newsfirstkannada.com

ಐದು ರಾಜ್ಯಗಳಿಗೆ ಮತ್ತೆ ಎಚ್ಚರಿಕೆಯ ಗಂಟೆ.. 45 ವರ್ಷದ ಬಳಿಕ ಆಗ್ರಾದಲ್ಲಿ ಪ್ರವಾಹ

Share :

19-07-2023

  ಗುಜರಾತ್‌ನ ರಾಜ್ಯದಲ್ಲಿ ಮಳೆರಾಯನ ಅಟಾಟೋಪ

  ತಾಜ್​ಮಹಲ್​ಗೆ ಜಲದಿಗ್ಭಂಧನ ವಿಧಿಸಿದ ಯಮುನೆ

  ಹಿಮಾಚಲ ಪ್ರದೇಶದಲ್ಲೂ ಹೆಚ್ಚಿದ ಭೂಕುಸಿತದ ಭೀತಿ

ಕರುನಾಡಲ್ಲಿ ಮುಂಗಾರು ಮುನಿಸಿಕೊಂಡಿದ್ರೆ ಉತ್ತರ ಭಾರತದಲ್ಲಿ ವರುಣ ಅಬ್ಬರಿಸ್ತಿದ್ದಾನೆ.  ರಣಭೀಕರ ಮಳೆಗೆ ಉತ್ತರ ಭಾರತದ ರಾಜ್ಯಗಳು ನಲುಗಿ ಹೋಗಿದೆ. ಭಾರೀ ಮಳೆಗೆ ಗುಜರಾತ್​​ನಲ್ಲಿ ಅವಾಂತರಗಳೇ ಸೃಷ್ಟಿಯಾಗಿದೆ. ರಸ್ತೆಗಳು ಕೆರೆಯಂತಾಗಿವೆ. ದೆಹಲಿಯಲ್ಲಿ ಯಮುನೆ ತಾಜ್​ಮಹಲ್​ಗೆ ಜಲ ದಿಗ್ಭಂದನ ಹಾಕಿದೆ.

ಗುಜರಾತ್‌ನ ಧೋರಾಜಿಯಲ್ಲಿ ಮಳೆಯ ಅಟಾಟೋಪ

ಗುಜರಾತ್ ರಾಜ್ಯದ ರಾಜಕೋಟ್, ಗಿರ್ ಸೋಮನಾಥ, ಜುನಾಗಢ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದೆ. ಸುಮಾರು 145 ಮಿಲಿ ಮೀಟರ್​ ಮಳೆಯಾಗಿದ್ದು, ದೋರಜಿ ಟೌನ್ ನಲ್ಲಿ 290 ಮಿಲಿ ಮೀಟರ್​ನಷ್ಟು ಮಳೆ ಸುರಿದಿದ್ರೆ. ಸೂತ್ರ ಪಾಡದಲ್ಲಿ 390 ಮಿಲಿ ಮೀಟರ್​ನಷ್ಟು ಮಳೆಯಾಗಿದೆ. ಕೋಡಿನಾರ್​ ಪ್ರದೇಶದಲ್ಲಿ 188 ಮಿಲಿ ಮೀಟರ್​ನಷ್ಟು ದಾಖಲಾಗಿದೆ.

ಗುಜರಾತ್‌ ರಾಜ್ಯದಲ್ಲಿ ಭಾರಿ ಮಳೆ ಅವಾಂತರಗಳನ್ನ ಸೃಷ್ಟಿ ಮಾಡುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ವಾಹನ ಸವಾರರ ಗೋಳು ಹೇಳಿ ತೀರದ್ದಾಗಿದೆ. ರಾಜಕೋಟ್​ನಾ ಧೋರಾಜಿ ಸಂಪೂರ್ಣ ಜಯಮಯವಾಗಿದೆ. ಮಳೆಯ ಅಟಾಟೋಪಕ್ಕೆ ಸುಮಾರು 2 ರಿಂದ 3 ಅಡಿಗಳಷ್ಟು ನೀರು ನಿಂತಿದ್ದು, ವಾಹಗಳು ಸಂಪೂರ್ಣ ಜಲಾವೃತವಾಗಿವೆ.

ಗುಜರಾತ್​ನ ಸೂರತ್‌ ನಗರದಲ್ಲಿರುವ ಸಂಬೇಲಧಾರ ಪ್ರದೇಶದಲ್ಲಿ ಮಳೆ ಅಬ್ಬರಕ್ಕೆ ಅಂಡರ್​ ಪಾಸ್​ ಸಂಪೂರ್ಣ ಜಲಾವೃತವಾಗಿ ವಾಹನ ಸವಾರರು ಪರದಾಡಿದ್ದಾರೆ. ಇನ್ನು ಇದೇ ಅಂಡರ್​ ಪಾಸ್​ನಲ್ಲಿ  ಬಸ್‌ವೊಂದು ಸಿಲುಕಿಕೊಂಡಿದ್ದು, ಎಮರ್ಜೆನ್ಸಿ ಎಕ್ಸಿಟ್​ ಮೂಲಕ ಪ್ರಯಾಣಿಕರನ್ನು ರಕ್ಷಿಸಲಾಗಿದೆ.

ಸೂರತ್ ನಗರದಲ್ಲಿ ಸುಮಾರು ಒಂದರಿಂದ ಒಂದೂವರೆ ಗಂಟೆ ಸುರಿದ ಮಳೆಗೆ ಹಲವು ರಸ್ತೆಗಳು ಮಿನಿ ಕೆರೆಗಳಂತಾಗಿವೆ. ಇನ್ನು ರಸ್ತೆಯಲ್ಲಿ ನಿಂತ ಮಳೆ ನೀರಿನಲ್ಲೇ ಮಕ್ಕಳು ಈಜು ಕೊಳದಲ್ಲಿ ಆಟವಾಡುವ ರೀತಿ ಆಟವಾಡಿದ ದೃಶ್ಯಗಳು ಕಂಡು ಬಂದಿವೆ.

ಉತ್ತರ ಭಾರತದಲ್ಲಿ ಉಗ್ರಸ್ವರೂಪ ಪ್ರದರ್ಶಿಸಿ ಅಬ್ಬರಿಸಿ ಬೊಬ್ಬಿರಿದ ಮಳೆರಾಯ ಜನರ ಬದುಕನ್ನ ತೊಯ್ದು ತೊಪ್ಪೆ ಮಾಡಿದ್ದ. ದೆಹಲಿ, ಉತ್ತರಾಖಂಡ್​, ಹಿಮಾಚಲದಲ್ಲಿ ರೌದ್ರನರ್ತನ ಮೆರೆದು ಸಾವಿರಾರು ಜನರನ್ನ ಬೀದಿಗೆ ತಂದು ನಿಲ್ಲಿಸಿದ್ದ. ಹಳೇ ದೆಹಲಿಯನ್ನ ಮುಳುಗಿಸಿ ಕಂಡು ಕೇಳರಿಯದ ಪ್ರವಾಹಕ್ಕೆ ಸಾಕ್ಷಿಯಾಗಿದ್ದ. ದಾಖಲೆಯ ಪ್ರವಾಹ ಸೃಷ್ಟಿಸಿ ಮೂಕ ಪ್ರಾಣಿಗಳ ಮಾರಣಹೋಮಕ್ಕೆ ಕಾರಣವಾಗಿದ್ದ. ದೆಹಲಿ ಬಳಿಕ ಉತ್ತರಪ್ರದೇಶದಲ್ಲೂ ಯಮುನೆ ಅಬ್ಬರ ಮುಂದುವರೆದಿದ್ದು ಪ್ರವಾಹದ ಮತ್ತೊಂದು ಕರಾಳ ಮುಖದ ಪ್ರದರ್ಶನವಾಗ್ತಿದೆ.

45 ವರ್ಷದ ಬಳಿಕ ಆಗ್ರಾದಲ್ಲಿ ಪ್ರವಾಹದ ಅಬ್ಬರ

ದೆಹಲಿ ಬಳಿಕ ಉತ್ತರಪ್ರದೇಶದ ಸರಹದ್ದಿನಲ್ಲಿ ಪ್ರವಾಹದ ಪಾಶ ಬೀಸಿರುವ ಯಮುನೆ ಎಲ್ಲೆ ಮೀರಿ ಹರಿಯುತ್ತಿದ್ದಾಳೆ. ಬರೋಬ್ಬರಿ 45 ವರ್ಷದ ಬಳಿಕ ಇದೇ ಮೊದಲ ಬಾರಿಗೆ ಇತಿಹಾಸ ಪ್ರಸಿದ್ಧ ತಾಜ್​ಮಹಲ್​ ಬಳಿ ಯುಮನೆಯ ಪ್ರವಾಹ ಲಗ್ಗೆ ಇಟ್ಟಿದೆ.. ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾದ ತಾಜ್​ಮಹಲ್​ಗೆ ಯಮುನೆ ಜಲದಿಗ್ಭಂಧನ ವಿಧಿಸಿದ್ದಾಳೆ.. ಮುನ್ನೆಚ್ಚರಿಕಾ ಕ್ರಮವಾಗಿ ತಾಜ್​ಮಹಲ್ ಆಡಳಿತ ಮಂಡಳಿ ಪ್ರವಾಸಿಗರ ಭೇಟಿಗೆ ಬ್ರೇಕ್ ಹಾಕಿದೆ.

ಹೆದ್ದಾರಿಯಲ್ಲಿ ಭೂಕುಸಿತ.. ಕಣಿವೆಗೆ ಉರುಳಿದ ವಾಹನ

ಉತ್ತರಾಖಂಡ್​ನ ಗಂಗೋತ್ರಿಯ ಹೆದ್ದಾರಿಯಲ್ಲಿ ಭೀಕರ ಭೂಕುಸಿತ ಸಂಭವಿಸಿದೆ.. ಭೂಕುಸಿತ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಮಿನಿ ಟ್ರಕ್ ಒಂದು ಕಣಿವೆಗೆ ಉರುಳಿದೆ.. ಭೂಕುಸಿತದ ಬಗ್ಗೆ ಸುಳಿವು ಸಿಕ್ತಿದ್ದಂತೆ ಚಾಲಕ ವಾಹನದಿಂದ ಇಳಿದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಹಿಮಾಚಲ ಪ್ರದೇಶದ ನನ್​ಖೇರಿ ಬಳಿಯ ಶರಣ್​ ಧನಕ್​ ಎಂಬಲ್ಲಿ ಭಾರೀ ಭೂಕುಸಿತ ಸಂಭವಿಸಿ ರಸ್ತೆ ಸಂಪರ್ಕ ಕಡಿತಗೊಂಡಿದೆ.. ನೀರತ್​, ನನ್​ಖೇರಿ ಮತ್ತು ಪಂಡಾಧರ್​ಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಭೂಕುಸಿತದಿಂದ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅಷ್ಟೇ ಅಲ್ಲದೆ ಐದು ರಾಜ್ಯಗಳಿಗೆ ಭಾರತೀಯ ಹವಾಮಾನ ಇಲಾಖೆ ಮತ್ತೆ ಎಚ್ಚರಿಕೆ ಗಂಟೆ ಭಾರಿಸಿದೆ.

ಗುಜರಾತ್​ನಲ್ಲಿ ಮೇಘರಾಜ ಮೂರನೇ ಸುತ್ತಿನ ಮಳೆ ಸುರಿಸಲು ಸಿದ್ಧವಾಗಿ ನಿಂತಂತೆ ಕಾಣ್ತಿದೆ.. ಮುಂದಿನ ಎರಡು ದಿನಗಳ ಕಾಲ ಗುಜರಾತ್ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇವತ್ತು ಮೇಘರಾಜ ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್‌ ಭಾಗಗಳ ಮೇಲೆ ತನ್ನ ನರ್ತನವಾಡಲಿದ್ದಾನೆ. ಸೌರಾಷ್ಟ್ರದ ಅಮ್ರೇಲಿ, ಭಾವನಗರ ಮತ್ತು ವಲ್ಸಾದ್‌ನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇನ್ನು ಪೋರಬಂದರ್, ರಾಜ್‌ಕೋಟ್, ಬೊಟಾಡ್, ಆನಂದ್, ವಡೋದರಾ, ಭರೂಚ್, ಸೂರತ್, ತಾಪಿ ಮತ್ತು ದಂಗ್‌ನಲ್ಲಿ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.

ಒಟ್ನಲ್ಲಿ ಉತ್ತರ ಭಾರತವನ್ನ ಬೆಂಬಿಡದೇ ಕಾಡ್ತಿರೋ ವರುಣಾ ಸಂಕಷ್ಟಗಳ ಸರಮಾಲೆಯಲ್ಲಿ ಜನರನ್ನ ಸಿಲುಕಿಸುತ್ತಿದ್ದಾನೆ.. ಇನ್ನೂ 5 ದಿನ ಉತ್ತರ ಭಾರತದಲ್ಲಿ ವರುಣಾ ಅಬ್ಬರಿಸಲಿದ್ದಾನೆ ಅನ್ನೋ ಸುದ್ದಿ ಜನರನ್ನ ದಿಗ್ಬ್ರಮೆಗೊಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಐದು ರಾಜ್ಯಗಳಿಗೆ ಮತ್ತೆ ಎಚ್ಚರಿಕೆಯ ಗಂಟೆ.. 45 ವರ್ಷದ ಬಳಿಕ ಆಗ್ರಾದಲ್ಲಿ ಪ್ರವಾಹ

https://newsfirstlive.com/wp-content/uploads/2023/07/DELHI_TODAY_RAIN_1.jpg

Load More