newsfirstkannada.com

ಕಾವೇರಿ ನದಿ ನೀರು ನಿರ್ವಹಣ ಪ್ರಾಧಿಕಾರದಿಂದ ಕರ್ನಾಟಕಕ್ಕೆ ಮತ್ತೆ ಶಾಕ್; ಇಂದು ತುರ್ತು ಸರ್ವಪಕ್ಷ ಸಭೆ

Share :

13-09-2023

    ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಸೂಚನೆ

    ಮೈಸೂರಿನಲ್ಲಿ ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ ರೈತರು

    ಮುಂದಿನ ಎರಡ್ಮೂರು ದಿನದಲ್ಲಿ ಮತ್ತೆ CWRCಯಿಂದ ಸಭೆ

ಬೆಂಗಳೂರು: ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಕಾವೇರಿ ನದಿ ನೀರು ಪ್ರಾಧಿಕಾರ ಸೂಚಿಸಿರುವ ಹಿನ್ನೆಲೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ 12.30ಕ್ಕೆ ತುರ್ತು ಸಭೆ ಕರೆಯಲಾಗಿದೆ.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯ ಸಚಿವರು, ಎಲ್ಲಾ ಪಕ್ಷಗಳ ಮಾಜಿ ಸಿಎಂಗಳು, ರಾಜ್ಯ ಸಚಿವ ಸಂಪುಟದ ಹಿರಿಯ ಸಚಿವರು, ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರುಗಳು ತುರ್ತು ಸಭೆಯಲ್ಲಿ ಭಾವಹಿಸಲಿದ್ದಾರೆ. ಇದೇ ಸಭೆಯಲ್ಲಿ ಕರ್ನಾಟಕ ತನ್ನ ಮುಂದಿನ ನಡೆ ನಿರ್ಧರಿಸುವ ಸಾಧ್ಯತೆ ಇದೆ.

ರಾತ್ರಿ ರಸ್ತೆ ತಡೆದು ಪ್ರತಿಭಟನೆ

ಮತ್ತೆ ತಮಿಳುನಾಡಿಗೆ ನೀರು ಹರಿಸಲು ಆದೇಶ ಬಂದ ಹಿನ್ನಲೆ, ಬನ್ನೂರಲ್ಲಿ ರಾತ್ರಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗಿದೆ. ಆದೇಶ ಖಂಡಿಸಿ‌ ಮೈಸೂರು ಹಾಗೂ ಟಿ.ನರಸೀಪುರ ತಾಲೂಕಿನ ಬನ್ನೂರಿನಲ್ಲೂ ರಾಜ್ಯ ರೈತ ಸಂಘದಿಂದ ಮೈಸೂರು ಮಳವಳ್ಳಿ ಮುಖ್ಯ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗಿದೆ. ಮೈಸೂರು ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ರಾಜ್ಯ ಸರ್ಕಾರ ನೀರು ಹರಿಸದಂತೆ ಒತ್ತಾಯ ಮಾಡಲಾಗಿದೆ.

ಎರಡ್ಮೂರು ದಿನದಲ್ಲಿ ಮತ್ತೊಂದು ಸಭೆ

ಮತ್ತೊಂದು ಕಡೆ ಸೆಪ್ಟೆಂಬರ್ 21 ನೇ ತಾರೀಖಿನಂದು ಸುಪ್ರೀಂಕೋರ್ಟ್​ನಲ್ಲಿ ಕಾವೇರಿ ಅರ್ಜಿ ವಿಚಾರಣೆ ನಡೆಯಲಿದೆ. ಮುಂದಿನ ಎರಡರಿಂದ ಮೂರು ದಿನಗಳಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆ ನಡೆಯೋ ಸಾದ್ಯತೆ ಇದ್ದು, ಅಲ್ಲಿ ಕರ್ನಾಟಕ ಮತ್ತೆ ತನ್ನ ವಾದ ಮಂಡನೆ ಮಾಡಬಹುದಾಗಿದೆ. ಮುಂದೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಯೇ ಈಗ ಕರುನಾಡಿಗೆ ಆಶಾಭಾವನೆಯಾಗದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕಾವೇರಿ ನದಿ ನೀರು ನಿರ್ವಹಣ ಪ್ರಾಧಿಕಾರದಿಂದ ಕರ್ನಾಟಕಕ್ಕೆ ಮತ್ತೆ ಶಾಕ್; ಇಂದು ತುರ್ತು ಸರ್ವಪಕ್ಷ ಸಭೆ

https://newsfirstlive.com/wp-content/uploads/2023/09/SIDDU-3-1.jpg

Load More