newsfirstkannada.com

ಗ್ರಾಮ ಪಂಚಾಯತಿಯಲ್ಲಿ ಎಣ್ಣೆ ಪಾರ್ಟಿ.. ಪವಿತ್ರ ಕಚೇರಿಯಲ್ಲಿ ಕುಡಿದು ನಶೆಯಲ್ಲಿ ತೇಲಾಡಿದ ಪುಂಡರು

Share :

21-11-2023

    ಪಂಚಾಯತಿಯಲ್ಲಿ ರಾಜಾರೋಷವಾಗಿ ಎಣ್ಣೆ ಪಾರ್ಟಿ

    ಹಲವು ಪ್ರಶಸ್ತಿಗಳನ್ನ ಪಡೆದ ಹೆಮ್ಮೆಯ ಪಂಚಾಯತಿ

    ಮದ್ಯಪಾನ, ಧೂಮಪಾನ ಮಾಡಿದ ಪುಂಡರಿಂದ ಗಲಾಟೆ

ಇದು ಗ್ರಾಮ ಪಂಚಾಯತಿ.. ಗ್ರಾಮದ ಜನರ ಅಹವಾಲು ಸ್ವೀಕರಿಸುವ, ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕಾದ ಪವಿತ್ರ ಕಚೇರಿ. ಆದ್ರೆ, ಯಾವುದೋ ಮತ್ತಿನಲ್ಲಿ ಗೆದ್ದು ಬಂದ ಮರಿ ಪುಢಾರಿಗಳು ಗ್ರಾಮ ಪಂಚಾಯತಿಯನ್ನೇ ಬಾರ್​​ ಆಗಿಸಿಕೊಂಡಿದ್ದಾರೆ. ಪಂಚಾಯತಿಯಲ್ಲಿ ರಾಜಾರೋಷವಾಗಿ ಎಣ್ಣೆ ಪಾರ್ಟಿ ಮಾಡಿ ಉದ್ದಟತನ‌ ಮೆರೆದಿದ್ದಾರೆ.

ಬೈಕ್​ ಮೇಲಿಂದ ಇಳಿದು ಕೈಯಲ್ಲಿ ಬಾಟಲಿ ಹಿಡಿದು ಸ್ಟೈಲ್​​​ ಆಗಿ ಹೋಗ್ತಿರೋದು ಬಾರ್​​ನೊಳಗೆ ಅಲ್ಲ. ಯಾವುದೋ ದಾಬಾಕ್ಕೂ ಅಲ್ಲ. ಇದೇನು ಪಾರ್ಟಿ ಹಾಲ್​​​ನೂ ಅಲ್ಲ. ಇದು ಗ್ರಾಮದ ಪ್ರಜಾಪ್ರಭುತ್ವದ ದೇಗುಲ. ಅರ್ಥಾತ್​​ ಪಂಚಾಯತಿ.

ಹೀಗೆ ರಾಜಾರೋಷವಾಗಿ ಎಣ್ಣೆ ಬಾಟಲಿ ಹಿಡಿದುಕೊಂಡು ಹೋಗ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.. ಅಂದ್ಹಾಗೆ, ಇದು ಶಿರಗುಪ್ಪಿ ಗ್ರಾಮ ಪಂಚಾಯತಿ.. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಾದರಿ ಎಂಬ ಹಣೆಪಟ್ಟಿ ಹೊತ್ತ ಶಿರಗುಪ್ಪಿ ಗ್ರಾಮ ಪಂಚಾಯತಿ.. ಹಲವಾರು ಪ್ರಶಸ್ತಿಗಳನ್ನ ಪಡೆದ ಹೆಮ್ಮೆಯ ಗ್ರಾಮ ಪಂಚಾಯತಿ, ಈಗ ಅಡ್ಡಕಸುಬಿನ ನೆಲೆಯಾಗಿದೆ.

ಕಳೆದ ಭಾನುವಾರ ನವೆಂಬರ್​​​ 12ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮಧ್ಯಾಹ್ನ 1 ಗಂಟೆಯಿಂದ 3 ಗಂಟೆವರೆಗೆ ಪಂಚಾಯಿತಿಯಲ್ಲೇ ಎಣ್ಣೆ ಪಾರ್ಟಿ ಮಾಡಲಾಗಿದೆ. ಪಂಚಾಯತಿ ಸದಸ್ಯರಾದ ಪಂಡಿತ ಶಿವಾಜಿ ವಡ್ಡರ, ರಾಮು ಕಾಂಬಳೆ ಮತ್ತು ಗ್ರಾ.ಪ‌ಂ ಸದಸ್ಯೆ ಪತಿ ಸಚಿನ ಜಾನು ಕಾಂಬಳೆ, ಗ್ರಾ.ಪಂ ಸದಸ್ಯೆಯ ಮಗ ಶಿವಪ್ಪ ಕಾಂಬಳೆ ಹಾಗೂ ಸಿದ್ದು ಕಟ್ಟಿ ಎಂಬ ನಾಲ್ವರು, ಪಂಚಾಯಿತಿ ಘನತೆಗೆ ಧಕ್ಕೆ ತಂದ ಮಹಾಶಯರು.

ಈ ಎಣ್ಣೆ ಪಾರ್ಟಿ ನಡೆದ ಒಂದು ವಾರ ಕಳೆದರೂ ಈವರೆಗೂ ಯಾವುದೇ ಕಾನೂನು ಕ್ರಮ ಆಗಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದರೂ ಕ್ಯಾರೆ ಅಂದಿಲ್ಲ. ಅಷ್ಟೇ ಅಲ್ಲದೆ, ಕಾಗವಾಡ ತಹಶೀಲ್ದಾರ್​ ರಾಜೇಶ ಬುರ್ಲಿ ಅವರಿಗೆ ಶಿರಗುಪ್ಪಿ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಮದ್ಯಪಾನ, ಧೂಮಪಾನ ಮಾಡಿ ಗಲಾಟೆ ಮಾಡಿದ್ದು, ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಶಿರಗುಪ್ಪಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ರಾಜಗೌಡಾ ಪಾಟೀಲ ದೂರಿದ್ದಾರೆ.

ಒಟ್ಟಾರೆ, ಗ್ರಾಮ ಪಂಚಾಯತಿಯಲ್ಲಿ ಒಂದು ವಾರದ ಹಿಂದೆ ಎಣ್ಣೆ ಪಾರ್ಟಿ ನಡೆದ ವಿಚಾರ ಉನ್ನತ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಕ್ರಮ ಜರುಗಿಸಿಲ್ಲ. ಮದ್ಯ ಮುಕ್ತ ಹಳ್ಳಿಗಳ ಸಂಕಲ್ಪ ಹೊತ್ತು ಹೋರಾಟ ನಡೆಯುತ್ತಿರುವ ಹೊತ್ತಲ್ಲಿ, ಗ್ರಾಮಕ್ಕೆ ಮಾದರಿ ಆಗಬೇಕಿದ್ದ ಮೆಂಬರ್​​ಗಳು, ಪಂಚಾಯಿತಿಯನ್ನೇ ಬಾರ್​ ಆಗಿಸಿಕೊಂಡಿದ್ದು ದುರಂತವೇ ಸರಿ.

ವಿ.ಸೂ: ಮದ್ಯಪಾನ ಆರೋಗ್ಯಕ್ಕೆ ಹಾನಿಕರ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗ್ರಾಮ ಪಂಚಾಯತಿಯಲ್ಲಿ ಎಣ್ಣೆ ಪಾರ್ಟಿ.. ಪವಿತ್ರ ಕಚೇರಿಯಲ್ಲಿ ಕುಡಿದು ನಶೆಯಲ್ಲಿ ತೇಲಾಡಿದ ಪುಂಡರು

https://newsfirstlive.com/wp-content/uploads/2023/11/Drinks.jpg

Load More