newsfirstkannada.com

BREAKING: ಕನ್ನಡದ ಸ್ವಾಮೀಜಿ ಖ್ಯಾತಿಯ ಅಲ್ಲಮಪ್ರಭು ಶ್ರೀಗಳು ಇನ್ನಿಲ್ಲ

Share :

12-11-2023

    ಗಡಿ ಜಿಲ್ಲೆಯಲ್ಲಿ ಕನ್ನಡದ ಸ್ವಾಮೀಜಿ ಎಂದೇ ಪ್ರಸಿದ್ಧರಾಗಿದ್ದ ಶ್ರೀಗಳು

    ಅಪಾರ ಭಕ್ತರು ಹಾಗೂ ಅನುಯಾಯಿಗಳನ್ನು ಅಗಲಿದ ಶ್ರೀಗಳು

    ದಶಕಗಳ ಕಾಲ ಕನ್ನಡದ ಕಾರ್ಯಕ್ರಮಗಳನ್ನು ಮಾಡಿದ್ದ ಸ್ವಾಮೀಜಿ

ಚಿಕ್ಕೋಡಿ: ಗಡಿ ಜಿಲ್ಲೆಯಲ್ಲಿ ಕನ್ನಡದ ಸ್ವಾಮೀಜಿ ಎಂದೇ ಪ್ರಸಿದ್ಧರಾಗಿದ್ದ ಅಲ್ಲಮಪ್ರಭು ಶ್ರೀಗಳು ಲಿಂಗೈಕ್ಯರಾಗಿದ್ದಾರೆ. ಸ್ವಾಮೀಜಿ ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಇಂದು ಬೆಳಗ್ಗೆ ಅಲ್ಲಮಪ್ರಭು ಶ್ರೀಗಳು ಲಿಂಗೈಕ್ಯರಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದಲ್ಲಿ ಕನ್ನಡ ಮಠದ ಸ್ವಾಮೀಜಿ ಅಪಾರ ಭಕ್ತರು ಹಾಗೂ ಅನುಯಾಯಿಗಳನ್ನು ಹೊಂದಿದ್ದರು. ಶ್ರೀ ಅಲ್ಲಮಪ್ರಭು ಸ್ವಾಮೀಜಿಗಳು ಹಲವು ದಶಕಗಳ ಕಾಲ ಕನ್ನಡದ ಕಾರ್ಯಕ್ರಮಗಳನ್ನು ಮಾಡಿ ಗಮನ ಸೆಳೆದಿದ್ದರು.

ಕನ್ನಡ ಮಠದ ಸ್ವಾಮೀಜಿ ಲಿಂಗೈಕ್ಯರಾಗಿದ್ದು ಅಪಾರ ಭಕ್ತರು ಮಠದತ್ತ ಧಾವಿಸುತ್ತಿದ್ದಾರೆ. ಶ್ರೀಗಳ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಭಕ್ತರು ಕಂಬನಿ ಮಿಡಿಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಕನ್ನಡದ ಸ್ವಾಮೀಜಿ ಖ್ಯಾತಿಯ ಅಲ್ಲಮಪ್ರಭು ಶ್ರೀಗಳು ಇನ್ನಿಲ್ಲ

https://newsfirstlive.com/wp-content/uploads/2023/11/death-2023-11-12T104959.488.jpg

Load More