newsfirstkannada.com

ವಿದ್ಯಾರ್ಥಿಗಳೇ ಹುಷಾರ್.. ಲಕ್ಷ, ಲಕ್ಷ ವಂಚಿಸಿದ ಕಂಪ್ಯೂಟರ್ ಟೀಚರ್‌ ರಾತ್ರೋರಾತ್ರಿ ಎಸ್ಕೇಪ್‌; ಯಾರಿವನು?

Share :

Published August 22, 2024 at 5:20pm

Update August 22, 2024 at 5:36pm

    ಶಬ್ದ ಕಂಪ್ಯೂಟರ್ ಎಜುಕೇಷನ್ ನಡೆಯುತ್ತಿದ್ದ ಟೀಚರ್ ಮೋಸ?

    ಕಂಪ್ಯೂಟರ್ ಸೆಂಟರ್ ಸೇಲ್ ಮಾಡೋದಾಗಿ ಲಕ್ಷ, ಲಕ್ಷ ಸಾಲ

    ಕಂಪ್ಯೂಟರ್ ಸೆಂಟರ್‌ಗೆ ಬೀಗ ಜಡಿದು ರಾತ್ರೋರಾತ್ರಿ ಎಸ್ಕೇಪ್!

ಬೆಂಗಳೂರು: ಕಂಪ್ಯೂಟರ್ ಎಜುಕೇಷನ್ ಸೆಂಟರ್ ತೋರಿಸಿ ಹಲವರಿಂದ ಲಕ್ಷ, ಲಕ್ಷ ಸಾಲ ಮಾಡಿದ ಟೀಚರ್‌ ರಾತ್ರೋರಾತ್ರಿ ಎಸ್ಕೇಪ್ ಆಗಿರುವ ಘಟನೆ ಆನೇಕಲ್‌ ಟೌನ್‌ನಲ್ಲಿ ನಡೆದಿದೆ. ವಿವಿಧ ಕಂಪ್ಯೂಟರ್ ಕೋರ್ಸ್ ಹೆಸರಲ್ಲಿ 120ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಹಣ ಪಡೆದು ಕಂಪ್ಯೂಟರ್ ಎಜುಕೇಷನ್ ನೀಡದೆ ನಾಪತ್ತೆಯಾಗಿದ್ದಾರೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ದಚ್ಚು ಮೀಟ್ ಮಾಡಿದ ರಚ್ಚು.. 3 ಬ್ಯಾಗ್‌ಗಳಲ್ಲಿ ಡಿಂಪಲ್ ಕ್ವೀನ್ ತಂದು ಕೊಟ್ಟಿದ್ದೇನು?

ತಮಿಳುನಾಡು ಕೃಷ್ಣಗಿರಿ ಜಿಲ್ಲೆ ಶಾಮನಾಥಂ ಮೂಲದ ಮುನಿರಾಜು ಎಂಬ ಕಂಪ್ಯೂಟರ್ ಟೀಚರ್ ವಿರುದ್ಧ ಸಾಲು ಸಾಲು ದೂರು ದಾಖಲಾಗುತ್ತಿದೆ. ಕಂಪ್ಯೂಟರ್ ಟೀಚರ್ ಮುನಿರಾಜು ಕಂಪ್ಯೂಟರ್ ಸೆಂಟರ್‌ಗೆ ಬೀಗ ಜಡಿದು ರಾತ್ರೋರಾತ್ರಿ ಎಸ್ಕೇಪ್ ಆಗಿದ್ದಾರೆ.

ಆರೋಪಿ ಮುನಿರಾಜು ಆನೇಕಲ್ ಟೌನ್‌ನಲ್ಲಿ ಶಬ್ದ ಕಂಪ್ಯೂಟರ್ ಎಜುಕೇಷನ್ ಹೆಸರಲ್ಲಿ ಕಂಪ್ಯೂಟರ್ ಕ್ಲಾಸ್ ನಡೆಸ್ತಿದ್ದರು. ತನ್ನ ಕಂಪ್ಯೂಟರ್ ಎಜುಕೇಷನ್ ಕ್ಲಾಸ್ ತೋರಿಸಿ ಹಲವರಿಂದ ಲಕ್ಷಗಟ್ಟಲೇ ಸಾಲ ಪಡೆದಿದ್ದಾರೆ ಎನ್ನಲಾಗಿದೆ. ಕಂಪ್ಯೂಟರ್ ಸೆಂಟರ್ ಕಟ್ಟಡದ ಮಾಲೀಕ ಮುದ್ದುರಾಜ್‌ರಿಗೆ ಹತ್ತು ತಿಂಗಳು ಬಾಡಿಗೆಯನ್ನು ಕೊಟ್ಟಿಲ್ಲವಂತೆ.

ಇದನ್ನೂ ಓದಿ: VIDEO: ಕನ್ನಡಿಗರ ಮನಸು ಗೆದ್ದ ‘ನಾನು ನಂದಿನಿ’ ಖ್ಯಾತಿ ವಿಕಾಸ್ ವಿಕ್ಕಿಪೀಡಿಯ; ಈ ಸಲ ಏನ್ಮಾಡಿದ್ರು? 

ತಮಿಳುನಾಡಿನ ಕಂಪ್ಯೂಟರ್ ಟೀಚರ್ ಮುನಿರಾಜು, ವಕೀಲ ವೇಣುಗೋಪಾಲ್‌ ಎಂಬುವವರಿಗೆ ಕಂಪ್ಯೂಟರ್ ಸೆಂಟರ್ ಸೇಲ್ ಮಾಡೋದಾಗಿ 12 ಲಕ್ಷ ಪಡೆದಿದ್ದರಂತೆ. 120ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ನಾಲ್ಕು ತಿಂಗಳ ಕೋರ್ಸ್ ಹೆಸರಲ್ಲಿ ಹಣ ಪಡೆದು ಮೋಸ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.

ಈ ಕಂಪ್ಯೂಟರ್ ಟೀಚರ್ ವಿರುದ್ಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಹಲವರಿಂದ ದೂರು ದಾಖಲಾಗಿದೆ. ಪೊಲೀಸರು ಶಬ್ದ ಕಂಪ್ಯೂಟರ್ ಎಜುಕೇಷನ್ ನಡೆಯುತ್ತಿದ್ದ ಆರೋಪಿ ಮುನಿರಾಜುಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿದ್ಯಾರ್ಥಿಗಳೇ ಹುಷಾರ್.. ಲಕ್ಷ, ಲಕ್ಷ ವಂಚಿಸಿದ ಕಂಪ್ಯೂಟರ್ ಟೀಚರ್‌ ರಾತ್ರೋರಾತ್ರಿ ಎಸ್ಕೇಪ್‌; ಯಾರಿವನು?

https://newsfirstlive.com/wp-content/uploads/2024/08/Anekal-Cheating-Case-1.jpg

Load More