಿ ಕರುಣಾಜನಕ ದೃಶ್ಯಗಳು ಕಂಡು ಬಂದಿದೆ. ಐಸಿಯುನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಇದಕ್ಕಿಂತಲೂ ಮುಖ್ಯವಾಗಿ ಹಸುಗೂಸುಗಳು, ಆಗಷ್ಟೇ ಜನ್ಮ ಪಡೆದ ಮಕ್ಕಳು ಸರಿಯಾದ ಚಿಕಿತ್ಸೆ ಸಿಗದೇ ಸಾವನ್ನಪ್ಪುತ್ತಿರೋ ದೃಶ್ಯಗಳು ಕಂಡು ಬಂದಿದೆ. ಕರೆಂಟ್ ಮತ್ತು ಆ್ಯಕ್ಸಿಜನ್ ಸೌಲಭ್ಯವಿಲ್ಲದೆೇ 12ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿರೋ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಗಾಜಾದ ಅಲಾ-ಶಿಫಾ ಆಸ್ಪತ್ರೆಯಲ್ಲಿ ಯಾವುದೇ ಸೌಕರ್ಯಗಳು ಸಿಗದೇ ರೋಗಿಗಳು, ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಗಾಯಗೊಂಡವರನ್ನ ಬದುಕಿಸೋದು ವೈದ್ಯರಿಂದ ಸಾಧ್ಯವಾಗುತ್ತಿಲ್ಲ. ಹಮಾಸ್ ಉಗ್ರರನ್ನು ಟಾರ್ಗೆಟ್ ಮಾಡಿರುವ ಇಸ್ರೇಲ್ ಸೇನೆ ಅಲಾ ಶಿಫಾ ಆಸ್ಪತ್ರೆ ಸಮೀಪವೂ ಆಗಮಿಸಿದೆ. ಹೀಗಾಗಿ ಗಾಯಗೊಂಡವರ ಸಂಖ್ಯೆ ದಿನಕಳೆದಂತೆ ಮತ್ತಷ್ಟು ಹೆಚ್ಚಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ