Advertisment

ಸರ್ಕಾರದಲ್ಲಿ ವರ್ಗಾವಣೆ ದಂಧೆ..? ಇನ್ಸ್‌ಪೆಕ್ಟರ್‌ ಟ್ರಾನ್ಸ್‌ಫರ್‌ಗೆ ಹಣ ಪಡೆದ್ರಾ ಉಮಾಪತಿ..?

author-image
Veena Gangani
Updated On
ಸರ್ಕಾರದಲ್ಲಿ ವರ್ಗಾವಣೆ ದಂಧೆ..? ಇನ್ಸ್‌ಪೆಕ್ಟರ್‌ ಟ್ರಾನ್ಸ್‌ಫರ್‌ಗೆ ಹಣ ಪಡೆದ್ರಾ ಉಮಾಪತಿ..?
Advertisment
  • ಸರ್ಕಾರದಲ್ಲಿ ಎಗ್ಗಿಲ್ಲದೇ ನಡೆಯುತ್ತಿದ್ಯಾ ವರ್ಗಾವಣೆ ದಂಧೆ?
  • ವರ್ಗಾವಣೆಗೆ ಹಣ ನೀಡಿದ್ದಾರೆ ಎನ್ನಲಾದ ಆಡಿಯೋ
  • ಇನ್ಸ್‌ಪೆಕ್ಟರ್‌ ಟ್ರಾನ್ಸ್‌ಫರ್‌ಗೆ ಹಣ ಪಡೆದ್ರಾ ಉಮಾಪತಿ?

ಬೆಂಗಳೂರು: ಪೊಲೀಸ್​ ವರ್ಗಾವಣೆಗೆ ಸಂಬಂಧಿಸಿದಂತೆ ಸ್ಯಾಂಡಲ್​ವುಡ್ ಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರು ಮಾತಾಡಿರೋ ಆಡಿಯೋ ಕ್ಲಿಪ್ ಒಂದು ವೈರಲ್​ ಆಗಿದೆ. ಸಾಮಾಜಿಕ ಕಾರ್ಯಕರ್ತ ವಿಜಯ್ ಡೆನ್ನಿಸ್ ಎಂಬುವವರ ನಡುವೆ ನಡೆದಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರ ವರ್ಗಾವಣೆ ಕುರಿತ ಸಂಭಾಷಣೆಯ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ ಸಾಕಷ್ಟು ಸದ್ದು ಮಾಡುತ್ತಿದೆ.

Advertisment

ಇನ್ನು ಆ ಆಡಿಯೋದಲ್ಲಿ ಹೋಂ ಮಿನಿಸ್ಟರ್​ಗೆ ಹಣ ನೀಡಿದ್ದ ಬಗ್ಗೆ ಪ್ರಸ್ತಾಪಿಸಲಾಗಿದೆ. ಹಣ ತೆಗೆದುಕೊಳ್ಳದೆ ಟ್ರಾನ್ಸ್ ಫರ್​​ಗೆ ಸಾಮಾಜಿಕ ಕಾರ್ಯಕರ್ತರಾದ ವಿಜಯ್ ಬೇಡಿಕೆ ಇಟ್ಟಿದ್ದು, ಆದ್ರೆ ಈಗಾಗಲೇ ಹಣವನ್ನು ಹೋಂ ಮಿನಿಸ್ಟರ್​ಗೆ​ ತಲುಪಿಸಿರುವುದಾಗಿ ಕೈ ನಾಯಕ ಆಡಿಯೋದಲ್ಲಿ ಹೇಳಿದ್ದಾರೆ ಎನ್ನಲಾಗ್ತಿದೆ. ಆದ್ರೆ ಈ ಆಡಿಯೋ ಸತ್ಯಾಸತ್ಯತೆ ತನಿಖೆ ಬಳಿಕ ಹೊರಬರಲಿದೆ.

publive-image

ಇನ್ನು, ಈ ಬಗ್ಗೆ ನ್ಯೂಸ್​ ಫಸ್ಟ್​ನೊಂದಿಗೆ ಮಾತಾಡಿದ ಸಿನಿಮಾ ನಿರ್ಮಾಪಕ ಹಾಗೂ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಗಿದ್ದ ಉಮಾಪತಿ, ಎಐ ತಂತ್ರಜ್ಞಾನ ಬಳಸಿ ನನ್ನ ಧ್ವನಿ ನಕಲು ಮಾಡಿದ್ದಾರೆ. ನಾನು ಯಾವುದೇ ವರ್ಗಾವಣೆ ಬಗ್ಗೆ ಮಾತನಾಡಿಲ್ಲ. ನನ್ನ ಹೆಸರು ಕೆಡಿಸುವ ಕುತಂತ್ರ ಇದು. ಕಾನೂನು ಕ್ರಮ ಕೈಗೊಳ್ತೇನೆ. ಗೃಹಸಚಿವರ ಜೊತೆ ನೇರವಾಗಿ ಸಂಪರ್ಕ ಸಾಧಿಸೋಕ್ಕಾಗುತ್ತಾ? ಅಂತ ಉಮಾಪತಿ ಪ್ರಶ್ನಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment