newsfirstkannada.com

ಅಬ್ಬಾ.. ಪಾಕಿಸ್ತಾನದಲ್ಲಿ ರೆಕಾರ್ಡ್‌ ಬ್ರೇಕ್‌; ಸಾರ್ವಕಾಲಿಕ ದಾಖಲೆ ಕಂಡ ಪೆಟ್ರೋಲ್‌, ಡೀಸೆಲ್ ರೇಟ್ ಎಷ್ಟು?

Share :

01-09-2023

    ಬೆಲೆ ಏರಿಕೆಯಲ್ಲಿ ಒದ್ದಾಡುತ್ತಿರುವ ಪಾಕ್‌ ಜನರಿಗೆ ಮತ್ತೆ ತ್ರಿಬಲ್ ಶಾಕ್‌!

    ದರ ಏರಿಕೆಯನ್ನು ಸಮರ್ಥಿಸಿಕೊಂಡ ಉಸ್ತುವಾರಿ ಪ್ರಧಾನಮಂತ್ರಿ

    ಕರೆಂಟ್ ಕಟ್‌ ಮಾಡಿದ್ದಕ್ಕೆ ರೊಚ್ಚಿಗೆದ್ದಿರುವ ಪಾಕಿಸ್ತಾನದ ಪ್ರಜೆಗಳು

ಇಸ್ಲಾಮಾಬಾದ್‌: ಆರ್ಥಿಕ ಸಂಕಷ್ಟದಲ್ಲಿ ಪರದಾಡುತ್ತಿರುವ ಪಾಕ್ ಜನತೆಗೆ ಇವತ್ತು ಮತ್ತೊಂದು ಶಾಕಿಂಗ್ ನ್ಯೂಸ್ ಬಂದಿದೆ. ಪಾಕಿಸ್ತಾನದಲ್ಲಿ ಪೆಟ್ರೋಲ್, ಡೀಸೆಲ್ ರೇಟ್ ಗಗನಮುಖಿಯಾಗಿದ್ದು ಮತ್ತೆ ಸಾರ್ವಕಾಲಿಕ ದಾಖಲೆ ಬರೆದಿದೆ. ಪೆಟ್ರೋಲ್ ರೇಟ್ ನೋಡಿದ ಪಾಕಿಸ್ತಾನದ ಮಧ್ಯಮ ವರ್ಗ ನಿಜಕ್ಕೂ ಬೆಚ್ಚಿ ಬಿದ್ದಿದೆ. ಮೊದಲೇ ದಿನಸಿ ಪದಾರ್ಥ, ಮೂಲಭೂತ ಸೌಕರ್ಯಗಳಿಗೆ ಪಾಕ್ ಜನತೆ ಹೋರಾಡುತ್ತಿದ್ದಾರೆ. ದಿನೇ ದಿನೇ ಬೆಲೆ ಏರಿಕೆಯ ಬಿಸಿ ತಟ್ಟುತ್ತಿರುವಾಗಲೇ ಪೆಟ್ರೋಲ್, ಡೀಸೆಲ್ ರೇಟ್ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ.

ಪಾಕಿಸ್ತಾನದಲ್ಲಿ ಪೆಟ್ರೋಲ್‌, ಡೀಸೆಲ್ ದರ ಫಸ್ಟ್‌ ಟೈಮ್‌ 300 ರೂಪಾಯಿಯ ಗಡಿಯನ್ನು ದಾಟಿದೆ. ಇವತ್ತು ಲೀಟರ್ ಪೆಟ್ರೋಲ್ ದರ 14 ರೂ. 91 ಪೈಸೆ ಮತ್ತು ಡೀಸೆಲ್ ದರ 18 ರೂ. 44 ಪೈಸೆ ಹೆಚ್ಚಾಗಿದೆ. ಈ ದರ ಏರಿಕೆಯ ಹಿನ್ನೆಲೆ ಪೆಟ್ರೋಲ್ ರೇಟ್ ಒಂದು ಲೀಟರ್‌ಗೆ 305.36 ರೂಪಾಯಿ ಆಗಿದೆ. ಡೀಸೆಲ್ ರೇಟ್ 311.84 ಪೈಸೆ ತಲುಪಿದೆ. ಪಾಕಿಸ್ತಾನದ ಇತಿಹಾಸದಲ್ಲೇ ಇಷ್ಟು ರೇಟ್ ಹೆಚ್ಚಾಗಿರೋದು ಇದೇ ಮೊದಲು.

ಪಾಕಿಸ್ತಾನದಲ್ಲಿ ಸದ್ಯ ಉಸ್ತುವಾರಿ ಸರ್ಕಾರ ಅಸ್ತಿತ್ವದಲ್ಲಿದೆ. ಉಸ್ತುವಾರಿ ಪ್ರಧಾನಮಂತ್ರಿ ಅನ್ವಾರುಲ್ ಹಕ್ ಕಾಕರ್ ಅವರು ಈ ಬೆಲೆ ಏರಿಕೆಯ ನಿರ್ಧಾರ ಕೈಗೊಂಡಿದ್ದಾರೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ದರ ಏರಿಕೆಯಾಗಿದೆ. ಹೀಗಾಗಿ ದರ ಏರಿಕೆ ಅನಿವಾರ್ಯವಾಗಿದೆ ಎಂದು ಸರ್ಕಾರ ಹೇಳಿದೆ. ಮೊದಲೇ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದೆ. ಇತ್ತೀಚೆಗೆ ಪಾಕಿಸ್ತಾನದ ಹಲವೆಡೆ ವಿದ್ಯುತ್ ಪೂರೈಕೆಯೂ ಅಸ್ತವ್ಯಸ್ತವಾಗಿದ್ದಕ್ಕೆ ಬೃಹತ್ ಪ್ರತಿಭಟನೆಗಳು ನಡೆದಿತ್ತು. ಲಾಹೋರ್, ಕರಾಚಿಯಲ್ಲಿ ವಿದ್ಯುತ್ ಪೂರೈಸುವ ಸಂಸ್ಥೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಪಾಕಿಸ್ತಾನದಲ್ಲಿ ಪ್ರತಿಭಟನೆಯ ಜ್ವಾಲೆ ತಣ್ಣಗಾಗುವ ಮುಂಚೆಯೇ ಉಸ್ತುವಾರಿ ಸರ್ಕಾರ ಪೆಟ್ರೋಲ್ ದರ ಏರಿಕೆಯ ನಿರ್ಧಾರಕ್ಕೆ ಕೈ ಹಾಕಿದೆ. ಪಾಕಿಸ್ತಾನದಲ್ಲಿ ಚುನಾವಣೆ ಸಮೀಪಿಸುತ್ತಿರುವಾಗ ಪೆಟ್ರೋಲ್, ಡೀಸೆಲ್ ದರ ಏರಿಕೆ ವಿಚಾರ ಮತ್ತಷ್ಟು ಪ್ರಮುಖ ಪಾತ್ರವಹಿಸಲಿದೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಅಬ್ಬಾ.. ಪಾಕಿಸ್ತಾನದಲ್ಲಿ ರೆಕಾರ್ಡ್‌ ಬ್ರೇಕ್‌; ಸಾರ್ವಕಾಲಿಕ ದಾಖಲೆ ಕಂಡ ಪೆಟ್ರೋಲ್‌, ಡೀಸೆಲ್ ರೇಟ್ ಎಷ್ಟು?

https://newsfirstlive.com/wp-content/uploads/2023/09/Pakistan-Petrol.jpg

Load More