newsfirstkannada.com

ಬಿ.ವೈ ವಿಜಯೇಂದ್ರ ಪದಗ್ರಹಣಕ್ಕೆ ಸಕಲ ಸಿದ್ಧತೆ; ಬಿಜೆಪಿ ಕಚೇರಿಯಲ್ಲಿ ಅಧಿಕಾರ ಹಸ್ತಾಂತರ ನಡೆಯೋದು ಹೇಗೆ?

Share :

15-11-2023

  ಪೂರ್ಣಾಹುತಿ‌ ಹೋಮದಲ್ಲಿ ಭಾಗಿಯಾದ ಬಳಿಕ ವಿಜಯೇಂದ್ರ ಪದಗ್ರಹಣ

  108 ಮಹಿಳೆಯರಿಂದ ಬಿ.ವೈ ವಿಜಯೇಂದ್ರ ಅವರಿಗೆ ಪೂರ್ಣಕುಂಬ ಸ್ವಾಗತ

  ನಳಿನ್ ಕುಮಾರ್ ಕಟೀಲ್ ಇಂದ ನೂತನ ರಾಜ್ಯಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರ

ಬೆಂಗಳೂರು: ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಪದಗ್ರಹಣಕ್ಕೆ ಕ್ಷಣಗಣನೆ ಶುರುವಾಗಿದೆ. ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬೆಳಗ್ಗೆ 10.30ಕ್ಕೆ ವಿಜಯೇಂದ್ರ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಆರಂಭವಾಗಲಿದೆ.

ಇಂದು ಬೆಳಗ್ಗೆ 9.15ಕ್ಕೆ ಬಿಜೆಪಿ ಜಗನ್ನಾತ ಭವನಕ್ಕೆ ಬಿ.ವೈ ವಿಜಯೇಂದ್ರ ಅವರು ಆಗಮಿಸಲಿದ್ದಾರೆ. 10 ಗಂಟೆಗೆ ಪೂರ್ಣಾಹುತಿ‌ ಹೋಮದಲ್ಲಿ ವಿಜಯೇಂದ್ರ ಹಾಗೂ‌ ನಳಿನ್ ಕುಮಾರ್ ಕಟೀಲ್‌ ಅವರು ಭಾಗಿಯಾಗುತ್ತಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಬಿ.ವೈ ವಿಜಯೇಂದ್ರ ಅವರನ್ನ ಸ್ವಾಗತಿಸಲು ಭರ್ಜರಿ ತಯಾರಿ ನಡೆಸಲಾಗುತ್ತಿದೆ. ವಿಜಯೇಂದ್ರ ಅವರು ಕಚೇರಿಗೆ ಆಗಮಿಸುತ್ತದ್ದಂತೆ 108 ಮಹಿಳೆಯರು ಪೂರ್ಣಕುಂಬವನ್ನು ಹೊತ್ತು ಬಿಜೆಪಿ ನೂತನ ಅಧ್ಯಕ್ಷರನ್ನು ಸ್ವಾಗತಿಸಲಿದ್ದಾರೆ.

ವಿಜಯೇಂದ್ರ ಅವರ ಪದಗ್ರಹಣದ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಯನ್ನ ಕೇಸರಿ ಬಾವುಟ, ಹಸಿರು ತೋರಣದಿಂದ ಸಿಂಗಾರ ಮಾಡಲಾಗಿದೆ. ಕಚೇರಿ ಮುಖ್ಯದ್ವಾರಕ್ಕೆ ಚಪ್ಪರ ಹಾಕಿ ಮಾವಿನೆಲೆಗಳ ತೋರಣಗಳಿಂದ ಅಲಂಕಾರ ಮಾಡಲಾಗಿದೆ.

ತಡರಾತ್ರಿಯೇ ಹೋಮ- ಹವನ ಮಾಡಲಾಗಿದೆ. ಬೆಳಗಿನ ಜಾವ ಶಾಸ್ತ್ರೋಕ್ತವಾಗಿ ಪೂರ್ಣಾಹುತಿ ನಡೆದ ಬಳಿಕ 10.30 ಕ್ಕೆ ಬಿ.ವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ನಳಿನ್ ಕುಮಾರ್ ಕಟೀಲ್ ಅವರು ಇಂದು ವಿಜಯೇಂದ್ರ ಅವರಿಗೆ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ. 11:30ಕ್ಕೆ ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸುದ್ದಿಗೋಷ್ಚಿ ನಡೆಸಲಿದ್ದಾರೆ. ಸುದ್ದಿಗೋಷ್ಠಿ ನಂತರ ಶಾಸಕರು,‌ ಹಿರಿಯ ನಾಯಕರ ಜೊತೆ‌ ಕೆಲ ಕಾಲ ವಿಜಯೇಂದ್ರ ಮಾತುಕತೆ ನಡೆಸಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿ.ವೈ ವಿಜಯೇಂದ್ರ ಪದಗ್ರಹಣಕ್ಕೆ ಸಕಲ ಸಿದ್ಧತೆ; ಬಿಜೆಪಿ ಕಚೇರಿಯಲ್ಲಿ ಅಧಿಕಾರ ಹಸ್ತಾಂತರ ನಡೆಯೋದು ಹೇಗೆ?

https://newsfirstlive.com/wp-content/uploads/2023/11/By-Vijayendra-5.jpg

Load More