newsfirstkannada.com

Video: ಫೋಟೋಗ್ರಾಫರ್​ ಚಪ್ಪಲಿಯನ್ನ ಕೈಯಲ್ಲಿ ಹಿಡಿದ ಆಲಿಯಾ ಭಟ್​! ಇದು ಮಾನವೀಯತೆ ಅಲ್ಲದೆ ಮತ್ತೇನು?

Share :

15-07-2023

  ಕ್ಯೂಟ್​ ನಟಿ ಆಲಿಯಾ ಭಟ್​ ವರ್ತನೆಗೆ ಫಿದಾ ಆದ ನೆಟ್ಟಿಗರು

  ಕಾಣೆಯಾಗಿದ್ದ ಫೋಟೋಗ್ರಾಫರ್​ ಚಪ್ಪಲಿ ಹುಡುಕಿಕೊಟ್ಟ ಆಲಿಯಾ

  ಆಲಿಯಾ ಭಟ್​ ಮಾನವೀಯತೆಗೆ ಸಲಾಂ ಹೊಡೆದ ನೆಟ್ಟಿಗರು; ವಿಡಿಯೋ ಇಲ್ಲಿದೆ

ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕುವ ಜನರು ತೀರಾ ಕಡಿಮೆ. ಅದರಲ್ಲೂ ಒಂದು ಬಾರಿ ಸೆಲೆಬ್ರೆಟಿ ಪಟ್ಟ ಸಿಕ್ಕರಂತೂ ಮತ್ತೆ ಹಿಂತಿರುಗಿ ನೋಡುವ ಚಾನ್ಸೇ ಇಲ್ಲ. ದುಬಾರಿ ಕಾರು, ದುಬಾರಿ ವಾಚ್​ ಹೀಗೆ ಎಲ್ಲವೂ ದುಬಾರಿ ಲೈಫ್​ಸ್ಟೈಲ್​ನಲ್ಲೇ ಬದುಕುವವರೇ ಹೆಚ್ಚು. ಆದರೆ ಮಾನವಿಯತೆ ಅಥವಾ ವರ್ತನೆ ಎಂಬುದು ಇದೆಯಲ್ಲ. ಅದು ಕೆಲವೊಮ್ಮೆ ಎಂಥವರನ್ನೂ ಮತ್ತೆ ಮತ್ತೆ ಹೀರೋ ಅಥವಾ ಹೀರೋಯಿನ್​ ಆಗಿ ಫ್ರೂ ಮಾಡುತ್ತದೆ. ಅದಕ್ಕೆ ಸಾಕ್ಷಿ ಎಂಬಂತೆ ಬಾಲಿವುಡ್​ ಖ್ಯಾತ ನಟಿ ಆಲಿಯಾ ಭಟ್​ ವಿಡಿಯೋವೊಂದು ವೈರಲ್​ ಆಗಿದೆ.

ಪಾದರಕ್ಷೆಯನ್ನು ಕಳೆದುಕೊಂಡಿದ್ದ ಫೋಟೋಗ್ರಾಫರ್​ಗೆ ಆಲಿಯಾ ಭಟ್​ ಚಪ್ಪಲಿಯನ್ನು ಹುಡುಕಿಕೊಟ್ಟಿದ್ದಾರೆ. ಮಾತ್ರವಲ್ಲ, ತನ್ನ ಕೈಯಾರೆ ಚಪ್ಪಲಿಯನ್ನು ತೆಗೆದುಕೊಂಡು ಆತನಿಗೆ ನೀಡಿದ್ದಾರೆ. ಅಂದಹಾಗೆಯೇ ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಲ್ಲಿ ಇದ್ದವರು ಆಲಿಯಾ ಮಾನವೀಯ ವರ್ತನೆಗೆ ಫಿದಾ ಆಗಿದ್ದಾರೆ.

View this post on Instagram

A post shared by Manav Manglani (@manav.manglani)

ಆಲಿಯಾ ಭಟ್​ ತನ್ನ ತಾಯಿ ಸೋನಿ ರಜ್ಡಾನ್​ ಮತ್ತು ಸಹೋದರಿ ಶಾಹೀನ್​ ಭಟ್​​ ಜೊತೆಗೆ ಮುಂಬೈ ಫ್ಯಾನ್ಸಿ ರೆಸ್ಟೋರೆಂಟ್​ಗೆ ಭೇಟಿ ನೀಡಿದ್ದರು. ಆದರೆ ಈ ವೇಳೆ ಆಲಿಯಾ ಭಟ್​ ಬರುವುದನ್ನು ಕಾದುಕೊಂಡಿದ್ದ ಫೋಟೋಗ್ರಾಫರ್​ಗಳಲ್ಲಿ ಒಬ್ಬ ನಟಿ ಬಂದ ನಂತರ ನೂಕುನುಗ್ಗಲಿನಿಂದ ತನ್ನ ಚಪ್ಪಲಿ ಕಳೆದುಕೊಳ್ಳುತ್ತಾನೆ. ಇದನ್ನು ಗಮನಿಸಿದ ಆಲಿಯಾ ತನ್ನ ಕೈಯಾರೆ ಚಪ್ಪಲಿ ಎತ್ತಿಕೊಂಡು ಆತನಿಗೆ ಕೊಡಲು ಮುಂದಾಗಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

Video: ಫೋಟೋಗ್ರಾಫರ್​ ಚಪ್ಪಲಿಯನ್ನ ಕೈಯಲ್ಲಿ ಹಿಡಿದ ಆಲಿಯಾ ಭಟ್​! ಇದು ಮಾನವೀಯತೆ ಅಲ್ಲದೆ ಮತ್ತೇನು?

https://newsfirstlive.com/wp-content/uploads/2023/07/Alia-Bhat.jpg

Load More